ಜಾಗತೀಕರಣದ ಇಂದಿನ ವಾತಾವರಣದಲ್ಲಿ ಗ್ಯಾರೇಜ್ ಮಾಲೀಕರು ಮತ್ತು ಕಾರ್ಮಿಕರು ಸವಾಲಿನ ಪರಿಸ್ಥಿತಿಯಲ್ಲಿ ವೃತ್ತಿಯನ್ನು ನಡೆಸುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ದೊರಕುವ ಸರ್ಕಾರಿ ಸೌಲಭ್ಯಗಳ ಮಾಹಿತಿಯ ಕೊರತೆಯಿಂದ ಅವರು ವಂಚಿತರಾಗಿದ್ದಾರೆ. ಅಸಂಘಟಿತ ವರ್ಗಕ್ಕೆ ದೊರಕುವ ಎಲ್ಲ ಸೌಲಭ್ಯಗಳನ್ನು ಗ್ಯಾರೇಜ್ ಕಾರ್ಮಿಕರಿಗೆ ದೊರಕಿಸುವ ನಿಟ್ಟಿನಲ್ಲಿ ಓರ್ವ ಜನಪ್ರತಿನಿಧಿಯಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಉಡುಪಿಯ ಶಾಸಕ ಯಶಪಾಲ್ ಸುವರ್ಣ ಅವರು ನುಡಿದರು.
ಉಡುಪಿಯ ಬೈಲೂರಿನ ಆಶಾನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಆರ್ ರವರು ಕಾರ್ಮಿಕ ಇಲಾಖೆಯ ನಿಯಮ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ಸಂಜೀವ ದೇವಾಡಿಗ ಬೈಂದೂರು, ಆನಂದ್ ಸೇರಿಗಾರ್ ದೊಡ್ಡಣ್ಣಗುಡ್ಡೆ, ಮತ್ತು ರಾಘವೇಂದ್ರ ಆಚಾರ್ಯ ಆದಿ ಉಡುಪಿ ಇವರನ್ನು ಸನ್ಮಾನಿಸಿದರು. ಸಂಘದ ವತಿಯಿಂದ ಆಶಾ ನಿಲಯದ ವಿಕಲಚೇತನ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ಸಂಘದ ಸದಸ್ಯರಿಗೆ ನೂತನವಾಗಿ ನವೀಕರಿಸಿದ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ಅರಿವು, ದೇಶದ ಉಳಿವು: ಮಲ್ಕುಂಡಿ ಮಹಾದೇವಸ್ವಾಮಿ
ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಶ್ರೀ ಕೃಷ್ಣ ಮಠದ ವಕ್ತಾರ ಉಲ್ಲಾಸ್ ಕುಲಕರ್ಣಿ, ಉಡುಪಿ ಕ್ಲಾಸಿಕ್ ಆಟೋಮೋಬೈಲ್ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್, ವಿಮಾ ವಕ್ತಾರ ರವೀಂದ್ರ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ ಮಂಗಳೂರಿನ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಪದಾಧಿಕಾರಿಗಳಾದ ದಿನೇಶ್ ಬಂಗೇರ, ಎಂ ನಾರಾಯಣ್, ತಾಲೂಕು ಅಧ್ಯಕ್ಷರುಗಳಾದ ನಾರಾಯಣ ಆಚಾರ್ ಕುಂದಾಪುರ, ಕೃಷ್ಣಯ್ಯ ಮದ್ದೋಡಿ ಬೈಂದೂರು, ನಾರಾಯಣ ಪೂಜಾರಿ ಬ್ರಹ್ಮಾವರ, ಅಬ್ದುಲ್ ಹಮೀದ್ ಕಾರ್ಕಳ, ಗೌರವ ಸಲಹೆಗಾರರಾದ ಪ್ರಭಾಕರ್ ಕೆ, ಯಾದವ ಶೆಟ್ಟಿಗಾರ್, ಉದಯ್ ಕಿರಣ್, ಜಯ ಸುವರ್ಣ, ಉಪಾಧ್ಯಕ್ಷರಾದ ರಾಜೇಶ್ ಜತ್ತನ್, ವಿನಯ್ ಕುಮಾರ್ ಕಲ್ಮಾಡಿ, ಕೋಶಾಧಿಕಾರಿ ಸಂತೋಷ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ ಸೇರಿದಂತೆ ಇತರರು ಇದ್ದರು.
