ಉಡುಪಿ | ಸಂಸದ ಅನಂತ್ ಕುಮಾರ್ ಹೆಗಡೆ ಮಿನಿ ನಾಗರ: ಪ್ರೊ ಫಣಿರಾಜ್

Date:

Advertisements

ಸಂಸದ ಅನಂತ್ ಕುಮಾರ್ ಹೆಗಡೆ ಮಿನಿ ನಾಗರ, ಆರ್‌ಎಸ್‌ಎಸ್‌ ಘಟ ಸರ್ಪವಾಗಿದೆ. ಅನಂತ್ ಕುಮಾರ್ ಹೇಳಿಕೆ ಆರ್‌ಎಸ್‌ಎಸ್ ಹರಡಿದ ವಿಷ. ಅದನ್ನು ಇವರು ನಾಚಿಕೆಯಿಲ್ಲದೆ ಇಲ್ಲಿ ಹರಡುತ್ತಿದ್ದಾರೆ. 400 ಸೀಟು ಕೊಡಿ ಸಂವಿಧಾನ ಬದಲಾಯಿಸುತ್ತೇವೆಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಬಿಜೆಪಿಗೆ ಕೊಡುವ ಒಂದೊಂದು ವೋಟು ಆರ್‌ಎಸ್‌ಎಸ್‌ಗೆ ಬಲ ಬಂದಂತಾಗುತ್ತದೆ ಎಂದು ಪ್ರೊ ಫಣಿರಾಜ್ ಹೇಳಿದರು.

ಉಡುಪಿ‌ ಜಿಲ್ಲೆಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳಿಂದ ಸಂಸದ ಅನಂತ್ ಕುಮಾ‌ರ್ ಹೆಗಡೆಯ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಅಜ್ಜರಕಾಡಿನ ಹುತಾತ್ಮಸ್ಮಾರಕ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಅನಂತ್‌ ಕುಮಾರ್‌ ವಿರುದ್ಧ ಪ್ರತಿಭಟನೆ 1 1ಅನಂತ್‌ ಕುಮಾರ್‌ ವಿರುದ್ಧ ಪ್ರತಿಭಟನೆ 2ಅನಂತ್‌ ಕುಮಾರ್‌ ವಿರುದ್ಧ ಪ್ರತಿಭಟನೆ 3ಅನಂತ್‌ ಕುಮಾರ್‌ ವಿರುದ್ಧ ಪ್ರತಿಭಟನೆ 4

“ಸಿಟಿ ರವಿ ʼಭಾರತವನ್ನು ಗಣರಾಜ್ಯ ಎನ್ನುವವರು ದೇಶದ್ರೋಹಿʼಗಳೆಂದು ಹೇಳಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾನೆ. ಮೊದಲು ಸಿಟಿ ರವಿಗೆ ಧಿಕ್ಕಾರ ಹೇಳಬೇಕು. ಅಂಬೇಡ್ಕ‌ರ್ ಪ್ರತಿಮೆ ಮುನ್ನವೇ “ಮನು ಪ್ರತಿಮೆ” ಸ್ಥಾಪಿಸಿ ಅವರು ಅವಮಾನ ಮಾಡಿದ್ದಾರೆ. ಬಿಜೆಪಿಗೆ ಹಾಕುವ ಒಂದೊಂದು ವೋಟು ಮಿನಿ ಸರ್ಪಗಳು ಬೀದಿಯಲ್ಲಿ ಹರಿದಾಡುವಂತೆ ಮಾಡುತ್ತವೆ” ಎಂದು ಹೇಳಿದರು.

Advertisements

ಸುಂದರ್ ಮಾಸ್ತರ್, ಮಂಜುನಾಥ್ ಗಿಳಿಯಾರ್, ಸಂವರ್ತ್ ಸಾಹಿಲ್, ಬಾಲಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ ಸೇರಿದಂತೆ ಹಲವು ಮಂದಿ ಮಾತನಾಡಿದರು.

ಪ್ರತಿಭಟನೆಯ ಕೊನೆಯಲ್ಲಿ ಅನಂತ್ ಕುಮಾ‌ರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ ಬೆಂಕಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹ

ಉಡುಪಿ ಕ್ಯಾಥಲಿಕ್ ಸಭಾ ಮಾಜಿ ಅಧ್ಯಕ್ಷೆ ಮೇರಿ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಇರ್ಷಾದ್ ನೇಜಾರ್, ವೆರೋನಿಕಾ ಕರ್ನೆಲಿಯೋ, ಶ್ಯಾಮರಾಜ್ ಬಿರ್ತಿ, ಸುಂದ‌ರ್ ಮಾಸ್ತ‌ರ್, ಬಾಲಕೃಷ್ಣ ಶೆಟ್ಟಿ, ಕವಿರಾಜ್, ಸಾಲಿಡಾರಿಟಿ ಯೂತ್ ಮೂಲ್ಕೆಂಟ್’ನ ನಬೀಲ್ ಗುಜ್ಜರ್ ಬೆಟ್ಟು, ಅಝೀಝ್ ಉದ್ಯಾವರ, ಜಿ ಎಂ ಶರೀಫ್, ಮಂಜುನಾಥ್ ಬಾಳ್ಳುದ್ರು, ನಾಗೇಶ್ ಉದ್ಯಾವರ, ಎಸ್ನೊ ಆಯಾನ್ ಮಲ್ಪೆ, ಬರಹಗಾರ ಸಂವರ್ತ್ ಸಾಹಿಲ್ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

Download Eedina App Android / iOS

X