ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಜೂನ್12 ರಿಂದ 15ರ ವರೆಗೆ “ರೆಡ್ ಅಲರ್ಟ್’ ಘೋಷಿಸಿದೆ.
ರಾಜ್ಯ ಕರಾವಳಿಗೆ ಜೂನ್ ಮೊದಲ ವಾರದಲ್ಲಿ ಪ್ರವೇಶ ಪಡೆಯುವ ಮುಂಗಾರು ಈ ಬಾರಿ ವಾಡಿಕೆಗಿಂತ ಎರಡು ವಾರದ ಮುಂಚಿತವಾಗಿ ಮೇ 24ರಂದೇ ಪ್ರವೇಶ ಪಡೆದಿತ್ತು. ಬಳಿಕ ಕೆಲ ದಿನಗಳ ಕಾಲ ಪ್ರಬಲಗೊಂಡ ಮುಂಗಾರು ಸದ್ಯ ಕ್ಷೀಣಗೊಂಡಿದೆ. ಇದೀಗ ಮತ್ತೆ ಬಿರುಸು ಪಡೆಯುವ ಸಾಧ್ಯತೆ ಇದ್ದು ನಾಲ್ಕು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ನೆಲೆಸಿದ್ದು ಅಲ್ಲಲ್ಲಿ ಮಳೆಯಾಗಿದೆ. ಮಧ್ಯಾಹ್ನ ನಂತರ ಮಳೆ ಬಿರುಸು ಪಡೆದಿದೆ.