ಉಡುಪಿ ಜಿಲ್ಲೆಯ ನೇಜಾರುವಿನ ತೃಪ್ತಿ ನಗರದಲ್ಲಿ ಭಾನುವಾರ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ಎಸ್‌ಪಿ ಅರುಣ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಿದೆ.
ಕೌಟುಂಬಿಕ ಕಾರಣ, ಪೂರ್ವದ್ವೇಷ ಅಥವಾ ವ್ಯವಹಾರ ಮತ್ತಿತರ ಆಯಾಮಗಳಲ್ಲಿ ಈ ತಂಡಗಳು ತನಿಖೆ ನಡೆಸಲಿವೆ. ಮೃತ ಕುಟುಂಬದ ಓರ್ವ ಸದಸ್ಯ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಇಬ್ಬರು ಯುವತಿಯರೂ ಉದ್ಯೋಗದಲ್ಲಿದ್ದಾರೆ. ಮನೆಯ ಯಜಮಾನ ನೂರ್ ಮುಹಮ್ಮದ್ ವಿದೇಶದಲ್ಲಿ ಉದ್ಯೋಗದಲ್ಲಿದ್ದರು.
ಸಂತೆಕಟ್ಟೆ ಜಂಕ್ಷನ್, ಕರಾವಳಿ ಜಂಕ್ಷನ್‌ನಲ್ಲಿ ಆರೋಪಿ ಓಡಾಡಿದ್ದು, ಅಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಆರೋಪಿಯನ್ನು ಕೊಲೆ ನಡೆದ ಮನೆಗೆ ಬಿಟ್ಟ ಆಟೋ ಚಾಲಕನ ಬಳಿಯೂ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಫೋಟೋ ಕಳಿಸಿಲ್ಲವೆಂದು ಯುವಕನನ್ನೇ ಕೊಂದ ದುಷ್ಕರ್ಮಿಗಳ ಗುಂಪು
ಕೊಲೆಯಾದ ಕುಟುಂಬದ ಸದಸ್ಯರು ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿಯೂ ಪೊಲೀಸರು ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ. ಎಲ್ಲ ಆಯಾಮಗಳಲ್ಲಿಯೂ ಶೀಘ್ರವೇ ತನಿಖೆ ನಡೆಸಿ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಉಡುಪಿ ಎಸ್‌ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ.