ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು: ಭಯಭೀತರಾಗಿ ಎದ್ದುಬಿದ್ದು ಓಡಿದ ಪ್ರೇಕ್ಷಕರು

Date:

ಮಹಾರಾಷ್ಟ್ರ ರಾಜ್ಯದ ಮಾಲೆಗಾಂವ್ ಪ್ರದೇಶದಲ್ಲಿನ ಮೋಹನ್‌ ಚಿತ್ರಮಂದಿರದಲ್ಲಿ ಟೈಗರ್ 3 ಸಿನಿಮಾ ಪ್ರದರ್ಶನ ನಡೆಯುವಾಗ ಏಕಾಏಕಿ ಕೆಲ ಅಭಿಮಾನಿಗಳು ಪಟಾಕಿ ಹಚ್ಚಿದ್ದು ಥಿಯೇಟರ್ ಒಳಗೆ ಬೆಂಕಿ ಕಿಡಿ ಎಲ್ಲೆಂದರಲ್ಲಿ ಹರಡಿದೆ.

ಪಟಾಕಿಯ ಸಿಡಿತದಿಂದ ಜನರು ಹೆದರಿದ್ದು, ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಚಿತ್ರಮಂದಿರ ತುಂಬಿದ್ದಾಗಲೇ ಕೆಲವು ಕಿಡಿಗೇಡಿಗಳು ಈ ರೀತಿಯಾಗಿ ಪಟಾಕಿ ಹಚ್ಚಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೆಗಾಂವ್ ಪೊಲೀಸರು ಇಬ್ಬರನ್ನು ಬಂಧಿಸಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಯವಿಟ್ಟು ಬಿಟ್ಟುಬಿಡಿ, ನನಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ಅಂಗಲಾಚಿದರೂ ಅತ್ಯಾಚಾರವೆಸಗಿದ ರಾಕ್ಷಸರು

ಕೇವಲ ಮಾಲೆಗಾಂವ್‌ನಲ್ಲಿ ಮಾತ್ರವಲ್ಲದೆ, ದೇಶದಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಸಲ್ಮಾನ್ ಖಾನ್ ಅಭಿಮಾನಿಗಳು ಚಿತ್ರಮಂದಿರದ ಒಳಗಡೆ ಪಟಾಕಿ ರಾಕೆಟ್ ಸಿಡಿಸಿ ಸಂಭ್ರಮಿಸಿ ಇತರ ಪ್ರೇಕ್ಷಕರ ಸಿಟ್ಟಿಗೆ ಕಾರಣರಾಗಿದ್ದಾರೆ.

ಇಂತಹ ಘಟನೆಗಳ ಬಗ್ಗೆ ಸಲ್ಮಾನ್ ಕೂಡ ಅಸಹನೆ ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ಮನವಿ ನೀಡಿದ್ದಾರೆ.

ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಭೂಮಿಕೆಯ ‘ಟೈಗರ್ 3’ ಚಿತ್ರ ನವೆಂಬರ್ 12 ರಂದು ಬಹು ಭಾಷೆಗಳಲ್ಲಿ ತೆರೆ ಕಂಡಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 44 ಕೋಟಿ ರೂ. ಗಳಿಸಿದೆ.

 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...