ಇಂದಿನ ಯುವ ಸಮುದಾಯ ನಟನೆಯ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇಪ್ಪತ್ತೊಂದನೇ ಶತಮಾನ ಯುವ ಜನಾಂಗದ ಶತಮಾನ, ಯುವಕರಿಗೆ ಸಂವಹನದ ಅಗತ್ಯವಿದೆ. ತನಗೆ ಅನಿಸಿದ್ದನ್ಬು ತಾನು ಮತ್ತಿಬ್ಬರಿಗೆ ಶಾಂತ ರೀತಿಯಲ್ಲಿ ತಿಳಿಸುವ ಅಗತ್ಯತೆ ಇದೆ. ಇಂದು ಸಂವಹನದ ಸಮಸ್ಯೆಯಿಂದ ಜಗಳಗಳು ನಡೆಯುತ್ತಿದೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ರವರು ಹೇಳಿದರು.
ಅವರು ಉಡುಪಿಯ ಕಲ್ಯಾಣಪುರದ ಮಿಲಾಗ್ರೀಸ್ ಕಾಲೇಜಿನಲ್ಲಿ ಯಕ್ಷ ರಂಗಾಯಣ, ಕಾರ್ಕಳ, ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನದ ರಂಗಭಾಷೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾಟಕದ ಭಾಷೆಯನ್ನು ಕಲಿತು ಸಂವಹನ ನಡೆಸುವುದು ಬಹಳ ಮುಖ್ಯ, ಹೃದಯದ ಭಾಷೆಯನ್ನು ಶಾಂತ ಚಿತ್ತ ರೀತಿಯಲ್ಲಿ ತೋರಿಸುವುದೇ ಸಂವಹನ ಮಾಧ್ಯಮ ಅದನ್ನೆ ನಾಟಕ ನಮಗೆ ಕಲಿಸಿಕೊಡುತ್ತದೆ. ಸಂಪೂರ್ಣ ಸಾಮರಸ್ಯ ಇಲ್ಲದ ಕಾಲದಲ್ಲಿ ಸಾಮರಸ್ಯ ಅಗತ್ಯತೆ ಇದೆ. ಅದನ್ನು ರಂಗಭಾಷೆಯಲ್ಲಿ ಪರಿಚಯ ಪಡಿಸುವುದು ಕಾಲದ ಅವಶ್ಯ ಎಂದು ಹೇಳಿದರು.
ಯಕ್ಷ ರಂಗಾಯಣ ಕಾರ್ಕಳ ನಿರ್ದೇಶಕರಾದ ಬಿ ಆರ್ ವೆಂಕಟರಮಣ ಐತಾಳ್ ಮಾತನಾಡಿ, ರಂಗಾಯಣ ಸಮಾಜದ ನಡುವೆ ರಂಗ ಚಟುವಟಿಕೆ ಬಗ್ಗೆ ಯುವಕರಲ್ಲಿ ಮತ್ತು ಮಕ್ಕಳಲ್ಲಿ ನಾಟಕದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ರಂಗ ಕಮ್ಮಟ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಯುವ ಜನಾಂಗದ ಮನಸ್ಸು ಕೆಡಿಸುವ ಕೆಲಸ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ರಂಗ ಭೂಮಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಚಿಂತಾಮಣಿ | ಶ್ರೀಗಂಧ ಅಕ್ರಮ ದಾಸ್ತಾನು; ಇಬ್ಬರ ಬಂಧನ
ಪ್ರಾಂಶುಪಾಲರು ವಿಲ್ಸಂಟ್ ಆಳ್ವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಟರು ಮತ್ತು ನಿರ್ದೇಶಕರು ಮಂಡ್ಯ ರಮೇಶ್, ಶಶಿಧರ್ ಭಾರಿಘಾಟ್, ರಂಗ ನಿರ್ದೇಶಕಿ ಶ್ವೇತ ರಾಣಿ, ಯಕ್ಷ ರಂಗಾಯಣ ಕಾರ್ಯದರ್ಶಿ ಪೂರ್ಣಿಮಾ, ರಾಜಗೋಪಾಲ್ ಬಲ್ಲಾಳ್, ಬಾಸ್ಕರ್ ರಾವ್ ಕಿದಿಯೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಪ್ರಕಾಶ್ ಕೆತ್ಲಾಯ ಸ್ವಾಗತಿಸಿ, ನಿರೂಪಿಸಿದರು.
