ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮೊಂದಿಗಿದೆ. ಅದನ್ನು ಬುಡಮೇಲು ಮಾಡಿ ಕೇವಲ ಮಾತ್ರ ಪ್ರಜಾಪ್ರಭುತ್ವ ಇರಬೇಕು ಎನ್ನುವ ಶಕ್ತಿಗಳು ನಮ್ಮೊಳಗಿವೆ. ಆ ಶಕ್ತಿಗಳು ಸಂವಿಧಾನವನ್ನು ತೆಗೆದು ಸರ್ವಾಧಿಕಾರಿ ಆಡಳಿತ ತರಲು ಯತ್ನಿಸುತ್ತಿವೆ. ಅಂತಹ ಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ, ಸಂವಿಧಾನವನ್ನು ರಕ್ಷಿಸಿಕೊಳ್ಳುವ ಧ್ಯೇಯ ನಮ್ಮಲ್ಲಿರಬೇಕು ಎಂದು ಪ್ರಗತಿಪರ ಚಿಂತಕ ಫಣಿರಾಜ್ ಹೇಳಿದ್ದಾರೆ.
ಉಡುಪಿಯಲ್ಲಿ ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ ಕ್ರಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ – ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರದಲ್ಲಿ ಸಭೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ ಕೆ.ಶಂಕರ್, ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಜಿಲ್ಲಾ ಖಜಾಂಚಿ ಶಶಿಧರ ಗೋಲ್ಲ,ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಶೇಖರ್ ಬಂಗೇರ,ದಯಾನಂದ ಸಿಐಟಿಯು ಉಡುಪಿ ಸಂಚಾಲಕರಾದ ಕವಿರಾಜ್. ಎಸ್, ಸಹಸಂಚಾಲಕರಾದ ಉಮೇಶ್ ಕುಂದರ್, ಬ್ರಹ್ಮವಾರ ತಾಲೂಕು ಸಂಚಾಲಕರಾದ ರಾಮ ಕಾರ್ಕಡ, ಸಹಸಂಚಾಲಕರಾದ ಸುಭಾಸ್ ನಾಯಕ್ ರೈತ ಸಂಘದ ಮುಖಂಡರಾದ ಚಂದ್ರಶೇಖರ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷರಾದ ಸರೋಜ, ಬೀಡಿ ಸಂಘ ದ ಮುಖಂಡರ ನಳಿನಿ, ಡಿ.ಗಿರಿಜ, ಬಲ್ಕೀಸ್, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ಜಿಲ್ಲಾ ಮುಖಂಡರಾದ ಸದಾಶಿವ ಪೂಜಾರಿ, ವಿಶ್ವನಾಥ. ಕೆ, ಬುದ್ಯ, ಅದಮಾರು ಶ್ರೀ ಪತಿಆಚಾರ್ಯ, ಮುರಳಿ, ರಮೇಶ್, ಮೋಹನ್, ರವಿ.ಯಂ ಇದ್ದರು.