ಮಲ್ಲಾರು ಯುವಕ ಮಂಡಲ (ರಿ.) ಮಲ್ಲಾರು ಇದರ 2026–2028ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್, ಉಪಾಧ್ಯಕ್ಷರಾಗಿ ಉಮೇಶ್ ಕರ್ಕೇರಾ, ಕಾರ್ಯದರ್ಶಿಯಾಗಿ ಸತೀಶ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಹಸನ್ ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಅಲಿ ಮನಿಯಾರಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಭಂಡಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಸನಾವರ್ ಶೇಖ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಣ್ಣಪ್ಪ ಅವರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಇಮ್ರಾನ್ ಹುಸೈನ್ ಬ್ಯಾರಿ, ನಾರಾಯಣ, ಅಬ್ದುಲ್ ಸತ್ತಾರ್ ಚಾಂದ್, ಜಮಾಲ್, ಸುಜಿತ್ ಶೆಟ್ಟಿಗಾರ್, ಸುಮೀರ್, ಗುರುಮೂರ್ತಿ, ಮೊಯಿದಿನ್ ಹಾಗೂ ಮುಬಾರಕ್ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಯುವಕ ಮಂಡಲದ ನೂತನ ಕಟ್ಟಡ ನಿರ್ಮಾಣದ ನಿರ್ಧಾರ ಕೈಗೊಳ್ಳಲಾಗಿದ್ದು, ಕಟ್ಟಡ ಸಮಿತಿಯ ಸಂಚಾಲಕರಾಗಿ ಶಕ್ತಿ ವೇಲು ಹಾಗೂ ನಸೀರ್ ಅಹಮದ್ ಎಕ್ಕಾವನ್ ಅವರನ್ನು ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳಿಗೆ ಸದಸ್ಯರು ಶುಭ ಹಾರೈಸಿದರು.






