ಸೀರತ್ ಅಭಿಯಾನ: ಉಡುಪಿಯಲ್ಲಿ ಪ್ರವಾದಿ ಸಂದೇಶ ಸಾರುವ ಬಿತ್ತಿಪತ್ರಗಳ ಪ್ರದರ್ಶನ

Date:

ಜಮಾಅತೆ ಇಸ್ಲಾಮೀ ಹಿಂದ್‌ ಉಡುಪಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್‌ (ಸ) ಸೀರತ್‌ ಅಭಿಯಾನದ ಅಂಗವಾಗಿ ಇಂದು ನಗರದ ಅಜ್ಜರಕಾಡು ಭುಜಂಗ ಪಾರ್ಕ್‌ ನಲ್ಲಿ ಪ್ರವಾದಿ ಮುಹಮ್ಮದ್‌ (ಸ) ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಬಿತ್ತಿಪತ್ರಗಳನ್ನು ಸಾರ್ವಜನಿಕರ ಗಮನ ಸೆಳೆಯುವ ರೀತಿಯಲ್ಲಿ ಪ್ರದರ್ಶಿಸಲಾಯಿತು.

- Advertisement -
WhatsApp Image 2026 09 06 at 8.44.26 PM

ಪ್ರವಾದಿ ಮುಹಮ್ಮದ್‌ (ಸ) ಅವರ ಜೀವನಾದರ್ಶಗಳು, ಸೌಹಾರ್ದತೆ, ಸಹೋದರತೆ, ಕರುಣೆ, ನ್ಯಾಯ, ಮಾನವೀಯತೆ ಹಾಗೂ ಶಾಂತಿಯ ಸಂದೇಶಗಳನ್ನು ಸಮಾಜದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಬಿತ್ತಿಪತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿವಿಧ ಸಂದೇಶಗಳನ್ನು ಒಳಗೊಂಡ ಬಿತ್ತಿಪತ್ರಗಳ ಮೂಲಕ ಪ್ರವಾದಿಯವರ ಜೀವನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

ಈ ಕುರಿತು ಅಭಿಯಾನದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮುಶೀರ್‌ ಶೇಕ್‌ ಮಾತನಾಡಿ, ಸೀರತ್‌ ಅಭಿಯಾನದ ಮೂಲಕ ಪ್ರವಾದಿ ಮುಹಮ್ಮದ್‌ (ಸ) ಅವರ ಬದುಕು ಮತ್ತು ಬೋಧನೆಗಳನ್ನು ಸಮುದಾಯದಾಚೆಗೂ ಪರಿಚಯಿಸುವುದು, ಪರಸ್ಪರ ಗೌರವ, ಸಹಬಾಳ್ವೆ ಹಾಗೂ ಸಾಮಾಜಿಕ ಸೌಹಾರ್ದತೆಯ ಮಹತ್ವವನ್ನು ಸಾರುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

WhatsApp Image 2026 09 06 at 8.44.27 PM

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ ಉಡುಪಿ ಘಟಕದ ಅಧ್ಯಕ್ಷ ನಿಸಾರ್‌ ಅಹಮದ್, ಅಬ್ದುಲ್‌ ಅಝೀಜ್, ಮನ್ಸೂರ್‌ ಅಹಮದ್‌, ರಹೀಸ್‌ ಅಹಮದ್‌, ಜಿಯಾ ಉರ್ರೆಹಮಾನ್‌ ನವೀದ್‌ ಇಂದ್ರಾಳಿ ಸೇರಿದಂತೆ ಚಿಲ್ಡ್ರನ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ (CIO)ನ ಮಕ್ಕಳು ಹಾಗೂ ಜಮಾಅತೆ ಇಸ್ಲಾಮೀ ಹೀಂದ್‌ ನ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಸೀರತ್‌ ಅಭಿಯಾನದ ಅಂಗವಾಗಿ ಮುಂದಿನ ದಿನಗಳಲ್ಲಿಯೂ ಪ್ರವಾದಿ ಮುಹಮ್ಮದ್‌ (ಸ) ಅವರ ಜೀವನ ಸಂದೇಶ, ಮಾನವೀಯತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಜನರಿಗೆ ತಲುಪಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

WhatsApp Image 2026 09 06 at 8.44.28 PM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಭೀಕರ ರಸ್ತೆ ಅಪಘಾತ: ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರನ ಪುತ್ರ ಮಲ್ಲು ವಜ್ಜಲ್‌ಗೆ ಗಂಭೀರ ಗಾಯ

ಲಿಂಗಸುಗೂರು ತಾಲೂಕಿನ ಹೊನ್ನಹಳ್ಳಿ ಗ್ರಾಮದ ಸಮೀಪ ಬುಧವಾರ ಸಂಭವಿಸಿದ ಭೀಕರ ರಸ್ತೆ...

ಉಡುಪಿ | ‘ದ ಒರಿಜಿನಲ್ ಆಭರಣ ಜುವೆಲ್ಲರ್ಸ್’ ನವೀಕೃತ ಶೋರೂಂ ಲೋಕಾರ್ಪಣೆ

ಉಡುಪಿ ನಗರದ ಹೃದಯ ಭಾಗದಲ್ಲಿರುವ ಸಿಬಿ ರಸ್ತೆಯಲ್ಲಿ 1935 ರಲ್ಲಿ ಆರಂಭಗೊಂಡಿದ್ದ...

ವಿಜಯಪುರ |ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರ ಬದುಕಿಗೆ ಬೆಳಕಾದ ಎಂ.ಎಸ್. ಖೇಡ: 10ನೇ ಪುಣ್ಯಸ್ಮರಣೆ

ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರಿಗೆ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ವಿಜಯಪುರ...

ಹಾಸನ | ಅಕ್ರಮ ಪೋಡಿ ದುರಸ್ತಿ: ರದ್ದು ಪಡಿಸಲು ನ್ಯಾಯಾಲಯ ಆದೇಶ 

ಸಕಲೇಶಪುರ ತಾಲೂಕಿನ ಸರ್ವೆಯರ್ ಹಾಗೂ ಸೂಪರ್‌ವೈಸರ್ ಸೇರಿ ಅಕ್ರಮವಾಗಿ ಕಿರುಹುಣಸೆ ಗ್ರಾಮದ...