ಹಸಿವು ಮುಕ್ತ, ಭಯ ಮುಕ್ತ ಸ್ವಾತಂತ್ರ್ಯ ಎಂಬ ಧ್ಯೇಯವಾಕ್ಯವಾಗಿದೆ. ಸಮಾಜವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ರಕ್ಷಿಸಿ, ಪ್ರತಿಯೊಬ್ಬ ಪ್ರಜೆಗೂ ಹಸಿವು, ಭಯ ಮುಕ್ತ ಸ್ವಾತಂತ್ರ್ಯ ನೀಡಲು ಪಕ್ಷವು ದುಡಿಯುತ್ತಿದೆ ಎಂದು ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಪದು ತೊನ್ಸೆ ಗ್ರಾಮದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.”ಬಿಜೆಪಿಯ ಫ್ಯಾಸಿಸ್ಟ್ ಅಜೆಂಡಾವನ್ನು ಮಣಿಸಬೇಕು” ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಪಕ್ಷದ ಮುಖಂಡ ಅಥಾವುಲ್ಲಾ ಜೋಕಟ್ಟೆ ಮಾತನಾಡಿ, “ಫ್ಯಾಸಿಸ್ಟ್ ಅಜೇಂಡಾವನ್ನು ಇಟ್ಟುಕೊಂಡು ರಾಜಕೀಯ ನಡೆಸುವ ಪಕ್ಷಗಳ ಮತ್ತು ಕೇವಲ ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಪಕ್ಷಗಳ ಬಗ್ಗೆ ನಾವು ಎಚ್ಚರಿಕೆವಹಿಸಬೇಕು” ಎಂದು ಹೇಳಿದ್ದಾರೆ.
ಸಭೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಾದ ಶಾಹಿದ್ ಆಲಿ, ಇಮ್ತಿಯಾಜ್ ಹೂಡೆ, ಅಲ್ತಾಫ್ ಹೂಡೆ ಇದ್ದರು.
ವರದಿ: ಅಫ್ರೋಝ್ ಕಾಪ್ತಿ, ಮೀಡಿಯಾ ವಾಲಂಟಿಯರ್