ಉಡುಪಿ ನಗರದ ಹೃದಯ ಭಾಗದಲ್ಲಿರುವ ಸಿಬಿ ರಸ್ತೆಯಲ್ಲಿ 1935 ರಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿಯ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಈ ನವೀಕೃತ ಶೋರೂಂ ಬುಧವಾರದಿಂದ ಪುನಾರಂಭಗೊಂಡಿದೆ. ಆಭರಣ ಜುವೆಲ್ಲರ್ಸ್‌ನ ಗ್ರಾಹಕರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಶೋರೂಂಯನ್ನು ಲೋಕಾರ್ಪಣೆಗೊಳಿಸಲಾಯಿತು.

ಆಭರಣ ಜುವೆಲ್ಲರ್ಸ್ ಪೈ.ಲಿ. ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಸುಮಾರು 9 ದಶಕಗಳಿಗೂ ಹೆಚ್ಚು ಕಾಲ ಸಂಸ್ಥೆಯ ಇತಿಹಾಸ ಹಾಗೂ ಗುರುತಿನೊಂದಿಗೆ ಬೆಸೆದುಕೊಂಡಿದೆ. ಈ ಶೋರೂಂ ಸಂಸ್ಥೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ದೀಪ ಪ್ರಜ್ವಲನೆ: ಆಭರಣ ಜುವೆಲ್ಲರ್ಸ್‌ನ ನವೀಕೃತ ಶೋರೂಂ ಯನ್ನು ಗೀತಾ ಪೈ, ಸುಮನಾ ಪ್ರಭು, ಶಾಲಿನಿ ಜಿ. ಶಂಕರ್, ಸಂಧ್ಯಾ ಪೈ, ರೋಹಿಣಿ ಶೆಣೈ, ನಟಿ ಅಂಕಿತ್ ಅಮರ್, ಲತಾ ಹೆಗ್ಡೆ, ಗೀತಾ ಹೆಗ್ಡೆ ಹಾಗೂ ಆಭರಣ ಜುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಎಸ್. ಕಾಮತ್ ಅವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿದರು.
ಮುಖ್ಯ ಅತಿಥಿಗಳು, ಗಣ್ಯರು, ಹಿತೈಷಿಗಳು, ಗ್ರಾಹಕರು ಸಂಸ್ಥೆ ಇನ್ನಷ್ಟು ಏಳಿಗೆಯನ್ನು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಆಭರಣ ಜುವೆಲ್ಲರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್, ನಿರ್ದೇಶಕರಾದ ಮಹೇಶ್ ಎಂ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್, ಡಾ. ಅರುಣ್ ಕುಡ್ಡ, ಕ್ಷಮಾ ಕುಡ್ಡ, ಸಾತ್ವಿಕ್ ಎಸ್. ಕಾಮತ್, ಆಕರ್ಷ್ ಎಂ. ಕಾಮತ್, ಶ್ಲೋಕಾ ಕಾಮತ್, ಆದಿತ್ರಿ ಕಾಮತ್, ಮಾಯಾ ಮತ್ತು ಗಿರಿಧರ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಚಿನ್ನಾಭರಣಗಳ ವಿಫುಲ ಸಂಗ್ರಹ:
ಆಭರಣ ಜುವೆಲ್ಲರ್ಸ್‌ನ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಹೊಸ ಲುಕ್ ನೀಡಲಾಗಿದೆ. ಈ ನವೀಕೃತ ಮಳಿಗೆಯು ಎರಡು ಮಹಡಿಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವವನ್ನು ನೀಡಲಿದೆ. ಬ್ರಾಂಡ್‌ನ ವೈವಿಧ್ಯಮಯ ಆಭರಣ ಶ್ರೇಣಿಗಳ ಪ್ರತ್ಯೇಕ ವಿಭಾಗಗಳಿದ್ದು, ನೆಲ ಮಹಡಿಯಲ್ಲಿವೆಡ್ಡಿಂಗ್ ಕಲೆಕ್ಷನ್, ಹೆರಿಟೇಜ್ ಹಾಗೂ ಜೆಮ್‌ಸ್ಟೋನ್ ವಿಭಾಗಗಳಿವೆ. ಚಿನ್ನಾಭರಣಗಳ ವಿಫುಲ ಸಂಗ್ರಹವಿದ್ದು, ತಮ್ಮ ನೆಚ್ಚಿನ ಆಭರಣಗಳನ್ನು ಖರೀದಿಸಬಹುದಾಗಿದೆ. ಮೊದಲ ಮಹಡಿಯಲ್ಲಿ ಪ್ರಿಟ್ಟಿ, ನಿಯೋಲೈಟ್ ಮತ್ತು ಕಾಂಟೆಂಪರರಿ (ಸಮಕಾಲೀನ) ಕಲೆಕ್ಷನ್‌ಗಳಿವೆ.

ವೆಡ್ಡಿಂಗ್, ರೂಬಿ, ಹೆರಿಟೇಜ್ ಸಹಿತ ನಾನಾ ವಿಭಾಗಗಳ ಉದ್ಘಾಟನೆ:
ವೆಡ್ಡಿಂಗ್ ಕಲೆಕ್ಷನ್ ವಿಭಾಗವನ್ನು ಉದ್ಯಮಿ ಪುರುಷೋತ್ತಮ್ ಪಿ. ಶೆಟ್ಟಿ, ರೂಬಿ ವಿಭಾಗವನ್ನು ರಂಜನಾ ಶೆಟ್ಟಿ, ಸಾಂಪ್ರದಾಯಿಕ ಆಭರಣ ವಿಭಾಗವನ್ನು ಡಾ. ಭಾರ್ಗವಿ ಐತಾಳ್, ಹೆರಿಟೇಜ್ ವಿಭಾಗವನ್ನು ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಸಮಕಾಲೀನ ವಿಭಾಗವನ್ನು (ಕಾಂಟೆಂಪರರಿ) ವಿಮಲಾ ನಾಯಕ್, ನಿಯೋಲೈಟ್ ವಿಭಾಗವನ್ನು ಸತೀಶ್ ಪೈ ಉದ್ಘಾಟಿಸಿ, ನಿಯೋಲೈಟ್ ಆಭರಣಗಳನ್ನು ಶೋಭಾ ಸುಖಾನಂದ ಶೆಣೈ, ಮಹಾರಾಷ್ಟ್ರ ಶೈಲಿಯ ಆಭರಣ ವಿಭಾಗವನ್ನು ಉದ್ಯಮಿ ಕೋಮಲ್ ಪ್ರಭು, ದೀಪಾ ಪೈ, ಮೀನಾ ಲಕ್ಷ್ಮಣಿ ಹಾಗೂ ಪ್ರಿಟ್ಟಿ ಕಲೆಕ್ಷನ್ ಯನ್ನು ವಿಜಯಲಕ್ಷ್ಮೀ ಸೂಡಾ ಅವರು ಅನಾವರಣಗೊಳಿಸಿದರು.
ಉಡುಪಿಯ ಸಿ.ಬಿ. ರಸ್ತೆಯ ಏಕೈಕ ಶೋರೂಂನಿಂದ ಆರಂಭವಾದ ದ ಒರಿಜಿನಲ್ ಆಭರಣ ಸಂಸ್ಥೆಯ ಅಧ್ಯಕ್ಷ ಮಧುಕರ್ ಎಸ್. ಕಾಮತ್ ಅವರ ದೂರದೃಷ್ಟಿಯಿಂದ ಕರ್ನಾಟಕ ಮತ್ತು ಗೋವಾದ ಎಂಟು ಜಿಲ್ಲೆಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದೆ.
ಆಭರಣ ಜುವೆಲ್ಲರ್ಸ್ ಪೈ.ಲಿ. ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್ ಮಾತನಾಡಿ. ಸಿ.ಬಿ. ರಸ್ತೆಯ ಮಳಿಗೆಯು ಹೊಸ ರೂಪದಲ್ಲಿ ಸಂಭ್ರಮದಿಂದ ಪುನರಾರಂಭಗೊಂಡಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಇದು ತಲೆಮಾರುಗಳಿಂದ ಉಡುಪಿಯ ವಾಣಿಜ್ಯ ಮತ್ತು ಸಾಂಸ್ಕೃತಿಕ ಒಡನಾಟದ ಭಾಗವಾಗಿದೆ. ನಮ್ಮ ಗ್ರಾಹಕರು ಮತ್ತು ಹಿತೈಷಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.
ಆಭರಣ ಜುವೆಲ್ಲರ್ಸ್ ಪೈ.ಲಿ. ನಿರ್ದೇಶಕ ಮಹೇಶ್ ಎಂ. ಕಾಮತ್ ಮಾತನಾಡಿ, ಆಭರಣ ಕಲೆಕ್ಷನ್‌ಗಳಿಗೆ ಹೆಚ್ಚಿನ ವಿಶಿಷ್ಟತೆಯನ್ನು ನೀಡಲು ಮತ್ತು ಗ್ರಾಹಕರು ಸುಲಭವಾಗಿ ತಮ್ಮದಾಗಿಸಲು ಅನುಕೂಲವಾಗುವಂತೆ ಈ ನವೀಕೃತ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ವೆಡ್ಡಿಂಗ್ ಜುವೆಲ್ಲರಿಯಿಂದ ಹೆರಿಟೇಜ್ ಆಭರಣ, ಜೆಮ್‌ಸ್ಟೋನ್ ಮತ್ತು ಸಮಕಾಲೀನ ವಿನ್ಯಾಸಗಳವರೆಗೆ ಎರಡು ಮಹಡಿಗಳು ನಮ್ಮ ಕಲೆಯ ವಿವಿಧ ಅಭಿವ್ಯಕ್ತಿಗಳನ್ನು ಒಂದೇ ಸೂರಿನಡಿ ತಂದಿದ್ದೇವೆ ಎಂದರು.

ದ ಒರಿಜಿನಲ್ ಆಭರಣ:
1935 ರಲ್ಲಿ ಸ್ಥಾಪನೆಯಾದ ದ ಒರಿಜಿನಲ್ ಆಭರಣ ಉಡುಪಿ ಆಭರಣ ಜುವೆಲ್ಲರ್ಸ್ ಪೈ.ಲಿ.ನ ರಿಟೇಲ್ ಆಭರಣ ಬ್ಯಾಂಡ್ ಆಗಿದೆ. ಉಡುಪಿಯ ಸಿ.ಬಿ. ರಸ್ತೆಯಲ್ಲಿರುವ ಮೂಲ ಮಳಿಗೆಯು ಕಂಪೆನಿಯ ಪ್ರಧಾನ ಕಚೇರಿಯಾಗಿದೆ. ಗ್ರಾಹಕರ ನಂಬಿಕೆ ಮತ್ತು ಮೂಲ ಗುರುತಿಗೆ ಬದ್ದವಾಗಿರುವ ಈ ಬ್ಯಾಂಡ್, ಕರ್ನಾಟಕ ಮತ್ತು ಗೋವಾದ 8 ಜಿಲ್ಲೆಗಳಲ್ಲಿ 17 ಸ್ಥಳಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನ ಜಯನಗರದ 5 ನೇ ಬ್ಲಾಕ್‌ನಲ್ಲಿ ತನ್ನ ಏಕೈಕ ಅಧಿಕೃತ ಮಳಿಗೆಯನ್ನು ಹೊಂದಿದೆ.
ಆಭರಣ ಜುವೆಲ್ಲರ್ಸ್ ಸಂಸ್ಥೆಯ ಸುದೀರ್ಘ 90 ವರ್ಷಗಳ ಇತಿಹಾಸ, ನಂಬಿಕೆಯ ಪರಂಪರೆಯನ್ನು ಹೊಂದಿದ್ದು, ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ,
ಅತ್ಯುತ್ತಮ ಕರಕುಶಲತೆ ಹಾಗೂ ಗುಣಮಟ್ಟದ ಭರವಸೆಯ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ.






