ಉಡುಪಿ ಜಿಲ್ಲೆಯ ಕಾಪು ಠಾಣಾ ವ್ಯಾಪ್ತಿಯ ಅಚ್ಚಡ ರೈಲ್ವೆ ಹಳಿಗಳ ಬಳಿ ಹಿರಿಯ ವ್ಯಕ್ತಿ ವಿವಸ್ರವಾಗಿದ್ದು ವಿಶು ಶೆಟ್ಟಿ ಅಂಬಲಪಾಡಿ, ಕಾಪು ಪೋಲಿಸ್ ಮಂಜುನಾಥ್ ಶೆಟ್ಟಿ ನೆರವಿನಿಂದ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವ್ಯಕ್ತಿ ಶಶಿ ಶೇಖರ್ ಠಾಕೂರ್ (67) ತಮಿಳುನಾಡು ಮೂಲದವರಾಗಿದ್ದು ವಿವಸ್ತ್ರವಾಗಿ ರೈಲ್ವೆ ಹಳಿ ಬಳಿ ನಡೆದಾಡಲಾಗದೆ ದಣಿದಿದ್ದರು. ಮೇಲ್ನೋಟಕ್ಕೆ ವ್ಯಕ್ತಿ ಮರೆವು ಖಾಯಿಲೆ ಅಥವಾ ಖಿನ್ನತೆಗೊಳಗಾದಂತೆ ತೋರುತ್ತಿದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಪೊಲೀಸರ ಸಹಾಯದಿಂದ ರಕ್ಷಿಸಿದ್ದಾರೆ.
ವಿಚಾರಿಸಿದಾಗ ವ್ಯಕ್ತಿಯ ಬಳಿ ಇದ್ದ ಗುರುತು ಚೀಟಿ ಪರಿಶೀಲಿಸಿದಾಗ ಸೇನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ನಿವೃತ್ತರಾಗಿರುವುದು ತಿಳಿದಿದೆ. 42000/- ರೂ ನಗದು, ಪ್ಯಾಂಟ್ ಶರ್ಟ್ ಗುರುತು ಚೀಟಿಗಳು ರಕ್ಷಣಾ ಸಮಯ ಬ್ಯಾಗ್ ನಲ್ಲಿ ದೊರೆತಿದೆ. ಮಾಹಿತಿ ಇರುವ ಅಥವಾ ಸಂಬಂಧಿಕರು ಕಾಪು ಠಾಣೆ ಅಥವಾ ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.






