ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿಹಳ್ಳಿ, ಹೋಬಳಿ ದರಸಗುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷೆಯಾಗಿ ಸರಿತಾ ಶಿವರಾಮು ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ 14 ಸದಸ್ಯರ ಪೈಕಿ ದೊಡ್ಡೇಗೌಡನ ಕೊಪ್ಪಲು ಗ್ರಾಮದ ಸರಿತಾ ಮಾತ್ರ ಕಾಂಗ್ರೆಸ್ ಪಕ್ಷದಿಂದ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಚುನಾವಣಾ ಅಧಿಕಾರಿಗಳಾದ ಮನರೇಗಾ ಸಹಾಯಕ ನಿರ್ದೇಶಕ ನಾಗೇಂದ್ರ ಅವರು ಅವಿರೋಧವಾಗಿ ಆಯ್ಕೆ ಮಾಡಿದ್ದು, ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.
ಸರಿತಾ ಶಿವರಾಮು ಮಾತನಾಡಿ, “ಶ್ರೀರಂಗಪಟ್ಟಣ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಅವರು ಹಾಗೂ ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬೋರೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಇವರೆಲ್ಲರಿಗೂ ಮತ್ತು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದರು.
ಇದನ್ನು ಓದಿದ್ದೀರಾ? ರಾಮನಗರ: ವೈದ್ಯಕೀಯ ಪ್ರಮಾಣಪತ್ರ ನೀಡಲು 100 ರೂ ಲಂಚ ಕೇಳಿದ ಜಿಲ್ಲಾಸ್ಪತ್ರೆ ಡಾ. ಬಿ.ಜಿ.ಕುಮಾರಸ್ವಾಮಿ
ಸದಸ್ಯರುಗಳಾದ ಮಾಜಿ ಅಧ್ಯಕ್ಷರು ರಾಂಪುರ ಮುರಳಿ, ಹಾಲಿ ಉಪಾಧ್ಯಕ್ಷರು ಮುರಳಿ ರಾಂಪುರ, ಪಿಡಿಒ ಕೃಷ್ಣಪ್ಪ ಗೌಡ, ಕಾರ್ಯದರ್ಶಿ ಶ್ರೀಮತಿ ಭವ್ಯ, ಸದಸ್ಯರುಗಳಾದ ಶಿವಕುಮಾರ್, ಶ್ರೀಧರ್ ಕೆ ಸಿ, ಮಾದೇಶ್, ಸುಜಯ್, ಶಿವಮ್ಮ, ರಾಧಾ, ಸರಿತಾ, ಮುರಳಿ, ದ್ರಾಕ್ಷಾಯಿಣಿ, ರಂಜಿನಿ, ರಾಮಚಂದ್ರು, ಕುಮಾರ್ ಇದ್ದರು.
ಇದನ್ನು ನೋಡಿದ್ದೀರಾ? ಬೆಳಗಾವಿ | ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ಗೊತ್ತಾ?
ಕಾಂಗ್ರೆಸ್ ಮುಖಂಡರುಗಳಾದ ರವೀಂದ್ರ, ನಾರಾಯಣಪ್ಪ, ಪಾಂಡು, ವೆಂಕಟೇಶ್ ಮೂರ್ತಿ, ಗುರುಪ್ರಸಾದ್, ಪ್ರಾಣೇಶ್, ರಜಿನಿ, ವಿಜೇಂದ್ರ(ಪುಟ್ಟು), ದೇವರಾಜು, ಚಂದ್ರು, ಮಹೇಶ್, ನಾಗೇಂದ್ರ, ಶಿವು, ಶಿವರಾಮು ಸ್ಥಳದಲ್ಲಿ ಇದ್ದರು.