ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮದಲ್ಲಿ ಸಡಗರದಿಂದ ಗ್ರಾಮಸ್ಥರೆಲ್ಲ ಸೇರಿ ಮೆರವಣಿಗೆ ಮೂಲಕ ಮೊಂಬತ್ತಿ ಹಿಡಿದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸಾಗಿ ಗೌತಮ ಬುದ್ಧರ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿದರು.
ಮಹಾಚೇತನ ಯುವ ವೇದಿಕೆ ತಂಡದ ಆಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಈರಾಜ್ ರವರು ಸಿದ್ದಾರ್ಥ ಬುದ್ಧನಾದ ಬಗ್ಗೆ ಉಪನ್ಯಾಸ ನೀಡಿದರು.

ಇಂಜಿನಿಯರ್ ಶ್ರೀಕಾಂತ್ ಹಾಗೂ ಉಪನ್ಯಾಸಕ ರಾಜೇಶ್ ಗ್ರಾಮಸ್ಥರಿಗೆ ಪಂಚಶೀಲವನ್ನು ಬೋಧನೆ ಮಾಡಿದರು. ‘ ಬೀಮೋತ್ಸವ 2025 ‘ ರಂದು ಗೆದ್ದಂತಹ ವಿವಿಧ ಸ್ಪರ್ಧಿಗಳಿಗೆ ಗ್ರಾಮಸ್ಥರಿಂದಲೇ ಬಹುಮಾನವನ್ನು ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಡಗು | ಆಸ್ತಿ ವಿಚಾರ,ರಿವಲ್ವಾರ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನ; ತಾಯಿ, ಮಗ ಪೊಲೀಸರ ವಶಕ್ಕೆ

ಕಾರ್ಯಕ್ರಮದಲ್ಲಿ ಇಂಜಿನಿಯರ್ ವಿಜಯ್ ಕುಮಾರ್, ಮಹಾಚೇತನ ಯುವ ವೇದಿಕೆ ಬೆಣಗಾಲು ತಂಡದ ಹನುಮಂತ್, ಕಿರಣ್, ರೋಹಿತ್, ಪವನ್, ಚಿದ, ಡಿ ರಾಜ್, ಕಿಶೋರ್, ಶಿವಕುಮಾರ್, ಶರತ್, ನಂದೀಪ್, ರಕ್ಷಿತಾ, ಚಿತ್ರ, ಹೇಮ್ ಕುಮಾರ್, ಯಶವಂತ್, ಸಿರಾಜ್, ಕಿರಣ್ ಬಿ ಎಸ್, ರವಿಕುಮಾರ್, ರಮೇಶ್, ಅಂಗಡಿ ಮಾದೇವ್, ಸಣ್ಣಶಿವಣ್ಣ, ಬಸವರಾಜ್, ಸೂರಣ್ಣ, ದಯಾನಂದ, ಶಿವಣ್ಣ, ಶಂಕ್ರಣ್ಣ, ಅವಣಕ್ಕ, ಕಾಳಮ್ಮ, ಗಂಗಮ್ಮ, ಮೀನಾಕ್ಷಿ ಸೇರಿದಂತೆ ಗ್ರಾಮದ ಹಿರಿಯರು ಇದ್ದರು.