ಕೊಪ್ಪಳ | ಪತ್ರಿಕೆ ವಿತರಿಸುತ್ತಲೇ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ; ವಿತರಕರ ಸಂಘದಿಂದ ಸನ್ಮಾನ

Date:

ಪತ್ರಿಕೆ ವಿತರಣೆ ಮಾಡುತ್ತಲೇ ಕೊಪ್ಪಳದ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದು ಪಾಸಾಗಿದ್ದಾನೆ. ಈ ಕುರಿತು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರಿಮೋತಿ ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement -

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 559 ಅಂಕ ಪಡೆದ ಪತ್ರಿಕೆಗಳ ವಿತರಕ ಶಿವನಗೌಡ ಪಾಟೀಲ್ ಅವರಿಗೆ ನಗರದ ಹಸನ್ ರಸ್ತೆಯಲ್ಲಿರುವ ಡಾ. ಟಿ ಹೆಚ್ ಮುಲ್ಲಾ ಆಸ್ಪತ್ರೆ ಮುಂಭಾಗದ ಹಟಗಾರ ಪೇಟೆ ಓಣಿಯ ಅವರ ಮನೆಯಲ್ಲಿ ವಿತರಕರ ಸಂಘ ಹಾಗೂ ಕೊಪ್ಪಳ ಜಿಲ್ಲಾ ಸಂಘದಿಂದ ಸನ್ಮಾನ ಮಾಡಿ ಗೌರವಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ಈ ವೇಳೆ ಮಾತನಾಡಿದ ಶಂಕರ್‌ ಕುದುರಿಮೋತಿ, “ಪತ್ರಿಕೆ ವಿತರಕರು ಕಲಿಕೆಯೊಂದಿಗೆ ಗಳಿಕೆ ಮಾಡುತ್ತಾರೆ, ಮನೆಗೆ ಒಳ್ಳೆ ಮಗ, ಶಾಲೆಗೆ ಆದರ್ಶ ವಿದ್ಯಾರ್ಥಿ, ಸಮಾಜಕ್ಕೆ ಮಾದರಿ ಯುವಕರಾಗುತ್ತಾರೆ. ಒಡನಾಟದಿಂದ ಜನರೊಂದಿಗೆ ಹೇಗೆ ಬೆರೆಯುವದು, ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬುದು ಕಲಿಸುವುದೇ ಪತ್ರಿಕಾ ವಿತರಣಾ ವೃತ್ತಿ. ಪತ್ರಿಕೆ ವಿತರಣೆಗೆ ಬರುವವರು ಬಡತನದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಐದು ನೂರು, ಸಾವಿರ ರೂಪಾಯಿಗಳು ಬಂದರೆ ಸಿಲೆಂಡರಿಗೆ, ವಿದ್ಯುತ್ ಬಿಲ್ಲಿಗೆ, ಮನೆ ಬಾಡಿಗೆಗೆ ಆಗುತ್ತದೆ. ಇದರಿಂದ ತಂದೆ ತಾಯಿಗೆ ಸಹಾಯ ಮಾಡಬೇಕು ಎನ್ನುವ ವಿಚಾರದಿಂದ ಬೆಳಿಗ್ಗೆ ಪತ್ರಿಕೆ ಹಂಚುತ್ತಾರೆ. ಕೊಪ್ಪಳದ ಪತ್ರಿಕೆ ವಿತರಕರ ಸಂಘದವರು ಉಳಿತಾಯ ಆರಂಭಿಸಿದ್ದಾರೆ. ಈಗಿನ ಸಸಿ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಪತ್ರಿಕೆ ವಿತರಕರು ಶಾಲಾ ಕಾಲೇಜುಗಳಲ್ಲಿ ಉತ್ತಮ ಅಂಕ ಪಡೆದವರನ್ನು ಸನ್ಮಾನಿಸಿ ಪ್ರೋತ್ಸಾಹಿಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪಿಯುಸಿಯಲ್ಲಿ ಅದಕ್ಕಿಂತ ಒಂದೇ ಅಂಕ ಹೆಚ್ಚು ಪಡೆದರೂ ನಾನು ಸ್ವಂತ ಐದು ಸಾವಿರ ರೂಪಾಯಿಗಳನ್ನು ನೀಡುತ್ತೇನೆ” ಎಂದು ಘೋಷಿಸಿದರು.

ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಮಾತನಾಡಿ, “ಉತ್ತಮ ಅಂಕ ಗಳಿಸಿದ ಶಿವನಗೌಡ ಅವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ನಮ್ಮೆಲ್ಲರ ಸಹಕಾರವಿದೆ. ಪತ್ರಿಕೆಗಳಲ್ಲಿ ಮೂಲವಾಗಿ ಕೆಳಮಟ್ಟದಲ್ಲಿ ಕೆಲಸ ಮಾಡುವ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಪತ್ರಿಕಾ ವಿತರಕರು ಇಲ್ಲದಿದ್ದರೆ ಪತ್ರಿಕೆಗಳೇ ನಡೆಯುವುದಿಲ್ಲ. ಪತ್ರಿಕೆ ವಿತರಣೆ ಮಾಡುತ್ತಾ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಗಳಿಸುತ್ತಾರೆ. ಮನೆ ಮನೆಗಳಿಗೆ ಹೋಗಿ ಪತ್ರಿಕೆ ಹಾಕುವ ಮೂಲಕ ವಿವಿಧ ಮನಃಸ್ಥಿತಿಯ ಜನರನ್ನು ಅರ್ಥ ಮಾಡಿಕೊಂಡು ಜ್ಞಾನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ನಮೂನೆಯ ಪತ್ರಿಕೆಗಳನ್ನು ಓದುತ್ತಾ ಪದವಿಗಳನ್ನು ಪಡೆಯಲು ಅನುಕೂಲವಾಗುತ್ತದೆ” ಎಂದರು.

ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ

ಸಂಘದ ಜಿಲ್ಲಾಧ್ಯಕ್ಷ ಗವಿರಾಜ್ ಕಂದಾರಿ ಮಾತನಾಡಿ, “ಈ ಹಿಂದೆ ಉದಯ ಎಂಬ ಪತ್ರಿಕಾ ವಿತರಕನಿಗೆ ಐವತ್ತು ಸಾವಿರ ರೂಪಾಯಿಗಳ ಆರ್ಥಿಕ ಸಹಾಯ ಒದಗಿಸಲಾಗಿತ್ತು, ಈಗ ಶಿವನಗೌಡ ಅವರಿಗೆ ಮತ್ತು ಅನೇಕ ಪತ್ರಿಕೆ ವಿತರಕರಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಲು ದಾನಿಗಳು ಮುಂದೆ ಬರಬೇಕು” ಎಂದು ಕರೆ ನೀಡಿದರು.

ಪತ್ರಕರ್ತ ಪ್ರಮೋದ್ ಕುಲಕರ್ಣಿ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಟಪಾಲ್, ಕಾರ್ಯದರ್ಶಿ ಮಹೆಬೂಬ್ ಸಾಬ್ ಜಿವಿಟಿ, ಸಲಹೆಗಾರ ವಿರುಪಾಕ್ಷಪ್ಪ ಮುರಳಿ, ನಾಗರಾಜ್ ಕಲಾಲ್, ಸದಸ್ಯರಾದ ಮಹೆಬೂಬ್ ಮನಿಯಾರ, ಶಿವಕುಮಾರ್ ಜಿ, ಸೋಮವಾರದ್, ಹನುಮಂತ, ಮಂಜುನಾಥ್ ಹಡಪದ, ಗಂಗಾಧರ್ ಮಡ್ಡಿ, ಕಿರಣ್ ಮಮದ್ಲಿ ಹಾಗೂ ಇತರರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | 74,000 ಅಡಿಕೆ ಮರಗಳನ್ನು ನೆಟ್ಟಿದ್ದೇನೆ, ಕೃಷಿಕರ ಸಮಸ್ಯೆ ಬಗ್ಗೆ ಅರಿವಿದೆ: ಮಧು ಬಂಗಾರಪ್ಪ

ಸಹಕಾರ ಸಂಘಗಳು ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ರೈತರ ಆರ್ಥಿಕ...

ವಿಮಾನ ನಿಲ್ದಾಣದಲ್ಲಿ ಶುಲ್ಕದ ಹೆಸರಲ್ಲಿ ಸುಲಿಗೆ: ಟ್ಯಾಕ್ಸಿ, ಕ್ಯಾಬ್‌ ಅಸೋಸಿಯೇಷನ್‌ ಧರಣಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಗಳಿಂದ ಅತೀ...

ನೆಲಮಂಗಲ | ಜನರಿಗೆ ವಿಷ ಉಣಿಸುತ್ತಿರುವ ಬೇಕರಿಗಳು? ನಮಗ್ಯಾಕೆ ಎನ್ನುತ್ತಿದ್ದಾರೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು!

ನೆಲಮಂಗಲ ತಾಲೂಕಿನ ಬೇಕರಿಗಳಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಂಭೀರ ಕಳವಳ ಮೂಡಿಸುವ...

ಹಾಸನ | ಅರಣ್ಯಾಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ 

ಜಿಲ್ಲೆಯ ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹೇಮಂತ್‌ಕುಮಾರ್, ಆದಾಯಕ್ಕಿಂತ ಅಧಿಕ ಆಸ್ತಿ...