ವಿಜಯನಗರ | ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್‌ ಹುತಾತ್ಮ ದಿನಾಚರಣೆ; ಪಂಜಿನ ಮೆರವಣಿಗೆ

Date:

Advertisements

ವಿಜಯನಗರ ಜಿಲ್ಲೆಯ ಹೊಸಪೇಟೆಯ ವಡಕರಾಯದಲ್ಲಿ ಎಸ್‌ಎಫ್ಐ ಹಾಗೂ ಡಿವೈಎಫ್‌ಐನಿಂದ ಹಮ್ಮಿಕೊಂಡಿದ್ದ ಭಗತ್ ಸಿಂಗ್, ಸುಖದೇವ್, ರಾಜುಗುರು ಅವರ 95ನೇ ಹುತಾತ್ಮ ದಿನವನ್ನು ಪಂಜಿನ ಮೆರವಣಿಗೆ ಮೂಲಕ ಆಚರಿಸಲಾಯಿತು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಇಡಿಗರ ಮಂಜುನಾಥ ಮಾತಬಾಡಿ, “ಮಹಾತ್ಮರ ತ್ಯಾಗ ಬಲಿದಾನಗಳು ಇಂದು ಆಚರಣೆಗೆ ಸೀಮಿತವಾಗಿವೆ. ಯುವಜನರು ಭಗತ್ ಸಿಂಗ್‌ರ ಕನಸನ್ನು ನನಸು ಮಾಡಲು ಪಣ ತೊಡಬೇಕಿದೆ. ಈ ದೇಶದ ಯುವಸಂಪತ್ತು ಆಧುನಿಕ ಜೀವನ ಶೈಲಿಯಲ್ಲಿ ಮಹಾತ್ಮಾರ ತ್ಯಾಗ ಬಲಿದಾನಗಳನ್ನು ಮರೆತು ನೆಡಿಯುತ್ತಿದೆ. ಭಗತ್ ಸಿಂಗ್ ಸಮಸಮಾಜದ ಕನಸು ಕಂಡಿದ್ದರು. ಶೋಷಣೆ ವಿರುದ್ಧ, ದಬ್ಬಾಳಿಕೆ ವಿರುದ್ಧ ಭಗತ್ ಸದನ ನಡೆಯುವಾಗ ‌ಬಾಂಬ್ ಸ್ಪೋಟಸಿ ಅಂದಿನ ಬ್ರಿಟಿಷ್ ವಸಾಹತುಶಾಹಿಗೆ ನಡುಕ ಹುಟ್ಟಿಸಿದ್ದರು. ಇವತ್ತು ಪ್ರಶ್ನಿಸಬೇಕಾದ ಯುವಜನತೆ ಕೋಮುಗಲಭೆಗಳಲ್ಲಿ ಮುಳುಗಿದ್ದು, ತಮ್ಮ ಹಕ್ಕನ್ನು ಮರೆತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿಸರು‌.

ಎಸ್‌ಎಫ್ಐನ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, “ದೇಶ ಸದೃಢವಾಗಲು ನಮ್ಮ ಬದಕು ಸದೃಢವಾಗಲು ಯಾವ ಉದ್ಯೋಗ ಬೇಕೋ ಅದನ್ನು ಯುವಜನತೆ ಅರಿಯದೆ ಬದಲಾಗಿ ದ್ವೇಷ ಸಂಘಟನೆಗಳಲ್ಲಿ ಹಂಚಿ ಹೋಗಿದ್ದಾರೆ. ‘ದೇಶದ ಅಧಿಕಾರದ ಚುಕ್ಕಾಣಿ ಯುವಜನತೆಯ ಕೈಗೆ ದೊರೆತಾಗ ದೇಶ ಸಮಾನತೆಯ ಬದಕು ಕಾಣುತ್ತದೆ’ ಎಂದು ಭಗತ್ ಸಿಂಗ್ ಆಶಯ ಹೊತ್ತಿದ್ದರು. ಆದರೆ ಈಗ ದೇಶದ ನಾಗರಿಕರು ಇದರ ಅರಿವೇ ಇಲ್ಲದೆ ಹಣ, ಅಧಿಕಾರದ ಆಸೆಗೆ ಬಲಿಯಾಗಿ ಹಂಚಿಹೋಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಲ್ಯಾಣ ಕರ್ನಾಟಕ ಸೇರಿ 16 ಸಾವಿರ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ

ಡಿವೈಎಫ್ಐ‌ನ ಜಿಲ್ಲಾಧ್ಯಕ್ಷ ವಿ ಸ್ವಾಮಿ ಮಾತನಾಡಿ, “ಮಹಾತ್ಮಾರು ಹುತಾತ್ಮರಾಗಿ 95 ವರ್ಷಗಳಾದವು. ಆದರೂ ಪರಿಸ್ಥಿತಿ ಬದಲಾಗಿಲ್ಲ. ಬದಲಾಗಿ ಕೋಮುಗಲಭೆ ಮೇಲು ಕೀಳು ಹೆಚ್ಚಾಗಿದೆ. ಯಾವ ರಾಜಿಕೀಯ ಪಕ್ಷಗಳೂ ಮಹಾತ್ಮರ ತ್ಯಾಗ ಬಲಿದಾನಗಳನ್ನು ನೆನೆದು ಕೆಲಸ ಮಾಡಬೇಕಿತ್ತೊ, ಬದಲಾಗಿ ದಾಸರನ್ನಾಗಿ ಮಾಡಿದ್ದಾರೆ. ಪ್ರಶ್ನೆ ಕೇಳುವ ಮನೋಭಾವವನ್ನು ಹೊಸಕಿ ಹಾಕಿದ್ದಾರೆ. ಇನ್ನಾದರೂ ಮಹಾತ್ಮರ ತ್ಯಾಗಗಳನ್ನು ನೆನದು ದುಡಿಯಬೇಕಿದೆ” ಎಂದರು.

ಬಂಡೆ ತಿರುಕಪ್ಪ, ಪವನ್, ಅಲ್ತಾಫ್, ದಿವಾಕರ್, ಹನುಮ ನಾಯ್ಕ, ಮಂಜು, ಜಂಬಯ್ಯಾ ನಾಯಕ, ಎಂ ಗೋಪಾಲ, ಯಲ್ಲಾಲಿಂಗ, ಬಸವರಾಜ್, ತಾಯಪ್ಪ ನಾಯಕ, ಸೂರ್ಯ, ಮಹೇಶ್ ಬಿಸಾಟಿ, ಕಲ್ಯಾಣ್, ವೆಂಕಟೇಶ್, ಮುನೀರ್ ಭಾಷಾ, ಚೆನ್ನ ಬಸಯ್ಯ, ಎರಿಸ್ವಾಮಿ, ತಿರುಪತಿ, ಪ್ರಕಾಶ್, ಭಾಸ್ಕರ್ ರೆಡ್ಡಿ, ರೇಣುಕಾ, ಬಸವರಾಜ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯನಗರ | ಸೇವಾ ನಿವೃತ್ತಿ: ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ. ಡಿ ಮೀನಾಕ್ಷಿಗೆ ಬೀಳ್ಕೊಡುಗೆ

ಮಾಹಿತಿ‌ ಕೇಂದ್ರದ ಉಪನಿರ್ದೇಶಕಿ ಡಾ. ಡಿ ಮೀನಾಕ್ಷಿಯವರು ಸುಮಾರು 30 ವರ್ಷಗಳ...

ಬಳ್ಳಾರಿ | ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ

ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಗೂ ರಾಯಚೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ...

ಮೈಸೂರು | ಅಣ್ಣಾವ್ರ ಅಭಿನಯದಲ್ಲಿ ಇತಿಹಾಸ ಪುರುಷರ ಕಾಣುವಂತಾಯಿತು; ನಟ ಮಂಡ್ಯ ರಮೇಶ್

ಮೈಸೂರಿನ, ಹೆಬ್ಬಾಳ ಹೊರ ವರ್ತುಲದಲ್ಲಿರುವ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಾಡೋಜ ಡಾ....

Download Eedina App Android / iOS

X