ಬೆಳೆ ಬೆಳೆದಿದ್ದ ಜಮೀನಿಗೆ ಕಾಡು ಹಂದಿಗಳು ನುಗ್ಗಿ ಮೆಕ್ಕಜೋಳ ಹಾಳು ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ದಾಸಪ್ಪರ ರಾಮಪ್ಪ ತನ್ನ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಕಾಡು ಹಂದಿಗಳು ರಾತ್ರಿ ದಾಳಿ ನಡೆಸಿ, ನಾಶ ಮಾಡಿವೆ.
ಕಾಡುಹಂದಿ ದಾಳಿಯಿಂದ 60 ಸಾವಿರಕ್ಕೂ ಹೆಚ್ಚು ಮೌಲ್ಯದ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಬೆಳೆ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ರೈತ ದಾಸಪ್ಪರ ರಾಮಪ್ಪ ಮನವಿ ಮಾಡಿದ್ದಾರೆ.
ಕಾಡುಹಂದಿ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದ ರೈತರ ಬೆಳೆಗಳು ಹಾಳಾಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.