ಕಾಂತರಾಜ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಅಹಿಂದ ಮುಖಂಡರು ವಿಜಯಪುರ ನಗರದ ಸಾರಿಪುತ್ರ ಬೌದ್ಧ ವಿಹಾರದಲ್ಲಿ ಸಭೆ ಸೇರಿ ಚರ್ಚಿಸಿದರು.
ಸಭೆಯಲ್ಲಿ ಕಾಂತರಾಜ ಅವರ ಜಾತಿಗಣತಿ ವರದಿಯ ಮಹತ್ವ ಮತ್ತು ಅದರ ಅವಶ್ಯಕತೆ ಬಗ್ಗೆ ಚರ್ಚೆ ಮಾಡಿದ ಮುಖಂಡರು, “ಜಾತಿ ಜನಗಣತಿ ಬಹಿರಂಗ ಮಾಡದಂತೆ ಸಿದ್ದರಾಮಯ್ಯ ಮತ್ತು ಸರ್ಕಾರದ ಮೇಲೆ ಕೆಲವರು ಒತ್ತಡ ಹೇರುತ್ತಿದ್ದಾರೆ. ವರದಿ ಬಹಿರಂಗ ಮಾಡುವುದನ್ನು ತಡೆಯುವ ಷಡ್ಯಂತ್ರ ಮಾಡುತ್ತಿರುವ ಶಕ್ತಿಗಳನ್ನು ತಡೆಯಬೇಕಾದರೆ ಅಹಿಂದ ವರ್ಗದ ಶೇ.80ರಷ್ಟು ಜನ ಒಂದಾಗಬೇಕು ಮತ್ತು ಅವರನ್ನು ಜಾಗೃತಿ ಮಾಡಬೇಕು” ಎಂದರು.

ಮಲ್ಲಿಕಾರ್ಜುನ ಬಟಗಿ ಮಾತನಾಡಿ, “ಅಹಿಂದ ವರ್ಗದ ಮೇಲೆ ನಿಜವಾದ ಕಾಳಜಿ ಇದ್ದರೆ ಸಿದ್ದರಾಮಯ್ಯನವರು ಕೂಡಲೇ ಮೀಸಲಾತಿ ಜಾರಿಗೆ ತಂದು ಸರ್ಕಾರದ ಶಾಲೆಯಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲು ತರಬೇಕು” ಎಂದರು.
ಕಾಂತರಾಜ ಜಾತಿಗಣತಿ ವರದಿ ಬಿಡುಗಡೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮುಖಂಡರು ಸಂಚರಿಸಿ ಜನರನ್ನು ಜಾಗೃತಿ ಮಾಡಿ ದೂಡ್ಡ ಹೋರಾಟ ಮಾಡವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಗೃಹಸಚಿವ ಪರಮೇಶ್ವರ್ ಸ್ವಕ್ಷೇತ್ರದಲ್ಲೇ ಅಮಾನವೀಯ ಘಟನೆ; ಮಲ ಹೊರುವ ಪದ್ದತಿ ಇನ್ನೂ ಜೀವಂತ
ಸಭೆಯಲ್ಲಿ ರಾಜಶೇಖರ ಯಡಹಳ್ಳಿ, ಪ್ರಭುಗೌಡ ಪಾಟೀಲ, ಚೆನ್ನು ಕಟ್ಟಿಮನಿ, ಮಹಾದೇವ ಬನಸೂಡೆ, ಮಂಜುಳಾ ಪೂಜಾರಿ, ಬಸವರಾಜ ಸೂಳೆಬಾವಿ, ಬಿ ಎಸ್ ಗಸ್ತಿ, ದೇವಾನಂದ ಲಚ್ಯಾಣ, ದಸ್ತಗಿರಿ ಮುಲ್ಲಾ ಸೇರಿದಂತೆ ಬಹುತೇಕ ಅಹಿಂದ ಮುಖಂಡರು ಇದ್ದರು.