ವಿಜಯಪುರ | ನಾಲ್ಕು ವರ್ಷದ ಪದವಿ ಹೇರಿಕೆ ಎಐಡಿಎಸ್‌ಒ ಖಂಡನೆ

Date:

Advertisements

ಎನ್‌ಇಪಿ-2020ರ ಅಡಿಯಲ್ಲಿ ನಾಲ್ಕು ವರ್ಷದ ಪದವಿ ಹೇರಿಕೆಯನ್ನು ವಿಜಯಪುರ ಜಿಲ್ಲಾ ಎಐಡಿಎಸ್‌ಒ ಖಂಡಿಸಿದೆ.

ಈ ಬಗ್ಗೆ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಪತ್ರಿಕಾ ಹೇಳಿಕೆ ನೀಡಿದ್ದು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಎನ್‌ಇಪಿ-2020 ಹಿಂಪಡೆಯುವುದಾಗಿ ಘೋಷಿಸಿತು. ಆದರೆ, ಈಗ 4 ವರ್ಷದ ಪದವಿ ಹೇರಿಕೆ ಸಂದೇಶ ಯುಯುಸಿಎಮ್‌ಎಸ್ ಪೋರ್ಟಲ್ ಮುಖಾಂತರ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಅಂತಿಮ ವರ್ಷದ ಪದವಿಯನ್ನು ಮುಗಿಸಲಿರುವ ವಿದ್ಯಾರ್ಥಿಗಳ ಮೇಲೆ ಈ ಹೇರಿಕೆ ಸಿಡಿಲಿನಂತೆ ಎರಗಿದ್ದು, ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ. ಈ ಮೂಲಕ ಸರ್ಕಾರವು 4 ವರ್ಷದ ಪದವಿ ಅನುಷ್ಠಾನಕ್ಕೆ ಮುಂದಾಗಿರುವುದು ಖಚಿತವಾಗುತ್ತಿದೆ. ಸರ್ಕಾರದ ಈ ನಡೆಯು ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ.

Advertisements

ರಾಜ್ಯ ಸರ್ಕಾರವು ಈ ರೀತಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು ಮತ್ತು ಕೂಡಲೇ 4 ವರ್ಷದ ಪದವಿಯನ್ನು ಹಿಂಪಡೆಯಬೇಕೆಂದು ಎಐಡಿಎಸ್‌ಒ ಆಗ್ರಹಿಸಿದ್ದು, ಇಲ್ಲವಾದಲ್ಲಿ ಎನ್‌ಇಪಿ-2020ರ ವಿರುದ್ಧ ರಾಜ್ಯದಲ್ಲಿ ನಡೆದ ಹೋರಾಟದಂತೆ 4 ವರ್ಷದ ಪದವಿ ಹೇರಿಕೆ ವಿರುದ್ಧ ಬೃಹತ್ ಪ್ರಮಾಣದ ವಿದ್ಯಾರ್ಥಿ ಚಳವಳಿಯು ಬುಗಿಲೇಳುವುದಾಗಿ ರಾಜ್ಯದ ವಿದ್ಯಾರ್ಥಿಗಳ ಪರವಾಗಿ ಎಐಡಿಎಸ್‌ಒ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರವನ್ನು ಎಚ್ಚರಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |‌ ಕುರುಬರಿಗೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹ

ಕುರುಬರಿಗೆ ಎಸ್‌ಟಿ(ಪರಿಶಿಷ್ಟ ಪಂಗಡ) ಮೀಸಲಾತಿಯನ್ನು ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ನಿಂತು...

ಬೀದರ್‌ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ

ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು,...

ಮೈಸೂರು | ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ; ಮೀಲಾದ್ ಘೋಷಣಾ ಜಾಥಾ

ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ 'ಸುನ್ನಿ ಯುವಜನ...

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

Download Eedina App Android / iOS

X