ಅಂಗನವಾಡಿ ನೌಕರು ಪ್ರಸ್ತುತ ನಿರ್ವಹಿಸುತ್ತಿರುವ ಫಲಾನುಭವಿಗಳ ಪೇಸ್ ಕ್ಯಾಪ್ಚರ್ ಪದ್ದತಿಯನ್ನು ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಎಐಯುಟಿಯುಸಿ ಗೆ ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕ ಮನವಿ ಸಲ್ಲಿಸಿತು.
“ಅಂಗನವಾಡಿ ಫಲಾನುಭವಿಗಳಿಗೆ ಆಹಾರ ನಿಡಲು ಕಡ್ಡಾಯವಾಗಿ ಪೇಸ್ ಕ್ಯಾಪ್ಚರ್ ಮಾಡಬೇಕೆಂದು ಕೇಂದ್ರ ಸರಕಾರ ಜಾರಿಗೂಳಿಸಿದ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ಬಾಣಂತಿ, ಮಕ್ಕಳಿಗೆ ಸೌಲಭ್ಯಗಳನ್ನು ನಿಡಲು ಅವರ ಫೇಸ್ ಕ್ಯಾಪ್ಚರ್ ಮಾಡುವ ಸಂದರ್ಭದಲ್ಲಿ ಎದುರಾಗುವ ಸರ್ವರ್ ಸಮಸ್ಯೆ, ಇಲಾಖೆಯ ಪೋನ್ ನಲ್ಲಿ ಎಂಟ್ರಿ ಆಗದೆ ಇರುವುದು, ಫಲಾನುಭವಿಗಳು ಸರಿಯಾಗಿ ಒಟಿಪಿ ಹೇಳದೆ ಇರುವುದು, ಬಹುತೇಕ ಫಲಾನುಭವಿಗಳು ಬಡವರಾಗಿರುವುದರಿಂದ ತಮ್ಮ ಪೋನ್ ರಿಚಾರ್ಜ್ ಮಾಡಿಸಿರಲ್ಲ, ಆಗ ಅವರ ಪೋನ್ಗೆ ಒಟಿಪಿ ಹೋಗುವುದಿಲ್ಲ, ನಂಬರ್ ಬದಲಾವಣೆ ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಪೇಸ್ ಕ್ಯಾಪ್ಚರ್ ಮಾಡಬೇಕಾಗಿದೆ. ಇದರಿಂದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಕಲಿಸುವುದು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಯುವವರೆಗೂ ಫೇಸ್ ಕ್ಯಾಪ್ಚರ್ ಪದ್ಧತಿಯನ್ನು ತಡೆಹಿಡಿಯಬೇಕು ಅಥವಾ ಕೈಬಿಡಬೇಕು” ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಿಜಯಪುರ | ಅಕ್ರಮವಾಗಿ ಆಧಾರ್ ಕಾರ್ಡ್ ತಿದ್ದುಪಡಿ; ಭೀಮಣ್ಣ ಕೋಟಾರಗಸ್ತಿ ವಿರುದ್ಧ ಕ್ರಮಕ್ಕೆ ಆಗ್ರಹ
ಈ ವೇಳೆ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಹೆಚ್ ಟಿ, ಉಪಾಧ್ಯಕ್ಷೆ ನಿಂಗಮ್ಮ ಮಠ, ಸಾವಿತ್ರಿ ನಾಗರತ್ತಿ, ಕಾರ್ಯದರ್ಶಿ ಲಕ್ಮೀ ರೇಣುಕಾ ಹಡಪದ, ಸವಿತಾ ತೇರದಾಳ, ಸತ್ಯಮ ಹಡಪದ, ಭಾಗ್ಯ ಇಂಡಿ, ವಿಜಯಲಕ್ಷ್ಮಿ ಹುಣಶ್ಯಾಳ, ಸರಸ್ವತಿ ಮದ್ರಕಿ, ಶಾಂತಾ, ಗಂಗಮ್ಮ ಉಪಲದಿನ್ನಿ ಇದ್ದರು.
