ಕಲಬುರಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕಾನೂನು ಕ್ರಮಗಳ್ಳಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿವೆ.
ಕಲಬುರಗಿ ನಗರದ ಕೋಟನೂರ್ ಲುಂಬಿಣಿ ಉದ್ಯಾನದಲ್ಲಿರುವ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ವರ ಪುತ್ಥಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿವೆ.
ಪದೇ ಪದೇ ವಿಶ್ವ ರತ್ನ, ಡಾ. ಬಾಬಾ ಸಾಹೇಬ್ ಅಂಬೇಡ್ಕರವರ ಪುತ್ಥಳಿಗಳಿಗೆ ಮತ್ತು ಭಾರತ ದೇಶದ ರಾಷ್ಟ್ರೀಯ ನಾಯಕರಗಳ ಮೂರ್ತಿಗಳಿಗೆ ಅವಮಾನಗೊಳಿಸುತ್ತಿದ್ದು, ಇಂತಹ ಘಟನೆಗಳು ಮರುಕಳಿಸಿದಂತೆ ಸೂಕ್ತ ಪೊಲೀಸ್ ಬಂದೋಬಸ್ತ ಮತ್ತು ಗುಪ್ತಚರ ಇಲಾಖೆಗಳು ಜಾಗೃತಿ ವಹಿಸಬೇಕು. ಕಲಬುರಗಿ ನಗರದಲ್ಲಿ ನೆಡೆದ ಅಹಿತಕರ ಘಟನೆಗೆ ಕಾರಣಿಕರ್ತರಾದವರನ್ನು ದೇಶದ್ರೋಹಿ ಕಾಯ್ದೆ ಅಡಿಯಲ್ಲಿ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು.
ಇಂತಹ ಘಟನೆಗಳು ಮರುಕಳಿಸಿದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಹೊಣೆಗಾರರನ್ನಾಗಿ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಕಪ್ಪ ಬಡಿಗೇರ, ಹನಮಂತ ವಡ್ಡರ, ಡಿಎಸ್ಎಸ್ ವಿಜಯಪುರ ಜಿಲ್ಲಾ ಸಂಚಾಲಕ ಶರಣು ಶಿಂಧೆ, ಪರಶುರಾಮ ದೊರೆಗೂಳ, ಸಲೀಮ್ ನಾಯ್ಕೋಡಿ, ಚಾಂದ್ ಪಾಷಾ ಅವಲ್ದಾರ್, ಭೀಮಣ್ಣ ವಡ್ಡರ್, ನಬಿಲಾಲ್ ನಾಯ್ಕೋಡಿ , ರಾಜೇಂದ್ರ, ಸಂತೋಷ್, ಸಂಗು ದೇಸಾಯಿ ಇತರರು ಉಪಸ್ಥಿತರಿದ್ದರು.