ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮಕ್ಕಳನ್ನೆ ಅಧ್ಯಕ್ಷರು, ಮುಖ್ಯ ಅತಿಥಿಗಳನ್ನಾಗಿ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ನೇತ್ರಾ ವಡ್ಡರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪೂಜಾ ಶಹಾಪುರ, ಪ್ರತಿಭಾ ಬಂಡಿ, ಮಹಾನಂದಾ ತಾಂಬೆ, ಗಾಯತ್ರಿ ರಾಠೋಡ, ವಾಫಿಯಾ ಜಾಗೀರದಾರ, ವಿದ್ಯಾರ್ಥಿಗಳಾದ ನಾಗೇಶ್ ಜೀರಗ್ಯಾಳ, ಭೀಮನಗೌಡ ಪಾಟೀಲ ಆಗಮಿಸಿದ್ದರು.
ಶಾಲೆಯ ಎಲ್ಲಾ ಮಕ್ಕಳು ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು, ಸಾಂಪ್ರದಾಯಿಕ ಅಡುಗೆ ಮೇಳ ಕಾರ್ಯಕ್ರಮ ನಡೆಸಿದರು. ಹಳ್ಳಿ ಸೊಗಡಿನ ವೇಷ ಭೂಷಣ ತೊಟ್ಟು ಮಕ್ಕಳು ಹಳ್ಳಿಯ ಅಡುಗೆಗಳನ್ನು ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಪ್ಪು ಬೆಳ್ಳುಂಡಗಿ, ನಿರ್ದೇಶಕರಾದ ಸಿದ್ದಪ್ಪ ಬಂಡಿ, ರಾಜಕುಮಾರ ಬೆಳ್ಳುಂಡಗಿ, ಮುಖ್ಯ ಗುರುಗಳಾದ ಪ್ರಕಾಶ ಎಂ. ಬೆಳ್ಳುಂಡಗಿ, ಶಿಕ್ಷಕರಾದ ಆನಂದಯ್ಯ ಮಠಪತಿ, ಪ್ರಕಾಶ ಫರೀಟ, ನಿಂಗಪ್ಪ ಕಲಘಟಗಿ, ಗುರುಮಾತೆಯರಾದ ವಿಜಯಲಕ್ಷ್ಮೀ ಕಂಬಾರ, ರಂಜಿತಾ ಹಿರೇಕುರಬರ, ಲಕ್ಷ್ಮೀ ಮಠಪತಿ, ನಿರ್ಮಲಾ ನಾಕಾಡ, ಕಾರ್ಮೆಲಿನ್ ಫೆರ್ನಾಂಡಿಸ್, ವಿಜಯಲಕ್ಷ್ಮೀ ಹಿರೇಕುರಬರ, ಸಂಗೀತಾ ಬೆಳ್ಳುಂಡಗಿ, ಗೀತಾ ಧಾರವಾಡಕರ ಹಾಗೂ ವಿದ್ಯಾರ್ಥಿಗಳು, ಮಕ್ಕಳ ಪಾಲಕರು, ಪೋಷಕರು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಏರ್ಪಡಿಸಲಾಗಿತ್ತು ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.