ವಿಜಯಪುರ | ರೋಗಿಗಳ ವಿಶ್ವಾಸ ಗೆಲ್ಲಲು ಸಂವಹನ ಕೌಶಲ್ಯ ಅತ್ಯಗತ್ಯ: ಡಾ. ಸಂಜಯ ನೀರಲಗಿ

Date:

ಸರಿಯಾದ ಸಂವಹನ ಕೌಶಲ್ಯದಿಂದ ವೈದ್ಯಕೀಯ ವ್ರತ್ತಿಯಲ್ಲಿ ಏಳಿಗೆ ಹೊಂದಲು ಸಾಧ್ಯ ‌, ಎಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ವೈದ್ಯಕೀಯ ಅಧ್ಯಯನ ವಿಭಾಗದ ಸಂಯೋಜಕ ಡಾ. ಸಂಜಯ ನೀರಲಗಿ ಹೇಳಿದರು.

- Advertisement -

ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾದ ವೈದ್ಯಕೀಯ ವೃತ್ತಿಯಲ್ಲಿ ಸಂಹವನ ಕೌಶಲ್ಯದ ಮಹತ್ವ ಕುರಿತು ಅವರು ಅತಿಥಿ ಉಪನ್ಯಾಸ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

“ಸಕ್ರಿಯವಾಗಿ ಆಲಿಸುವುದು, ಸ್ಪಷ್ಟವಾಗಿ ಮಾತನಾಡುವುದು, ಕರುಣೆ, ಸಹಾನುಭೂತಿ ತೋರಿಸುವುದು ಇಲ್ಲಿ ಮುಖ್ಯವಾಗಿವೆ. ಅಷ್ಟೇ ಅಲ್ಲ, ಸರಿಯಾದ ದೇಹಭಾಷೆಯಿಂದ ರೋಗಿಗಳ ಮತ್ತು ಸಂಬಂಧಿಕರ ಆತ್ಮವಿಶ್ವಾಸವನ್ನು ಗೆಲ್ಲಬಹುದು. ಸರಿಯಾದ ಸಂವಹನ ಕೌಶಲ್ಯದಿಂದ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಸಂಬಂಧಗಳನ್ನು ಬಲಪಡಿಸಲು ಮತ್ತು ವೈದ್ಯಕೀಯ ವೃತ್ತಿಯಲ್ಲಿ ಏಳಿಗೆ ಹೊಂದಲು ಸಾಧ್ಯವಿದೆ” ಎಂದು ಅಭಿಪ್ರಾಯಿಸಿದರು.

ಇದೇ ವೇಳೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಮತ್ತು ಉದಾಹರಣೆಗಳೊಂದಿಗೆ ಅವರು ಪ್ರಾತ್ಯಕ್ಷಿಕವಾಗಿ ತಿಳಿ ಹೇಳಿದರು. “ಅಲ್ಲದೇ, ರೋಗಿಗಳ ಪರಿಣಾಮಕಾರಿ ಚಿಕಿತ್ಸೆಯಲ್ಲಿ ವೈದ್ಯರ ಜ್ಞಾನ ಭಂಡಾರ, ವೃತ್ತಿ ನೈಪುಣ್ಯತೆ ಜೊತೆಗೆ ಸಂವಹನ ಕೌಶಲ್ಯತೆಗೂ ಪ್ರಾಮುಖ್ಯತೆ ಇದೆ” ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, “ಔಷಧಿಯಿಂದ ಗುಣಪಡಿಸಲಾಗದ ಕಾಯಿಲೆಗಳಿಗೆ ವೈದ್ಯರ ಸಹಾನುಭೂತಿಯ ಸಮಾಲೋಚನೆಯಿಂದ ರೋಗಿ ಮತ್ತು ರೋಗಿಗಳ ಸಂಬಂಧಿಕರನ್ನು ತೃಪ್ತಿ ಪಡಿಸಬಹುದು ಮತ್ತು ವೈದ್ಯೋನಾರಾಯಣೋ ಹರಿ ಎಂಬ ಉಕ್ತಿಯಂತೆ ರೋಗಿಗಳು ವೈದ್ಯರಲ್ಲಿ ವಿಶ್ವಾಸ ಹೊಂದಲು ‌ಸಂವಹನ ಕೌಶಲ್ಯ ತುಂಬಾ ಸಹಾಯಕಾರಿಯಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ. ತೇಜಸ್ವಿನಿ‌ ವಲ್ಲಭ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಚಾರ್ಯ ಡಾ. ಆನಂದ ಅಂಬಲಿ, ರೋಗನಿದಾನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.‌ ಸುರೇಖಾ ಹಿಪ್ಪರಗಿ, ಪ್ರಾಧ್ಯಾಪಕರಾದ ಡಾ.ವಿಜಯಾ ಪಾಟೀಲ, ಡಾ. ರೇಖಾ ಬಿರಾದಾರ, ಡಾ. ಶ್ರವಣಕುಮಾರ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೇವೆ ಮೊದಲು, ಪರಿಶೀಲನೆ ಆಮೇಲೆ: ಫಲಾನುಭವಿಗಳಿಗೆ ತ್ವರಿತ ಸೇವೆ ನೀಡಲು ರಾಜ್ಯ ಸರ್ಕಾರದ ಹೊಸ ಆದೇಶ

ರಾಜ್ಯ ಸರ್ಕಾರವು ನಾಗರಿಕರಿಗೆ ಮುಂಚಿತವಾಗಿ ಅರ್ಹತೆಯ ಪರಿಶೀಲನೆಯಿಲ್ಲದೆ ಸೇವೆಗಳು ಮತ್ತು ಯೋಜನೆಯ...

ಅವಳ ಕಣ್ಣೋಟ | ‘ಉಯರೆ’- ಸುಟ್ಟದ್ದು ಮುಖವಷ್ಟೇ, ಬದುಕಿನ ಮೇಲಿನ ಹಕ್ಕಲ್ಲ…

ಒಬ್ಬ ಮಹಿಳೆ ತನ್ನನ್ನು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಬದುಕನ್ನೇ ನಾಶಮಾಡುವ ಹಕ್ಕು...

ರಾಯಚೂರು | ಈಶಾನ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಶೇ. 86.02ರಷ್ಟು ಮತದಾನ

ಅಕ್ಟೋಬ‌ರ್ 23ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆದಿದ್ದು, ಒಟ್ಟು...