ವಿಜಯಪುರ ನಗರದಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಮುಖಂಡರು ಮತ್ತು ಕಾರ್ಯಕರ್ತರು ಇಂದು ಸಭೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಬೆಂಬಲ ನೀಡುವುದಾಗಿ ನಿರ್ಧರಿಸಿದ್ದಾರೆ.
ಮಹಾಂತೇಶ ಸಾಸಾಬಾಳ ಅವರಿಂದ ಕ್ರಾಂತಿಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ, ಅಭಿಷೇಕ ಚಕ್ರವರ್ತಿ, ಹಿರಿಯ ಪತ್ರಕರ್ತರಾದ ಅನಿಲ ಹೊಸಮನಿ, ಚಂದ್ರಕಾಂತ ಸಿಂಗೆ, ಅಶೋಕ ಚಲವಾದಿ, ವೈ.ಸಿ. ಮಯೂರ, ಚೆನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ್ಕ, ನಾಗರಾಜ ಲಂಬು, ಸಿದ್ದು ರಾಯಣ್ಣವರ, ಸಂಜು ಕಂಬಾಗಿ, ಪರಶುರಾಮ ದಿಂಡವಾರ, ಪರಶುರಾಮ ಕಾಂಬಳೆ, ಅಶೋಕ ಚಲವಾದಿ, ಮಲ್ಲು ಜಾಲಗೇರಿ, ಶಂಕರ ಚಲವಾದಿ, ಆನಂದ ಔದಿ, ವಿನಾಯಕ ಗುಣಸಾಗರ, ಮಹಾದೇವ ಬನಸೋಡೆ, ರಾಜು ತೊರವಿ ಮತ್ತಿತರರು ಮಾತನಾಡಿ ದಲಿತ ಸಂಘರ್ಷ ಸಮಿತಿಯ ಮೂಲಕ ರಾಜಕೀಯ ಪ್ರವೇಶ ಮಾಡಿರುವ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸೋಣ ಎಂದು ಒಕ್ಕೊರಲಿನಿಂದ ಶಪಥಗೈದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ದಸಂಸ ಎಲ್ಲಾ ಬಣಗಳ ಪದಾಧಿಕಾರಿಗಳು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 97 ವರ್ಷಗಳ ಹಿಂದೆ (ಮಾರ್ಚ್ 20, 1927) ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನಡೆಸಿದ್ದ ಮಹಾಡ್ ಚೌದಾರ ಕೆರೆಯ ನೀರು ಮುಟ್ಟುವ ಹಕ್ಕು ಪ್ರತಿಪಾದಿಸುವ ಸತ್ಯಾಗ್ರಹವನ್ನು ಸ್ಮರಿಸಲಾಯಿತು.