ವಿಜಯಪುರ | ಸಂವಿಧಾನ ನಮ್ಮ ಜೀವಾಳ: ಕುಮಾರ್ ಇಂಡಿಕರ್ ಐಎಎಸ್‌

Date:

Advertisements

ಸಂವಿಧಾನ ನಮ್ಮ ಜೀವಾಳ. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಸಂವಿಧಾನವು ನಮಗೆ ಎಲ್ಲ ರೀತಿಯ ಹಕ್ಕುಗಳನ್ನು ಕೊಟ್ಟಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕರ್ತವ್ಯ ನಮ್ಮದಾಗಿದೆ ಎಂದು ಕುಮಾರ್ ಇಂಡಿಕರ್ ಐಎಎಸ್ ಹೇಳಿದರು.

ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, “ಸಂವಿಧಾನದ ಸಾರವನ್ನು ಇವತ್ತಿನ ಯುವಪೀಳಿಗೆಗೆ ತಿಳಿಸುವ ಅಗತ್ಯವಿದೆ. ಸಂವಿಧಾನ ನಮ್ಮ ಭಾರತಕ್ಕೆ ಕೊಟ್ಟು ಇವತ್ತಿಗೆ 72 ವರ್ಷ ಕಳೆದು ಹೋಗಿದೆ. ಇಂದು ಸಂವಿಧಾನ ಓದುವುದು ಮಾತ್ರವಲ್ಲ, ಪ್ರತಿಯೊಬ್ಬರ ಮನಸಲ್ಲಿ ಇರಬೇಕು. ಭಾರತದ ಪ್ರಜೆಗಳಾದ ನಾವು ಅಂದರೆ ಎಲ್ಲ ಜಾತಿ ಧರ್ಮಗಳನ್ನು ಒಳಗೊಂಡಿರುವುದು” ಎಂದು ಹೇಳಿದರು.

“ಪ್ರಶ್ನೆ ಕೇಳಿದರೆ ಯಾವುದೇ ಪ್ರಯೋಜನವಾಗುತ್ತದೆ. ಪ್ರಶ್ನೆ ಕೇಳುವವರನ್ನೇ ನೀವು ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಎನ್ನುವವರೂ ಕೂಡ ನಮ್ಮವರು. ಇದರಿಂದ ತಪ್ಪಿದ್ದರೆ ಕೂಡ ಜನ ಮೌನ ತಾಳಿರುತ್ತಾರೆ. ಆದರೆ ಯಾರೇ ಏನೇ ಅನ್ನಲಿ ನಾವು ಮಾತ್ರ ಸಂವಿಧಾನವನ್ನು ಗೌರಸಬೇಕು. ಅದೇ ರೀತಿ ಪ್ರತಿಯೊಬ್ಬರೂ ಭಾರತದ ಸಂವಿಧಾನವನ್ನು ಗೌರಸಬೇಕು” ಎಂದು ಕಿವಿಮಾತು ಹೇಳಿದರು.

Advertisements

ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ್ ಮಾತನಾಡಿ, “ಭಾರತದ ದೇಶದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ವಾರು ಹುಟ್ಟದೇ ಇದ್ದಿದ್ದರೆ, ಇವತ್ತು ಸಂವಿಧಾನ ಬರೆಯದೇ ಇದ್ದಿದ್ದರೆ ನಾವು ನೀವು ಇಲ್ಲಿ ಈ ಕಾರ್ಯಕ್ರಮದಲ್ಲಿ ಕೂರಲು ಸಾಧ್ಯವಿರುತ್ತಿರಲಿಲ್ಲ. ನಾವು ಇಲ್ಲಿ ಸೇರಲು ಅಂಬೇಡ್ಕರ್ ಅವರು ಬರೆದ ಸಂವಿಧಾನ ಅದೇ ರೀತಿ ಉಸಿರಾಡಲು ಗಾಳಿ, ಕುಡಿಯಲು ನೀರು ಎಷ್ಟು ಮುಖ್ಯವೋ ಸಂವಿಧಾನವೂ ಅಷ್ಟೇ ಮುಖ್ಯ” ಎಂದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಸಿಯೂಟ ಯೋಜನೆಯ ನಿಧಿ ಹಂಚಿಕೆ; ಪುಡಿಗಾಸಿನ ಏರಿಕೆಗೆ ಎಐಯುಟಿಯುಸಿ ಖಂಡನೆ

“ಭಾರತ ಸಂವಿಧಾನವನ್ನು ಈ ನೆಲದಲ್ಲಿ ಹುಟ್ಟಿರಿವದರಿಂದ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಸಂವಿಧಾನವೆಂದರೆ ಏನು? ಸಂವಿಧಾನ ಯಾಕೆ ಬರೆದರು? ಸಂವಿಧಾನದಲ್ಲಿ ಏನಿದೆ? ಎಂಬುದನ್ನು ತಿಳಿದುಕೊಳ್ಳದೇ ಇರುವವರು ಈ ಭೂಮಿ ಮೇಲೆ ಇದ್ದೂ ಸತ್ತಂತೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳಿ, ತಿಳಿಯದಿದ್ದರೆ ನಿಮ್ಮ ಮಕ್ಕಳಿಂದ ಅಥವಾ ಸಂಗಮ ಸಂಸ್ಥೆಯಿಂದ ತಿಳಿದುಕೊಳ್ಳಿ” ಎಂದು ಸಲಹೆ ಹೇಳಿದರು.

ಸಂವಿಧಾನ ದಿನದ ಪ್ರಯುಕ್ತ ನೂರಾರು ಸಂಖ್ಯೆಯಲ್ಲಿ ಶೋಷಿತ ಸಮುದಾಯಗಳು, ಕಾರ್ಯಕರ್ತರು ಸೇರಿ ಸಂವಿಧಾನ ಜಾಥಾ ನಡೆಸಿದರು.

ಕಾರ್ಯಕ್ರಮದಲ್ಲಿ ಡಾ. ದಸ್ತಿಗಿರಿ ಮುಲ್ಲಾ, ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯ ಡಿ. ಮೇಲ್ಲೋ, ಮಾಲಕಪ್ಪ ಹಲಗಿ, ಶ್ರೀಶೈಲ ಗಣಿಹಾರ, ಉಮೇಶ್ ಹಾಗೂ ಹಳ್ಳಿ ಅಭಿವೃದ್ಧಿ ಸಮಿತಿಗಳ ಜನವೇದಿಕೆ ನಾಯಕರು, ಮಹಿಳಾ ಸಂಘದ ಸದಸ್ಯರು, ಕಟ್ಟಡ ಕಾರ್ಮಿಕರು, ಮನರೇಗಾದಲ್ಲಿ ಕೆಲಸ ಮಾಡುವವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X