ಪತ್ರಿಕೋದ್ಯಮ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ 40ಕ್ಕೂ ಹೆಚ್ಚು ಪುಸ್ತಕಗಳು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ತಿಳಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು ಕೆಲವು ದಶಕಗಳಿಂದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದು, ಮಾರಾಟಕ್ಕೆ ಲಭ್ಯವಿವೆ. ಹಿರಿಯ ಪತ್ರಕರ್ತರು, ಪರಿಣಿತರು ಬರೆದಿರುವ ಈ ಪುಸ್ತಕಗಳು ಯುವ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಈ ಪುಸ್ತಕಗಳ ಮೇಲೆ ಶೇ 20 ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಪುಸ್ತಕಗಳ ಕುರಿತ ಮಾಹಿತಿಯನ್ನು ಎಕ್ಸ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿನ ಅಕಾಡೆಮಿಯ 2 @karmediaacademy Karnataka Media Academy ಯಿಂದ ಪಡೆಯಬಹುದಾಗಿದೆ.
ಪತ್ರಿಕೋದ್ಯಮ ಬೋಧಿಸುವ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಸಗಟು ಖರೀದಿ ಮಾಡಲು ಬಯಸುವವರು ಅಕಾಡೆಮಿಯ ಕಚೇರಿ ದೂರವಾಣಿ 080 22860264 ನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಮನುಕುಲದ ಉಳಿವಿಗೆ ಪರಿಸರ ಅತ್ಯವಶ್ಯಕ: ವನಿತಾ ಆರ್