ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ಆಯುಧಗಳಿಂದ ಶೋಷಿತರ ಸಮಸ್ಯೆ ಪರಿಹರಿಸಿಲು ಸಾಧ್ಯ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮನಗಂಡಿದ್ದರು ಎಂದು ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸು ಮಾದರ ಕಟ್ಟಿಮನಿ ಹೇಳಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಂಬೇಡ್ಕರ್ ಸೇನೆ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. “ಡಾ. ಬಿ ಆರ್ ಅಂಬೇಡ್ಕರ್ ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ವೈಚಾರಿಕವಾಗಿ ಸದೃಢರಾದಾಗ ಮಾತ್ರ ನಮ್ಮಲ್ಲಿ ಬದಲಾವಣೆ ಸಾಧ್ಯ” ಎಂದರು.
ತಾಲೂಕು ಘಟಕದ ಅಧ್ಯಕ್ಷ ಗೋಪಾಲ ಕಟ್ಟಿಮನಿ ಮಾತನಾಡಿ, “ಸಂಘಟೆನೆಯಲ್ಲಿ ಶಿಸ್ತನ್ನು ಕಡ್ಡಾಯವಾಗಿ ಪಾಲಿಸಬೇಕು. ಪದಾಧಿಕಾರಿಗಳು ಸಂಘಟನೆ ನಿಯಮ ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಸಂಘಟನೆ ತನ್ನ ಉದ್ದೇಶದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ನಾಯಕರಾದವರು ಇತರರಿಗೆ ಆದರ್ಶವಾಗಿರಬೇಕು. ಸಮುದಾಯದ ಸಮಸ್ಯೆಗಳಿಗೆ ಧ್ವನಿಯಾಗಿ ಸಂಘಟನೆ ಕಟ್ಟುವ ಅವಶ್ಯಕತೆ ಇದೆ” ಎಂದರು.
ಸಂಘಟನೆಯ ಶಿವಪುರ ಗ್ರಾಮದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮೆಹಬೂಬ್ ಆರ್. ಅವಟಿ ಹಾಗೂ ಉಪಾಧ್ಯಕ್ಷರಾಗಿ ಮೌಲಾಲಿ ಪಿಂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು.
ಇದನ್ನೂ ಓದಿ: ವಿಜಯಪುರ | ಚಿತ್ರಕಲಾ ಶಿಕ್ಷಕರ ನೇಮಕದಲ್ಲಿ ಸರ್ಕಾರ ತಾತ್ಸಾರ; ಪೊನ್ನಪ್ಪ ಕಡೇಮನಿ ಆಕ್ರೋಶ
ಕಾರ್ಯದರ್ಶಿ ಮಹಾದೇವ ಅಸ್ಕಿ, ಅಂಬೇಡ್ಕರ್ ಸೇನೆ ತಾಲೂಕು ಘಟಕದ ಉಪಾಧ್ಯಕ್ಷ ಸೋಮು ಚಕ್ರವರ್ತಿ, ಪದಾಧಿಕಾರಿಗಳಾದ ಮರಿಯಪ್ಪ ಚಲವಾದಿ, ಚಾಂದ್ ಬಾಷಾ ವಜ್ಜಲ್, ಪರುಶುರಾಮ ನಾಲತವಾಡ ಇದ್ದರು.