ವಿಜಯಪುರ | ರೈತರು ವಿದ್ಯುತ್ ಪರಿಕರಗಳೊಂದಿಗೆ ಜಾಗೃತಿಯಿಂದ ಕೆಲಸ ಮಾಡಬೇಕು: ಬಂಗಾರಮ್ಮ ದೊಡ್ಡಮನಿ

Date:

Advertisements

ಮಳೆಗಾಲದಲ್ಲಿ ರೈತರು ವಿದ್ಯುತ್ ಪರಿಕರಗಳೊಂದಿಗೆ ಜಾಗೃತಿ ವಹಿಸಿ ಕೆಲಸ ಮಾಡಬೇಕು ಎಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಬಂಗಾರಮ್ಮ ಮಾನಪ್ಪ ದೊಡ್ಡಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದು, “ಮಳೆಗಾಲದಲ್ಲಿ ಎಷ್ಟು ಹೊತ್ತಿಗೆ ಬೇಕಾದರೂ ಕರೆಂಟ್ ಬರಬಹುದು. ಆದ್ದರಿಂದ ರೈತ ಬಾಂಧವರು ಕರೆಂಟ್ ಇರುವುದಿಲ್ಲವೆಂದು ತಿಳಿದು ಯಾವುದೇ ರೀತಿಯ ವಿದ್ಯುತ್ ಕಂಬ, ತುಂಡಾಗಿರುವ ವೈರ್‌ಗಳನ್ನು ಸುರಕ್ಷಾ ಸಾಧನಗಳಿಲ್ಲದೆ ಮುಟ್ಟಬಾರದು” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಲೆಮಾರಿ ಸುಡಗಾಡು ಸಿದ್ದರ ಕಾಲೋನಿಗೆ ಸೋಲಾರ್ ಲೈಟ್ ವಿತರಣೆ; ಕೇತೇಶ್ವರ ಶ್ರೀ ಶ್ಲಾಘನೆ.

Advertisements

“ಮಳೆಗಾಲದಲ್ಲಿ ವಿದ್ಯುತ್‌ಗೆ ಸಂಬಂಧಿಸಿದ ಉಪಕರಣಗಳಿಂದ ದೂರ ಇರಬೇಕು. ಹೊಲದಲ್ಲಿ ಲೈನ್ ತುಂಡಾಗಿದ್ದರೆ, ವಿದ್ಯುತ್ ಸಮಸ್ಯೆ ಇದ್ದರೆ ತಕ್ಷಣ ಕೆಇಬಿಯವರಿಗೆ ಕರೆ ಮಾಡಿ ತಿಳಿಸಬೇಕು. ಹೊಲದ ಬೋರ್ವೆಲ್ ಹಾಗೂ ಕೆನಾಲ್ ಕಾಲುವೆಗಳಲ್ಲಿನ ಮೋಟಾರ್‌ಗಳನ್ನು ಹಾಗೂ ಅವುಗಳಿಗೆ ಸಂಪರ್ಕವಾಗಿರುವ ವೈರ್‌ಗಳ ಕುರಿತು ಜಾಗೃತಿ ವಹಿಸಬೇಕು. ಯಾವುದೇ ಟ್ರಾನ್ಸ್‌ಫಾರ್ಮರ್‌ ಕೆಲಸಗಳಲ್ಲಿ ಲೈನ್ ಮ್ಯಾನ್‌ ಸಹಾಯ ಪಡೆದು ಕೆಲಸ ನಿರ್ವಹಿಸಬೇಕು” ಎಂದು ತಿಳಿಸಿದರು.

“ಮಳೆಗಾಲ ಜೋರಾಗುತ್ತಿರುವುದರಿಂದ ತುಂಬಾ ವಿದ್ಯುತ್ ಅನಾಹುತಗಳು ಸಂಭವಿಸುತ್ತಿರುತ್ತವೆ. ರೈತ ಈ ದೇಶದ ಬೆನ್ನೆಲುಬು, ಪ್ರತಿ ರೈತನ ಜೀವವೂ ಅತ್ಯಮೂಲ್ಯ. ಹಾಗಾಗಿ ರೈತರು ಹೊಲಗಳಲ್ಲಿ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

Download Eedina App Android / iOS

X