18 -ಫ್ಯಾನ್ಸ್​ ಸಂಬಂಧ ಬಿಡಿಸಲಸಾಧ್ಯ ನಂಟು; ಅಮೋಘ ಅವಿಸ್ಮರಣೀಯ ಕ್ಷಣಕ್ಕೆ ವಿರಾಟ್ ಕೊಹ್ಲಿ ಸಾಕ್ಷಿ

Date:

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತು.

- Advertisement -

ಅಹಮದಾಬಾದ್​ನಲ್ಲಿ ಮಂಗಳವಾರ (ಜೂ.3) ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ ರಜತ್ ಪಾಟೀದಾರ್ ನಾಯಕತ್ವದ ಆರ್​ಸಿಬಿ ಪಡೆ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಕೊನೆಯ ಓವರ್‌ ಎರಡು ಪಂದ್ಯಗಳಿಗೂ ನಿರ್ಣಾಯವಾಗಿತ್ತು. ‌ಜೋಶ್ ಹೆಜಲ್‌ ವುಡ್‌ ತಮ್ಮ ಕೊನೆಯ ಕೋಟಾದ ಓವರ್‌ ಮಾಡಲು ಮುಂದಾದರು. ಎರಡು ಬಾಲ್‌ಗಳು ಡಾಟ್‌ ಆಗುತ್ತಿದ್ದಂತೆ ಗೆಲುವಿನ ಕಡೆ ಆರ್​ಸಿಬಿ ಮುಖಮಾಡಿತು. ಇನ್ನು ಆರ್​ಸಿಬಿ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ಕ್ರಿಕೆಟ್‌ ಲೋಕದ ಆರ್‌ಸಿಬಿ ದಂತಕತೆ ಕಿಂಗ್ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಕಣ್ಣೀರು ಇಟ್ಟು, ಭಾವುಕರಾದ ಕೊಹ್ಲಿ, ತಮ್ಮ ಮುಖವನ್ನು ಮುಚ್ಚಿಕೊಂಡು ಮೈದಾನದಲ್ಲೇ ನಿಂತರು.

ಆರ್​ಸಿಬಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಮಂಡಿಯೂರಿ ಕೊಹ್ಲಿ ಕಣ್ಣೀರಿಟ್ಟರು. ಪಂದ್ಯ ನೋಡಲು ಬಂದಿದ್ದ ಆರ್​ಸಿಬಿ ಮಾಜಿ ಸ್ಟಾರ್‌ ಆಟಗಾರ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಮೈದಾನದಕ್ಕೆ ಓಡೋಡಿ ಬಂದು, ಇವರನ್ನು ತಬ್ಬಿಕೊಂಡು ಖುಷಿ ಹಂಚಿಕೊಂಡರು. ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆಗೂ ವಿರಾಟ್ ಮೈದಾನದಲ್ಲಿ ಸಂಭ್ರಮದ ಕ್ಷಣವನ್ನು ಕಳೆದರು.

ಕೊಹ್ಲಿ 18ರ ನಂಟು

18.. ಇದು ಕಿಂಗ್ ಕೊಹ್ಲಿಯ ಜೆರ್ಸಿ ನಂಬರ್. ಈ ನಂಬರ್​ ಜೊತೆಗಿನ ಫ್ಯಾನ್ಸ್​ ಸಂಬಂಧ ಬಿಡಸಲಾಸಾಧ್ಯ. ಈ ಕಾರಣಕ್ಕೆ ಫ್ಯಾನ್ಸ್​, ಸೀಸನ್-18ರ ಐಪಿಎಲ್​​ ಆರ್​ಸಿಬಿ ಇಯರ್ ಅಂತಾನೇ ವಿಶ್ಲೇಷಣೆ ಮಾಡಿದ್ದರು. ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಸೀಸನ್​-18ರ ಐಪಿಎಲ್, ಮೋಸ್ಟ್​ ಎಮೋಷನಲ್ ಸೀಸನ್​​ ಆಗಿದೆ. 18 ವರ್ಷಗಳಿಂದ ಒಂದೇ ತಂಡದ ಪರ ಆಡಿದ್ದು ಅವರ ದಾಖಲೆ ಮತ್ತು ಹೆಗ್ಗಳಿಕೆ. ಇವರೆಗೂ IPL ಕಪ್ ಗೆದ್ದಿರಲಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಸಹಜವಾಗಿಯೇ ಭಾವುಕರಾದರು.

ಆರ್‌ಸಿಬಿ ತಂಡಕ್ಕೆ ಕೊಡುಗೆ ನೀಡಿದ ಮಾಜಿ ಆಟಗಾರರನ್ನು ಸ್ಮರಿಸಿದ ವಿರಾಟ್‌ ಕೊಹ್ಲಿ, “ಎಬಿಡಿ, ಕ್ರಿಸ್‌ ಗೇಲ್‌ ಅವರಂತಹ ಆಟಗಾರರು ಈ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಈ ಗೆಲುವು ಮಾಜಿ ಆಟಗಾರರದ್ದೂ ಹೌದು. ನಾನು ಅವರೊಂದಿಗೂ ಈ ಅವಿಸ್ಮರಣೀಯ ಗೆಲುವನ್ನು ಸಂಭ್ರಮಿಸಲು ಬಯಸುತ್ತೇನೆ” ಎಂದು ಗೆಲುವಿನ ಬಳಿಕ ನುಡಿದರು.

ಕೊಹ್ಲಿಗೆ 771 ಬೌಂಡರಿ ಗರಿ

ಐಪಿಎಲ್‌ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಫೈನಲ್‌ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ವಿರಾಟ್ ಭಾಜನರಾಗಿದ್ದಾರೆ. 259 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಈವರೆಗೆ 771 ಬೌಂಡರಿಗಳನ್ನು ಗಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ...

ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್‌ಗೆ ಬಂಗಾರ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನ 15ನೇ ದಿನ...