ವಿಜಯಪುರ | ಲಿಂಗ ಸಮಾನತೆ ಮತ್ತು ಆರ್ಥಿಕ ಸಬಲೀಕರಣ ಮುಖ್ಯ: ಹಿಲರಿ ಪಿಂಟೋ

Date:

Advertisements

ಲಿಂಗ ಸಮಾನತೆ ಬಗ್ಗೆ ಮಕ್ಕಳಿಂದ ಕಿರುಚಿತ್ರವನ್ನು ತೋರಿಸುವುದರ ಮೂಲಕ ಮಹಿಳೆಯರಿಗೆ ಜಾಗೃತಿ ಮೂಡಿಸಲಾಯಿತು. ನಮ್ಮ ದೀಪಾಲಯ ಸಂಸ್ಥೆ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಸ್ವಸಹಾಯ ಗುಂಪುಗಳನ್ನು ಕಟ್ಟಿಕೊಂಡು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಮುಖ್ಯ ಕೆಲಸವಾಗಿದೆ ಎಂದು ಸಂಸ್ಥೆಯ ಹಿಲರಿ ಪಿಂಟೋ ಹೇಳಿದರು.

ವಿಜಯಪು ಜಿಲ್ಲೆಯ ಇಂಡಿ ನಗರದಲ್ಲಿ ದೀಪಾಲಯ ಸಂಸ್ಥೆ ಹಾಗೂ ಸ್ವಸಹಾಯ ಸಂಸ್ಥೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದರು.

ಮಹಾಂತೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಅಂತಾರಾಷ್ಟ್ರೀಯ ಮಹಿಳಾ ದಿನ, ಮಹಿಳೆಯರಿಗೆ ಅತ್ಯಂತ ಸ್ಪೂರ್ತಿದಾಯಕ ದಿನವಾಗಿದೆ. ಇತಿಹಾಸದ ಉದ್ದಕ್ಕೂ ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅದನ್ನು ಸ್ಮರಿಸಿಕೊಳ್ಳಲೇಬೇಕಾದ ಅವಶ್ಯಕತೆ ಇಂದಿನ ತುರ್ತು ಅಗತ್ಯ” ಎಂದರು.

Advertisements

ಒಡಲ ಮಹಿಳಾ ಧ್ವನಿ ಒಕ್ಕೂಟ ಜಿಲ್ಲಾ ಮುಖಂಡೆ ಡಾ. ಭುವನೇಶ್ವರಿ ಕಾಂಬಳೆ ಮಾತನಾಡಿ, “ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ, ಸಮಾಜದ ಪ್ರಗತಿಗೆ ಮಹಿಳೆ ತುಂಬಾ ಪ್ರಮುಖ ಪಾತ್ರವಹಿಸಿದ್ದಾಳೆ. ಹಿಂದಿನ ದಿನಮಾನಗಳಲ್ಲಿ ಮಹಿಳೆಯನ್ನು ತುಚ್ಛ ಭಾವನೆಯಿಂದ ನೋಡುತ್ತಿದ್ದರು. ಆದರೆ ಅದೀಗ ಬದಲಾಗಿದೆ. ಮಹಿಳೆಯೂ ಕೂಡ ಪುರಷನಿಗೆ ಸಮಾನಳು ಎಂಬುದನ್ನು ತೋರಿಸಿದ್ದಾಳೆ. ಪುರುಷರಂತೆ ಮಹಿಳೆಯೂ ಕೂಡ ಕೆಲಸ ಮಾಡಬಲ್ಲಳೆಂದು ತೋರಿಸಿಕೊಟ್ಟಿದ್ದಾಳೆ” ಎಂದರು.

“ಪುರುಷ ಪ್ರಧಾನ ವ್ಯವಸ್ಥೆಯನ್ನು ಮೆಟ್ಟಿನಿಂತು ಅದರ ವಿರುದ್ಧ ಧೈರ್ಯವಾಗಿ ಮುನ್ನಡೆಯುತ್ತಿರುವುದು ತುಂಬಾ ಆಶಾದಾಯಕ ಬೆಳವಣಿಗೆ” ಎಂದರು.

ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭ ಮಾಡಿ, ಉದ್ಘಾಟನೆಯ ಮೊದಲು ಸಂವಿಧಾನ ಪೀಠಿಕೆ ಬೋಧನೆ ಮಾಡಿದರು.

ಈ ಸುದೆದಿ ಓದಿದ್ದೀರಾ? ತುಮಕೂರು | ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸಬಾರದು: ಡಾ. ನಾಗಲಕ್ಷ್ಮೀ ಚೌಧರಿ

ಸಭೆಯ ಅಧ್ಯಕ್ಷತೆಯನ್ನು ಸಹೋದರಿ ಜಾಸಿಂತ ಮಾಚಾದೊ ವಹಿಸಿದ್ದರು. ಶೈಲಜಾ ಜಾಧವ, ಸ್ವಸಹಾಯ ಮಹಿಳಾ ಒಕ್ಕೂಟದ ಅಧ್ಯಕ್ಷರು, ಶಕ್ತಿ, ಜ್ಞಾನ, ದೀಪಾ, ಶಾಂತಿ, ಸಾಧನೆ, ಸುರಕ್ಷಾ ಒಕ್ಕೂಟದಿಂದ ಅಧ್ಯಕ್ಷೆಯರಾದ ಯು ಮಾದೇವಿ ಚೆನ್ನಿರಪ್ಪಗೋಳ, ಜಯಶ್ರೀ, ಮಾತಾಬಾಯಿ ಮಾದರ, ಸವಿತಾ ಚವಾಣ್, ದೇವಿಕಾ, ರೇಣುಕಾ ನಾಟೆಕರ, ಶಾರದಾ ಮೊಸಲೆ,
ಸಿದ್ದಮ್ಮ ಗುಣಕಿ, ಶೀಲವಂತರ ಸರ್, ರಾಧಾ ನಿಂಬಳಕರ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X