ಪರರ ಬಗ್ಗೆ ಕಾಳಜಿ, ರಂಜಾನ್ ಉಪವಾಸ ಸಂದರ್ಭದಲ್ಲಿ ನಮ್ಮಲ್ಲಿರುವಂತಹ ಸಹೋದರ ಸಹೋದರಿಯರನ್ನು ಒಳಗೊಳ್ಳುವುದು ಆಗಿದೆ. ಇಫ್ತಾರ್ ಕೂಟದಲ್ಲಿ ಮುಸ್ಲಿಮರಷ್ಟೇ ಅಲ್ಲ, ಎಲ್ಲ ಧರ್ಮದ ಜನರನ್ನು ಸೇರಿಸಿಕೊಂಡು ಈ ಒಂದು ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿದೆ ಎಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಾಚಾದೊ ಹೇಳಿದರು.
ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆ, ನಗರ ಸ್ಲಮ್ ಅಭಿವೃದ್ಧಿ ಸಮಿತಿ, ವಿಜಯಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಮಹಿಳಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
“ಸಾಮಾಜಿಕ ಜೀವನದಲ್ಲಿ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿತುಕೊಳ್ಳುವುದೇ ಇಫ್ತಾರ್ ಕೂಟದ ಉದ್ದೇಶಚಾಗಿದೆ. ಪ್ರೀತಿ, ಭಾಂದವ್ಯ, ಬ್ರಾತೃತ್ವ ಭಾವನೆಯನ್ನು ಮೂಡಿಸಲು ಈ ಇಫ್ತಾರ್ ಕೋಟವನ್ನು ಆಯೋಜನೆ ಮಾಡಲಾಗಿದೆ” ಎಂದು ಹೇಳಿದರು.
ಪ್ರೊ. ಜೆ ಎಸ್ ಪಾಟೀಲ ಮಾತನಾಡಿ, “ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವಂತಹ ಯುದ್ಧ ಇನ್ನಾವುದರಲ್ಲಿಯೂ ನಡೆಯುವುದಿಲ್ಲ. ಖಾಸಗಿ ಆಸ್ತಿ ಸಾಮಾಜೀಕರಣ ಮಾಡುವುದರಿಂದ ಇದು ಸಾಮಾಜಿಕ ವಾತಾವರಣ ಅದೆಗೆಡಿಸುವುದಾಗಿದೆ. ನಮ್ಮ ದೇಶವು ಬಹುತ್ವವನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವವನ್ನು ಹೊಂದಿರುವಂತಹ ಸಂವಿಧಾನಕ್ಕೆ ಬದ್ಧವಾದ ದೇಶವಾಗಿದೆ” ಎಂದರು.
ಫಾದರ್ ಫ್ರಾನ್ಸಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಒಬ್ಬ ವ್ಯಕ್ತಿಯನ್ನು ಅರಿಯಬೇಕೆಂದರೆ ಆ ವ್ಯಕ್ತಿಯ ಜೊತೆ ಬೆರೆತಾಗ ಮಾತ್ರ ಆ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ವ್ಯಕ್ತಿಯನ್ನು ಅರ್ಥ ಮಾಡಿಕೊಂಡರೆ ಸಮಾಜವನ್ನು ಅರ್ಥ ಮಾಡಿಕೊಂಡಂತೆ. ಸಮಾಜದಲ್ಲಿರುವ ಇತರ ಧರ್ಮೀಯರನ್ನು ಸೋದರತ್ವದಿಂದ ಕಾಣುವುದು ಮುಖ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | 32 ಚೆಕ್ ಪೋಸ್ಟ್, ದಾಖಲೆ ರಹಿತ ನಗದು, ಚಿನ್ನ, ಅಕ್ರಮ ಮದ್ಯದ ಮೇಲೆ ನಿಗಾ: ಡಿಸಿ
ಕಾರ್ಯಕ್ರಮಕ್ಕೂ ಮೊದಲು ಭಾರತ ಸಂವಿಧಾನ ಪೀಠಿಕೆ ಓದುವುದರ ಮೂಲಕ ಆರಂಭಿಸಿದರು.
ಈ ಸಂದರ್ಭದಲ್ಲಿ ಡಿವಿಪಿ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ, ಮಹೇಜ ಬಿನ್ ಖಾಜಿ ಜಮಾತ್ ಮಹಿಳಾ ವಿಭಾಗದ ಜಿಲ್ಲಾ ಮುಖ್ಯಸ್ಥರು, ಅಕ್ರಮ ಮಾಶಾಳಕರ, ರಾಜೇಶ್ವರಿ ಮಠಪತಿ, ಮುತ್ತುಣ್ಣ ಭೂವಿ, ಎದ್ದೇಳು ಕರ್ನಾಟಕದ ಮಹಮ್ಮದ್ ಅಬ್ದುಲ್ ಖದೀರ್, ಜಮಾತ್ ಇಸ್ಲಾಮಿ ಸ್ಟಾನಿಕ ಅಧ್ಯಕ್ಷ ಹುಲಿಕಟ್ಟಿ ಸರ್, ದಸ್ತಗಿರಿ ಮುಲ್ಲಾ, ಡಿವಿಪಿ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಎಐಡಿಎಸ್‌ಒ ಜಿಲ್ಲಾ ಮುಂಖಂಡೆ ಕಾವೇರಿ ರಜಪೂತ ಸೇರಿದಂತೆ ಇತರರು ಇದ್ದರು.
