ಬೆಳಗಾವಿ | ನೀರಿನ ಸಮಸ್ಯೆ; ಕಟ್ಟಡ ನಿರ್ಮಾಣಕ್ಕೂ ತಟ್ಟಿದ ಬಿಸಿ

Date:

ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಕೊರತೆಯಿಂದಾಗಿ ನಿರ್ಮಾಣ ಕಾರ್ಯಗಳಿಗೆ ಹೊಡೆತ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯಗಳಲ್ಲಿ ನೀರಿನ ಮಟ್ಟವು ವೇಗವಾಗಿ ಕ್ಷೀಣಿಸುತ್ತಿರುವುದರಿಂದ ನೀರನ್ನು ನ್ಯಾಯಯುತವಾಗಿ ಬಳಸುವಂತೆ ಸ್ಥಳೀಯ ಆಡಳಿತವು ಸಾರ್ವಜನಿಕರನ್ನು ಒತ್ತಾಯಿಸಿದೆ. ದೈನಂದಿನ ನಿಗದಿತ ನೀರು ಸರಬರಾಜು ಕೂಡಾ ವಿಳಂಬವಾಗಿದೆ.

ರಕ್ಕಸಕೊಪ್ಪ ಜಲಾಶಯದ ನೀರನ್ನು ಬೇರೆ ಉದ್ದೇಶಕ್ಕೆ ಬಳಸದೆ ಬೆಳಗಾವಿ ನಗರಕ್ಕೆ ನೀರು ಪೂರೈಸಲು ಕಟ್ಟುನಿಟ್ಟಾಗಿ ಮೀಸಲಿಡಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಾಪಮಾನ ಹೆಚ್ಚುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹಾಗಾಗಿ ಸರ್ಕಾರವು ಟ್ಯಾಂಕರ್ ನೀರನ್ನು ಒದಗಿಸಬೇಕೆಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇಲ್ಲಿ ನೂರಾರು ನಿರ್ಮಾಣ ಹಂತದ ಕಟ್ಟಡಗಳಿವೆ. ಹಲವಾರು ನವೀಕರಣದ ಕಟ್ಟಡಗಳು ವಿವಿಧ ಹಂತಗಳಲ್ಲಿವೆ. ನೀರಿನ ಕೊರತೆಯಿಂದಾಗಿ ಇವುಗಳಲ್ಲಿ ಹೆಚ್ಚಿನವುಗಳ ಕೆಲಸ ಸ್ಥಗಿತಗೊಂಡಿದೆ. ಎಂಜಿನಿಯರ್‌ಗಳು ಮತ್ತು ಗುತ್ತಿಗೆ ಸಂಸ್ಥೆಗಳು ಈಗ ಗಡುವನ್ನು ಪೂರೈಸಲು ಬಳಕೆದಾರರಿಗೆ ಸಮಯಕ್ಕೆ ಸರಿಯಾಗಿ ಬಿಟ್ಟುಕೊಡಲು ಶ್ರಮಿಸುತ್ತಿದ್ದಾರೆ. ಆದರೆ ಟ್ಯಾಂಕರ್ ನೀರನ್ನು ಸಂಗ್ರಹಿಸಿ ಕಾಮಗಾರಿ ಡೆಸುತ್ತಿರುವುದರಿಂದ ಈ ಯೋಜನೆಗಳಿಗೆ ವೆಚ್ಚ ಹೆಚ್ಚಾಗಿದೆ.

“ನಿರ್ಮಾಣ ಕಾರ್ಯಗಳಿಗೆ ಬೋರ್‌ವೆಲ್ ಅಥವಾ ಟ್ಯಾಂಕರ್ ಮಾತ್ರ ನೀರಿನ ಮೂಲವಾಗಿ ಅನುಮತಿಸಲಾಗಿದೆ. ಪ್ರಸ್ತುತ, ಸ್ವಂತ ಕೊಳವೆಬಾವಿಗಳನ್ನು ಹೊಂದಿರುವ ಯೋಜನೆಗಳ ಕೆಲಸ ಮಾತ್ರ ಮುಂದುವರೆದಿದೆ” ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.

“ಕೆಲವರು ಕೊಳವೆಬಾವಿಗಳನ್ನು ಕೊರೆಸುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ. ಹಾಗಾಗಿ ಕೊಳವೆಬಾವಿಗಳಲ್ಲಿನ ನೀರೂ ಕೂಡಾ ಸಾಕಾಗುವುದಿಲ್ಲ. ಇದರಿಂದ ಪ್ರತಿಯೊಬ್ಬರೂ ಟ್ಯಾಂಕರ್‌ಗಳನ್ನು ಅವಲಂಬಿಸುವಂತಾಗಿದ್ದು, ಟ್ಯಾಂಕರ್ ಬೇಡಿಕೆ ಅನೇಕ ಪಟ್ಟು ಹೆಚ್ಚಾಗಿದೆ” ಎಂದು ಹೇಳಿದರು.

ತಿಲಕವಾಡಿಯ ಶಹಾಪುರದ ಬಿಲ್ಡ‌ರ್‌ಗಳು ಜೂನ್ 2023ರಲ್ಲಿ ಯೋಜನೆಯನ್ನು ಪ್ರಾರಂಭಿಸಿದ್ದರು. ಆದರೆ ಈ ಫೆಬ್ರವರಿಯಿಂದ ನೀರಿನ ತೀವ್ರ ಕೊರತೆ ಕಂಡುಬಂದಿದೆ. 5,000 ಲೀಟರ್ ನೀರಿನ ಟ್ಯಾಂಕರ್‌ ಬೆಲೆ ಈ ಹಿಂದೆ ₹800 ರಿಂದ ₹900ರ ನಡುವೆ ಇತ್ತು. ಆದರೆ ಈಗ ₹1,500ಕ್ಕೆ ಏರಿಕೆಯಾಗಿದೆ. ಇದರಿಂದ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ ಮತ್ತು ಕಟ್ಟಡದ ಪೂರ್ಣಗೊಳಿಸುವಿಕೆ ಮತ್ತಷ್ಟು ವಿಳಂಬವಾಗಲಿದೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ʼವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿʼ ಅಭಿಯಾನ

ಜಲಾಶಯಗಳಿಗೆ ಮತ್ತೆ ನೀರು ಹರಿಯಲು ಪ್ರಾರಂಭಿಸುವವರೆಗೆ ನಿರ್ಮಾಣ ಕಾರ್ಯಗಳಿಗೆ ಯಾವುದೇ ಟ್ಯಾಂಕರ್ ನೀರನ್ನು ಪೂರೈಸದಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಬಿಸಿಸಿ ಅಧಿಕಾರಿಗಳು ತಿಳಿಸಿದ್ದಾರೆ.

“ಬರ ಪರಿಸ್ಥಿತಿಯು ರೈತರಿಗೆ ಮಾತ್ರವಲ್ಲ. ನಿರ್ಮಾಣ ಕ್ಷೇತ್ರದವರಿಗೂ ಜೀವನವನ್ನು ಕಷ್ಟಕರವಾಗಿಸಿದೆ” ಎಂದು ಅಸಂಘಟಿತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎನ್ ಆರ್ ಲಾತೂರ್ ಬೇಸರ ವ್ಯಕ್ತಪಡಿಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಬೀದಿ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳ ದರ್ಪ; ಬದುಕು ಬೀದಿ ಪಾಲು

ಶಿಲ್ಪಕಲೆಗಳ ತವರೂರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ, ಚನ್ನಕೇಶವನ ನಾಡು ವಗೈರೆ...

ಹಾಸನ | 3ನೇ ಅವಧಿಗೆ ಮೋದಿ ಪ್ರಧಾನಿ; 12 ಕಿ.ಮೀ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದ ಮೋದಿ ಭಕ್ತ

ಮೋದಿ 3ನೇ ಬಾರಿಗೆ ಪ್ರಧಾನಿಯಗಬೇಕೆಂದು ಹರಕೆ ಹೊತ್ತಿದ್ದ ಮೋದಿ ಅಭಿಯಾನಿಯೊಬ್ಬ, 12...

ಜೂನ್‌ 16ರಂದು ಬೆಳಗ್ಗೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ಆರಂಭ

ಜೂನ್ 16ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (ಯುಪಿಎಸ್‌ಸಿ) ನಡೆಯುವ ಕಾರಣ...

ವಂಚನೆ, ಜೀವ ಬೆದರಿಕೆ ಆರೋಪ: ಕೇಂದ್ರ ಸಚಿವ ಸೋಮಣ್ಣ ಪುತ್ರನ ವಿರುದ್ಧ ಎಫ್‌ಐಆ‌ರ್

ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ...