2011ನೇ ಸಾಲಿನಿಂದ ನಿವೃತ್ತಿ ಆದ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಉಪಧನ ನಿಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಎಐಯುಟಿಯುಸಿ ಯೊಡನೆ ಸಂಯೋಜಿತಗೊಂಡಿರುವ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ವಿಜಯಪುರ ಜಿಲ್ಲಾ ಸಮಿತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಶಾಲಾಪೂರ್ವ ಶಿಕ್ಷಣ, ಪೌಷ್ಟಿಕತೆ, ಕಿಶೋರಿಯರಿಗೆ, ಗರ್ಭಿಣಿ-ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ಕೆಲಸದಲ್ಲಿ ಕಳೆದ 35 ವರ್ಷಗಳ ಕಾಲ ಕಡಿಮೆ ಗೌರವಧನದಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ಉಪಧನ ನಿಡಬೇಕೆಂದು 2022ರ ಏಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಅದರಂತೆ ಎಲ್ಲಾ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಉಪಧನ ನೀಡಲು ಕ್ರಮ ಕೈಗೊಳ್ಳಲು ಸಂಘ ಆಗ್ರಹಿಸಿತು.
ಈ ವೇಳೆ ಶಾಂತಮ್ಮ ಹಿರೇಗೌಡರ, ಪದ್ಮಾವತಿ ಕುಲಕರ್ಣಿ, ಸಂಗಮ್ಮ ಸಿ ಹಿರೇಮಠ, ಬಸಮ್ಮ ದೂರನಳ್ಳಿ, ಮಲ್ಲಮ್ಮ ಮಡಿವಾಳರ, ಸಂಘದ ಜಿಲ್ಲಾ ಉಪಾಧ್ಯಕ್ಷೆ ನಿಂಗಮ್ಮ ಮಠ, ಸರಸ್ವತಿ ಮದ್ರಿಕಿ, ರೆಣುಕಾ ಹಡಪದ, ಕಾರ್ಯದರ್ಶಿ ಲಕ್ಷ್ಮೀ, ಜಂಟಿ ಕಾರ್ಯದರ್ಶಿ ಗಾಯತ್ರಿ ಜಡಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಜಯಪುರ | ತೊಗರಿ ಇಳುವರಿಯಿಲ್ಲದೆ ರೈತರು ಸಂಕಷ್ಟದಲ್ಲಿ; ಪರಿಹಾರ ಕೋರಿ ಸರ್ಕಾರಕ್ಕೆ ಮನವಿ