ವಿಜಯಪುರ | ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಎದ್ದೇಳು ಕರ್ನಾಟಕ ಸಭೆ

Date:

Advertisements

ದೇಶದಲ್ಲಿ ಅನ್ನದಾತರು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಾರಣ ಕನಿಷ್ಠ ಬೆಂಬಲ ಬೆಲೆ, ಕೃಷಿ  ತಿದ್ದುಪಡೆ ಕಾಯ್ದೆಗಳು ವಾಪಸ್ಸಾಗಲಿ, ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿರುವ ರೈತರನ್ನು, ದಾರಿಯ ಮಧ್ಯದಲ್ಲಿ ತಡೆದು ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಎದ್ದೇಳು ಕರ್ನಾಟಕದ ವಿಜಯಪುರ ಜಿಲ್ಲಾ ಕೋಆರ್ಡಿನೆಟರ್ ಮಹಮ್ಮದ್ ಅಬ್ದುಲ್ ಖಧೀರ್ ಹೇಳಿದರು.

ವಿಜಯಪುರ ಜಿಲ್ಲೆಯ ಚಡಚಣ ನಗರದಲ್ಲಿ ಎದ್ದೇಳು ಕರ್ನಾಟಕ ಮತ್ತು ಈದಿನ.ಕಾಮ್‌ ಸಹಯೋಗದಲ್ಲಿ ತಾಲೂಕು ಮಟ್ಟದ ಸಮಾಲೋಚನಾ ಸಭೆ ನಡೆದಿದೆ. ಸಭೆಯಲ್ಲಿ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಸದಸ್ಯರುಗಳು, ತಾಲೂಕಿನ ಒಡಲ ದನಿ ಮಹಿಳಾ ಒಕ್ಕೂಟ ಸದಸ್ಯರುಗಳು, ಮುಂತಾದ ಸಂಘದ ಮುಖಂಡರು ಭಾಗವಹಿಸಿದ್ದರು. ಸಂವಿಧಾನ ಪೀಠಿಕೆ ಓದಿ ಸಭೆ ಪ್ರಾರಂಭ ಮಾಡಲಾಯಿತು. ಸಭೆಯಲ್ಲಿ ಖಧೀರ್ ಮಾತನಾಡಿದರು.

“ಕಳೆದ ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರವು ರೈತರ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿರುವುದಿಲ್ಲ. ಈ ದುರ್ನೀತಿ ವಿರುದ್ಧ ರೈತರು ಮತ್ತೆ ಬೀದಿಗಿಳಿದರೆ ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ಎದ್ದು ಕಾಣುತ್ತದೆ” ಎಂದು ಟೀಕಿಸಿದರು.

Advertisements

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರಜೆಗಳಿಂದ ಆಯ್ಕೆಯಾಗಿರುವ ಪ್ರತಿನಿಧಿಗಳು, ಪ್ರಜೆಗಳ ಸಮಸ್ಯೆಗಳ ಆಲಿಸಿ ಸಮಸ್ಯೆಗಳ ಬಗೆಹರಿಸಲು ಪ್ರಯತ್ನಿಸಬೇಕೆ ಹೊರತು ಸರ್ವಾಧಿಕಾರಿ ಧೋರಣೆ ಮಾಡುತ್ತಿರುವುದು ಖಂಡನೆಯ ಎಂದರು.

ಸಂವಿಧಾನದ ಮೂಲಭೂತ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ, ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅತ್ತಿಕ್ಕುವಂತ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ – ಇಲ್ಲಿ ಯಾರು ವಿಕಾಸವಾಗಿದ್ದಾರೆ ಎನ್ನುವುದು ಮೂಲಭೂತ ಪ್ರಶ್ನೆ, ಈ ದೇಶದಲ್ಲಿ ಹಸುವಿನಿಂದ ಬಳಲುತ್ತಿರುವ ಲಕ್ಷಾಂತರ ಜನಗಳು ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಪರ್ಯಾಯವಾಗಿ  ಐಷಾರಾಮಿ ಜೀವನ ನಡೆಸುವ ದೊಡ್ಡ ದೊಡ್ಡ ಕಾರ್ಪೊರೇಟ್ ಮನೆತನಗಳ ಕೂಡ ಇವೆ. ಇದು ಮೋದಿ ಸರ್ಕಾರದ ವಿಕಾಸ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವದು ಮೂಲಭೂತ ಹಕ್ಕು. ಅದನ್ನು ಹತ್ತಿಕ್ಕುವ ಪ್ರಯತ್ನಗಳು ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವ,ಬ್ರಾತೃತ್ವ ಇವುಗಳನ್ನು ಕೇಂದ್ರ ಸರ್ಕಾರವು ಅರ್ಥವಿಲ್ಲದಂತೆ ನಡೆದುಕೊಳ್ಳುವುದು  ಅತ್ಯಂತ ವಿಷಾದನೀಯ.

ಬರುವ ದಿನಗಳಲ್ಲಿ ಎದ್ದೇಳು ಕರ್ನಾಟಕ ವಿಜಯಪುರ ಜಿಲ್ಲೆಯ ಜನತೆ  ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಜನಗಳಿಗೆ ಮನವಿ ಮಾಡಿದರು.

ಕರ್ನಾಟಕ ಜ್ಞಾನ ವಿಜ್ಞಾನ ವಿಜಯಪುರ ಜಿಲ್ಲೆಯ ಮುಖಂಡ ಗಣೇಶ್ ಕಾಂಬಳೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಬೇಕಾದರೆ ಸಂವಿಧಾನ ಉಳಿಸುವುದು ಈ ಬೆಳಗ್ಗೆಯ ಅವಶ್ಯಕತೆಯಾಗಿದೆ. ಕಾರಣ ಪ್ರಜಾಪ್ರಭುತ್ವ ಕಗ್ಗೊಲೆ ಯಾಗುತ್ತಿರುವುದು ನಮ್ಮ ಕಣ್ಣೇದುರೇ ಕಾಣುತ್ತಿದೆ. ಕಳೆದ 9ವರ್ಷದಿಂದ ಕೇಂದ್ರದಲ್ಲಿರುವ ಸರ್ಕಾರವು ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವುದು ಅತ್ಯಂತ ಅಸಂಬದ್ಧವಾಗಿದೆ.

ಈ ನೀತಿಗಳನ್ನು ಸಾಮಾನ್ಯ ಜನಗಳಾದ ನಾವು ಅರ್ಥ ಮಾಡಿಕೊಂಡು  ಮುನ್ನಡೆಯ ಬೇಕಾದ ಅವಶ್ಯಕತೆ ಇದೆ. ನಮ್ಮ ದೇಶ ಬಹು ಸಂಸ್ಕೃತಿ ಒಂದಿರುವಂಥದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂಥದ್ದು. ಇಲ್ಲಿ ಅನೇಕ ಧರ್ಮಗಳು, ಜಾತಿ ಮತಗಳು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ, ಇದನ್ನು ಸಹಿಸದ ಕೇಂದ್ರವು ಕೋಮುವಾದದ ವಿಷ ಬೀಜ ಜನರ ಮಧ್ಯೆ ಬಿತ್ತಿ ಚೆಲ್ಲಾಟ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷರಾದ ಮಹಾದೇವ ಅವರು ಮಾತನಾಡಿ, ನಾವು ಇವತ್ತು ಸೇರಿರುವುದು ಭಾಷಣೆ ಮಾಡಿ ಕೈ ತೊಳೆದುಕೊಳ್ಳುವುದು ಅಷ್ಟೇ ಅಲ್ಲ, ಶೋಷಿತ ಸಮುದಾಯ ಒಗ್ಗೂಡಿ ಕೇಂದ್ರ ಸರ್ಕಾರದ ಕೋಮುವಾದಿ ದೃವಿಕರಣವನ್ನು ಒಕ್ಕೂರಿಲಿನಿಂದ  ಹಿಮ್ಮೆಟ್ಟಿಸಿ ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲರೂ ಕೈಜೋಡಿಸಬೇಕಾದ ಅವಶ್ಯಕತೆ ಇದೆ. ಈ ಭಾಗದ ಎಲ್ಲಾ ರೈತ ಸಮುದಾಯ ಶೋಷಿತ ಸಮುದಾಯ ಒಂದಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಒಡಲಾದನಿ ಮಹಿಳಾ ಒಕ್ಕೂಟ ಜಿಲ್ಲಾ ಮುಖಂಡರಾದ ಡಾಕ್ಟರ್ ಭುವನೇಶ್ವರಿ ಕಾಂಬಳೆ ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರುವುದನ್ನು ಬಿಟ್ಟು ಬೀದಿ ಗೆಳೆಯ ಬೇಕಾದ ಅವಶ್ಯಕತೆ ಇದೆ. ಏಕೆಂದರೆ  ಇವತ್ತಿನ ದಿನಮಾನಗಳಲ್ಲಿ ಮಹಿಳೆ ಅಬಲೆಯಲ್ಲ ಸಬಲೇ ಎನ್ನುವುದಕ್ಕೆ  ನಮಗೆ ರಮಬಾಯಿ, ಸಾವಿತ್ರಿಬಾಯಿ ಫುಲೆ ಮುಂತಾದ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಇವೆ. ಅವರ ವಿಚಾರಗಳನ್ನು ಮನನ ಮಾಡಿಕೊಂಡು  ಸಮಾಜದ ಪ್ರಗತಿಗೆ ನಾವು ಕೈಜೋಡಿಸುವ ಗಳಿಗೆ ಅವಶ್ಯಕತೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಕೋ ಆರ್ಡಿಟರ್ ಆಗಿ ಆಯ್ಕೆ ಮಾಡಲಾಯಿತು ಮಲ್ಲು ಪೂಜಾರ್, ಮಹಾದೇವ ಬನಸೋಡೆ ಸರ್ವಾನುಮತದಿಂದ ಆಯ್ಕೆಯಾದರು.

ಈ ಸಂದರ್ಭದಲ್ಲಿ ಪರಮೇಶ್ವರ್ ಸಿಂಗೆ, ನಾರಾಯಣ ವಾಗುಮೊರೆ, ಬಾಬು ಸಾಬ, ಸಿದ್ದಲಿಂಗ ಬಾನಸೋಡೆ, ಸುರೇಶ್ ಶಿಂದೆ, ವಿಜಯ ಕುಮಾರ ರೇವತಗಾವ್, ಪ್ರೇಮ್ ಕುಮಾರ್, ಜಾನುಬಾಯಿ, ಅನುಸೂಯ, ಪ್ರಕಾಶ್ ಬನಸೋಡೆ, ದೇವಾನಂದ ಸಿಂಗೆ, ಅಬ್ದುಲ್ ರಜಾಕ್ ಮುಜಾವರ್, ಜಿಂದೇವಾಲೆ ಚಂದ್ ಸಾಬ್, ಮಲ್ಲಿಕಾರ್ಜುನ್ ಪೂಜಾರಿ, ಶಾರದಾ ಬನಸೋಡೆ, ಶೃತಿ ಚೌದರಿ ಇತರರು ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X