ದೇಶವೀಗ ಬದಲಾವಣೆ ಬಯಸಿದೆ. ವಿಜಯಪುರ ಲೋಕಸಭೆ ಕ್ಷೇತ್ರದ ಜನರೂ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ. ನಮಗೆ ಮತನೀಡಿ ಆರಿಸಿ ಕಳಿಸಿದ್ದೇ ಆದರೆ, ಜಿಲ್ಲೆ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಮಾಡಿ ತೋರಿಸುವೆ. ನಿಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವೆ ಎಂದು ಕಾಂಗ್ರೆಸ್ ಅಭ್ಯರ್ತಿ ರಾಜು ಆಲಗೂರ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ತಾಂಬಾದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಮಾತನಾಡಿದ ಶಾಸಕ ಅಶೋಕ ಮನಗೂಳಿ, “ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನ ಹಿತ ಸಾಧ್ಯ. ಇಷ್ಟು ವರ್ಷ ನೀವು ಕೇಂದ್ರ ಸರ್ಕಾರದಿಂದ ಬರುವ ನಿಮ್ಮ ಹಕ್ಕಿನಿಂದ ವಂಚಿತರಾಗಿದ್ದೀರಿ. ನಿಮ್ಮ ಬದುಕು ಹಸನಾಗಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಮೋದಿಯವರು ಭಾವನಾತ್ಮಕ ವಿಷಯ ಕೆದಕಿ ಜನರನ್ನು ಪ್ರಚೋದಿಸುತ್ತಾರೆ. ಫುಲ್ವಾಮಾ, ರಾಮ ಮಂದಿರ ಎನ್ನುತ್ತಾರೆ. ಕಾಂಗ್ರೆಸ್‌ನ ಕೆಲಸಗಳನ್ನು ನೋಡಿ ನೀವು ಮತ ಹಾಕಿ” ಎಂದು ಮನವಿ ಮಾಡಿದರು.
ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಜಿ.ಪಂ. ಸದಸ್ಯ ಗುರಣ್ಣಗೌಡ ಪಾಟೀಲ ಚಾಂದಕವಟೆ, ರವಿ ಚವ್ಹಾಣ, ಇಲಿಯಾಸ್ ಬೋರಾಮಣಿ, ಗಂಗಾಧರ ಸಂಬಣ್ಣಿ, ಕಾಮೇಶ ಉಕ್ಕಲಿ, ದೊಡ್ಡಮನಿ, ಅಧ್ಯಕ್ಷ ರಜಾಕ್, ಮಶಾಕ್ ಕಾಳೆ, ಫಾರೂಕ್ ಮುಲ್ಲಾ, ಮಹ್ಮದ ಉಜನಿ ಅನೇಕರಿದ್ದರು.