ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ದೇಶಭಕ್ತ ಟಿಪ್ಪು ಸುಲ್ತಾನ್ ಅವರ ದೇಶಭಕ್ತಿ ಹಾಗೂ ಆದರ್ಶಗಳು ನಮಗೆ ದಾರಿದೀಪ ಎಂದು ಟಿಪ್ಪು ಕ್ರಾಂತಿ ಸೇನೆಯ ಅಧ್ಯಕ್ಷ ಖಾಜಂಬರ್ ನದಾಫ್ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಟಿಪ್ಪು ಸುಲ್ತಾನ್ ತನ್ನ ಕೊನೆಯ ಉಸಿರು ಇರುವವರೆಗೂ ಅಪಾರ ದೇಶಪ್ರೇಮದೊಂದಿಗೆ ದೇಶಕ್ಕಾಗಿ ಹೋರಾಟಿದ್ದಾರೆ. ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ಪರಾಕ್ರಮಿ” ಎಂದು ಹೇಳಿದ್ದಾರೆ.
“ದೇಶದ ಹಿತಕ್ಕಾಗಿ ತನ್ನ ಮಕ್ಕಳನ್ನು ಸಹ ಒತ್ತೆಯಿಟ್ಟು ಹೊರಾಡಿದವರು ಟಿಪ್ಪು ಸುಲ್ತಾನ್” ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಟಿಪ್ಪು ಕ್ರಾಂತಿ ಸೇನೆ ಕಾರ್ಯದರ್ಶಿ ನಾಸಿರ್ ತಾಂಬೊಲಿ, ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಆಬೀದ ತಾಂಬೊಳಿ, ಹೈದರ್ ಅಲಿ, ಗೋಪಿ ಭಜಂತ್ರಿ, ತೌಶಿಫ ಭೈರೊಡಗಿ, ಅಲ್ತಾಫ್ ತಾಂಬೋಲಿ, ಸಲೀಂ ಮಮದಾಪೂರ, ಅಜಾದ್ ಜಾಲವಾದ, ನಬಿಲಾಲ ವಾಲಿಕಾರ, ಸದ್ದಾಂ ಕೊರಬು, ಅನ್ಸಾರ್ ನದಾಫ್ ಹಾಗೂ ಇತರರು ಇದ್ದರು.