ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಇದೆ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಮತವನ್ನು ಕೇಳಲು ಹೊರಟಿದೆ. ಆದರೆ, ಮತದಾರರು ಪ್ರಜ್ಞಾವಂತರಾಗಿದ್ದು, ಬಿಜೆಪಿಯ ಸುಳ್ಳು ಭರವಸೆಗಳಿಗೆ ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದ್ದಾರೆ ಎಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಸ್ತುವಾರಿ ಎಚ್.ಎಫ್. ಜಕ್ಕಪ್ಪನವರ ಹೇಳಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಸ್ತುವಾರಿಗಳಾದ ಎಚ್.ಎಫ್. ಜಕ್ಕಪ್ಪನವರ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾದ ಲಕ್ಷ್ಮಣ ಲಗಮಾಗೋಳರವರು ಜಿಲ್ಲಾ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ, ಒಬಿಸಿ, ಮೈನಾರಿಟಿ ವಿಭಾಗಗಳ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಈ ಬಾರಿ ಪರಾಭವಗೊಳಿಸುವುದರ ಮೂಲಕ ರಾಜು ಆಲಗೂರ ರವರನ್ನು ಬಹುಮತದಿಂದ ಗೆಲ್ಲಿಸಿ ಸಂಸತ್ ಭವನಕ್ಕೆ ಕಳಿಸುವ ಕೆಲಸವನ್ನು ಮತದಾರರು ಮಾಡುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ.ಜಾ. ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು ಅವಿರತವಾಗಿ ಚುನಾವಣೆ ನಡೆಯುವವರೆಗೂ ಸನ್ಮಾನ್ಯ ರಾಜು ಆಲಗೂರರವರ ಗೆಲುವಿಗಾಗಿ ಶ್ರಮಿಸುತ್ತೇವೆ. ಸ್ವತಃ ಒಬ್ಬ ಕಾರ್ಯಕರ್ತನು ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ತಿಳಿದುಕೊಂಡು ಚುನಾವಣೆಯಲ್ಲಿ ಕೆಲಸವನ್ನು ಮಾಡುವಂತೆ ಜಿಲ್ಲಾ ಪದಾಧಿಕಾರಿಗಳಿಗೆ ಹಾಗೂ ಎಲ್ಲ ಬ್ಲಾಕ್ ಅಧ್ಯಕ್ಷರುಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಲಕ್ಷ್ಮಣ ಲಗಮಾಗೋಳ, ಚಂದ್ರಶೇಖರ ಕೊಡಬಾಗಿ, ಸುಭಾಷ ಗುಡಿಮನಿ, ಸುರೇಶ ಗೊಣಸಗಿ, ಅಮಿತ ಚವ್ಹಾಣ, ಪ್ರಿಯಾಂಕಾ ತೊರವಿ, ಸಂಜು ಚವ್ಹಾಣ ಮುಂತಾದವರು ಮಾತನಾಡಿದರು.
ಸಾಹೇಬಗೌಡ ಬಿರಾದಾರ, ಸಣ್ಣಪ್ಪ ತಳವಾರ, ವಸಂತ ಹೊನಮೊಡೆ, ಯುವರಾಜ ಬಜಂತ್ರಿ, ಲಕ್ಷ್ಮಣ ಚಲವಾದಿ, ಬಾಬು ಗುಡಮಿ, ಕೃಷ್ಣಾ ಲಮಾಣಿ, ರಾಘವೇಂದ್ರ ವಡ್ಡೋಡಗಿ, ಭಾರತಿ ಕಾಲೆಬಾಗ, ವಿಶಾಲ ಚವ್ಹಾಣ, ದೀಪಕ ಗುನ್ನಾಪೂರ, ರಾಜೇಶ್ವರಿ ಬಿರಾದಾರ, ಪರಶುರಾಮ ಜಮಖಂಡಿ, ರಾಜು ಇವಣಗಿ, ಸ್ವಪ್ನಾ ಇಮನದ, ಪರಶುರಾಮ ಹೊಸಮನಿ, ಹಣಮಂತ, ಮಹಾದೇವ ಬನಸೋಡೆ, ಸಿದ್ದು ತೋಟದ, ಮಹೇಶ ಚಲವಾದಿ, ಸತೀಶ ಅಡವಿ, ಬಂದಗಿ ಗಸ್ತಿ, ರಾಧಿಕಾ ಹಳ್ಳಿ, ಸುಧಾ ಭಂಡಾರಿ, ಆಶಾ ಸಂಜೀವಗೋಳ ಮುಂತಾದವರು ಉಪಸ್ಥಿತರಿದ್ದರು.
