ವಿಜಯಪುರ | ಮತದಾರರು ಬಿಜೆಪಿಯ ಸುಳ್ಳು ಭರವಸೆಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ: ಚ್.ಎಫ್. ಜಕ್ಕಪ್ಪ

Date:

ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಇದೆ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಮತವನ್ನು ಕೇಳಲು ಹೊರಟಿದೆ. ಆದರೆ, ಮತದಾರರು ಪ್ರಜ್ಞಾವಂತರಾಗಿದ್ದು, ಬಿಜೆಪಿಯ ಸುಳ್ಳು ಭರವಸೆಗಳಿಗೆ ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದ್ದಾರೆ ಎಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಸ್ತುವಾರಿ ಎಚ್.ಎಫ್. ಜಕ್ಕಪ್ಪನವರ ಹೇಳಿದರು.

- Advertisement -

ಲೋಕಸಭಾ ಚುನಾವಣೆಯ ಹಿನ್ನೆಲೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಸ್ತುವಾರಿಗಳಾದ ಎಚ್.ಎಫ್. ಜಕ್ಕಪ್ಪನವರ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾದ ಲಕ್ಷ್ಮಣ ಲಗಮಾಗೋಳರವರು ಜಿಲ್ಲಾ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ, ಒಬಿಸಿ, ಮೈನಾರಿಟಿ ವಿಭಾಗಗಳ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಈ ಬಾರಿ ಪರಾಭವಗೊಳಿಸುವುದರ ಮೂಲಕ ರಾಜು ಆಲಗೂರ ರವರನ್ನು ಬಹುಮತದಿಂದ ಗೆಲ್ಲಿಸಿ ಸಂಸತ್ ಭವನಕ್ಕೆ ಕಳಿಸುವ ಕೆಲಸವನ್ನು ಮತದಾರರು ಮಾಡುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ.ಜಾ. ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು ಅವಿರತವಾಗಿ ಚುನಾವಣೆ ನಡೆಯುವವರೆಗೂ ಸನ್ಮಾನ್ಯ ರಾಜು ಆಲಗೂರರವರ ಗೆಲುವಿಗಾಗಿ ಶ್ರಮಿಸುತ್ತೇವೆ. ಸ್ವತಃ ಒಬ್ಬ ಕಾರ್ಯಕರ್ತನು ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ತಿಳಿದುಕೊಂಡು ಚುನಾವಣೆಯಲ್ಲಿ ಕೆಲಸವನ್ನು ಮಾಡುವಂತೆ ಜಿಲ್ಲಾ ಪದಾಧಿಕಾರಿಗಳಿಗೆ ಹಾಗೂ ಎಲ್ಲ ಬ್ಲಾಕ್ ಅಧ್ಯಕ್ಷರುಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಲಕ್ಷ್ಮಣ ಲಗಮಾಗೋಳ, ಚಂದ್ರಶೇಖರ ಕೊಡಬಾಗಿ, ಸುಭಾಷ ಗುಡಿಮನಿ, ಸುರೇಶ ಗೊಣಸಗಿ, ಅಮಿತ ಚವ್ಹಾಣ, ಪ್ರಿಯಾಂಕಾ ತೊರವಿ, ಸಂಜು ಚವ್ಹಾಣ ಮುಂತಾದವರು ಮಾತನಾಡಿದರು.

ಸಾಹೇಬಗೌಡ ಬಿರಾದಾರ, ಸಣ್ಣಪ್ಪ ತಳವಾರ, ವಸಂತ ಹೊನಮೊಡೆ, ಯುವರಾಜ ಬಜಂತ್ರಿ, ಲಕ್ಷ್ಮಣ ಚಲವಾದಿ, ಬಾಬು ಗುಡಮಿ, ಕೃಷ್ಣಾ ಲಮಾಣಿ, ರಾಘವೇಂದ್ರ ವಡ್ಡೋಡಗಿ, ಭಾರತಿ ಕಾಲೆಬಾಗ, ವಿಶಾಲ ಚವ್ಹಾಣ, ದೀಪಕ ಗುನ್ನಾಪೂರ, ರಾಜೇಶ್ವರಿ ಬಿರಾದಾರ, ಪರಶುರಾಮ ಜಮಖಂಡಿ, ರಾಜು ಇವಣಗಿ, ಸ್ವಪ್ನಾ ಇಮನದ, ಪರಶುರಾಮ ಹೊಸಮನಿ, ಹಣಮಂತ, ಮಹಾದೇವ ಬನಸೋಡೆ, ಸಿದ್ದು ತೋಟದ, ಮಹೇಶ ಚಲವಾದಿ, ಸತೀಶ ಅಡವಿ, ಬಂದಗಿ ಗಸ್ತಿ, ರಾಧಿಕಾ ಹಳ್ಳಿ, ಸುಧಾ ಭಂಡಾರಿ, ಆಶಾ ಸಂಜೀವಗೋಳ ಮುಂತಾದವರು ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಗಾಂಧೀಜಿ ಆದರ್ಶಗಳು ಯುವಕರಿಗೆ ದಾರಿದೀಪ: ಪವನಕುಮಾರ ವಳಕೇರಿ

ಬ್ರಿಟಿಷರ ವಿರುದ್ಧ ಶಾಂತಿ, ಅಹಿಂಸೆ ಹಾಗೂ ತಾಳ್ಮೆಯ ಮಾರ್ಗದಲ್ಲಿ ಹೋರಾಡಿ ದೇಶಕ್ಕೆ...

ಕಲಬುರಗಿ | ರಂಗಭೂಮಿಯಲ್ಲಿ ಅಪ್ರತಿಮ ಕಲಾಸೇವೆ; ಶ್ರೀಧರ ವಗ್ಗಿಗೆ ರಾಜ್ಯಮಟ್ಟದ ‘ಕಲಾ ತಪಸ್ವಿ’ ಪ್ರಶಸ್ತಿ

ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದ ರಂಗಭೂಮಿ ಕಲಾವಿದ ಶ್ರೀಧರ ವಗ್ಗಿ ಅವರಿಗೆ...

ಕಲಬುರಗಿ | ಎಸ್‌ಐಆರ್ ವಿರುದ್ಧ ಸಿಡಿದೆದ್ದ ಪ್ರಗತಿಪರ ಸಂಘಟನೆಗಳು; ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹನ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಜೇವರ್ಗಿ ತಾಲೂಕು...

ಕಲಬುರಗಿ | ಅನುದಾನಿತ ಹಾಸ್ಟೆಲ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲಕನ ವಿರುದ್ಧ ಪ್ರಕರಣ ದಾಖಲು

ಸರಕಾರಿ ಅನುದಾನಿತ ಮಹಿಳಾ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ...