ಇಂಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ಕಾಲುವೆಗೆ ನೀರು ಹರಿಯ ಬಿಡಲಾಗಿದ್ದು, ಅದು ಮೇ 16ರಂದು ಇಂಡಿ ತಾಲೂಕು ತಲುಪಲಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರ ಮನೋಜ್ ಕುಮಾರ್ ಗಡಬಳ್ಳಿ ತಿಳಿಸಿದ್ದಾರೆ.
“ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ಸಿಂದಗಿ ತಾಲೂಕಿನ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದು, ಸಿಂದಗಿ ತಾಲೂಕಿನ ಬಳಗಾನೂರ
ಕೆರೆಯನ್ನು ತುಂಬಿಸಲಾಗುತ್ತಿದೆ. ನಂತರ ಮೇ 16ರಂದು ಇಂಡಿ ತಾಲೂಕಿಗೆ ಸಂಬಂಧಿತ ಸಂಗೋಗಿ ಕೆರೆ, ತಾಲೂಕಿನ ಲೋಣಿ ಕೆಡಿ ಕೆರೆ ತುಂಬಿಸಲಾಗುವುದು. ಈ ನೀರು ಕುಡಿಯಲು ಮತ್ತು ಜನ
ಜಾನುವಾರುಗಳ ಉಪಯೋಗಕ್ಕೆ ಮಾತ್ರ ಬಳಸಬೇಕು” ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಂವಿಧಾನ ಇಲ್ಲವೆಂದಾದರೆ ಮನುಸ್ಮೃತಿಯಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತೆ: ಮೀನಾಕ್ಷಿ ಬಾಳಿ
ಇಂಡಿಯ ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ ಮತ್ತು ಡಿಎಸ್‌ಪಿ ಜಗದೀಶ ಮಾತನಾಡಿ, “ಕೃಷ್ಣಾ ಕಾಲುವೆ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಕಾಲುವೆ ಮತ್ತು ಕೆರೆಯ ಮೇಲೆ ವಿದ್ಯುತ್ ಪಂಪ್ ಉಪಯೋಗಿಸಿ ಕೃಷಿಗೆ ನೀರು ಪಡೆದುಕೊಂಡರೆ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಮತ್ತು ಕಾಲುವೆ 200 ಮೀ ಸುತ್ತಲಿನ ಪ್ರದೇಶದಲ್ಲಿ ಮೋಟರ್ ಬಳಸದಂತೆ 144 ಕಲಂ ಜಾರಿಯಲ್ಲಿದೆ” ಎಂದು ತಿಳಿಸಿದ್ದಾರೆ.
