ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ವೇತನ, ಅವಧಿ ಹಾಗೂ ಜವಾಬ್ದಾರಿಗಳು

Date:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರಾಷ್ಟ್ರೀಯ ತಂಡದ ಪುರುಷರ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದು, 2023ರ ಏಕದಿನ ವಿಶ್ವಕಪ್‌ ವೇಳೆಗೆ ರಾಹುಲ್ ದ್ರಾವಿಡ್‌ ಅವರ ಅವಧಿ ಮುಗಿದಿದೆ. ಬಿಸಿಸಿಐ ದ್ರಾವಿಡ್ ಅವರ ಅವಧಿಯನ್ನುಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್‌ ತನಕ ಮುಂದುವರೆಸಿದೆ.

- Advertisement -

ಬಿಸಿಸಿಐ ಹುದ್ದೆಯ ವಿವರವನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಫುರುಷರ ಹಿರಿಯರ ಮುಖ್ಯ ಕೋಚ್‌ ಹುದ್ದೆಯ ಅವಧಿಯು 3.5 ವರ್ಷಗಳವರೆಗೆ ಇರಲಿದ್ದು, 2024, ಜುಲೈ 1ರಿಂದ ಡಿಸೆಂಬರ್‌ 31 2027ರವರೆಗೂ ಕಾರ್ಯನಿರ್ವಹಿಸಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಮುಖ್ಯ ಕೋಚ್‌ ಹುದ್ದೆಯು ಭಾರತ ಕ್ರಿಕೆಟ್‌ ತಂಡವನ್ನು ಟಿ20, ಏಕದಿನ ಹಾಗೂ ಟೆಸ್ಟ್‌ ಒಳಗೊಂಡು ಎಲ್ಲ ಮಾದರಿಯಲ್ಲೂ ‘ವಿಶ್ವದ ಅತ್ಯುತ್ತಮ ತಂಡವಾಗಿ’ ಅಭಿವೃದ್ಧಿಪಡಿಸುವುದು ಹಾಗೂ ನಿರ್ವಹಿಸುವುದು. ಸಹಾಯಕ ಕೋಚ್‌ಗಳು ಹಾಗೂ ಸಿಬ್ಬಂದಿ ತರಬೇತುದಾರರನ್ನು ನಿರ್ವಹಿಸುವುದು ಮತ್ತು ಅಭಿವೃದ್ಧಿಪಡಿಸುವುದಾಗಿರುತ್ತದೆ.

ಬಿಸಿಸಿಐ ಹಾಗೂ ಐಸಿಸಿ ನೀತಿ ಸಂಹಿತೆ ಹಾಗೂ ಶಿಸ್ತು ಸಂಹಿತೆಗಳಿಗೆ ಬದ್ಧರಾಗಿ ಜಾರಿಗೊಳಿಸುವುದು ಕೂಡ ಮುಖ್ಯ ಕೋಚ್‌ನ ಪ್ರಮುಖ ಜವಾಬ್ದಾರಿಯಾಗಿದೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ ವಿರುದ್ಧ ಚೆನ್ನೈಗೆ ಜಯ; ಆರ್‌ಸಿಬಿ ಪ್ಲೇಆಫ್ ಕನಸು ಕ್ಷೀಣ, ಔಟ್‌ಲ್ಲೂ ರವೀಂದ್ರ ಜಡೇಜಾ ದಾಖಲೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ರಿಕೆಟ್‌ನಲ್ಲಿ ಗಮನಾರ್ಹ ಅನುಭವವನ್ನು ಹೊಂದಿರಬೇಕು. ಕನಿಷ್ಠ 30 ಟೆಸ್ಟ್‌ಗಳು ಅಥವಾ 50 ಏಕದಿನ ಆಡಿರಬೇಕು ಅಥವಾ ಎರಡು ವರ್ಷ ಟೆಸ್ಟ್‌ ಆಡಿರುವ ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಯನ್ನು ನಿರ್ವಹಿಸಿರಬೇಕು.

ಇದರ ಜೊತೆ ಐಪಿಎಲ್ ತಂಡ ಅಥವಾ ಅದಕ್ಕೆ ಸಮನಾರ್ಹ ಮಾದರಿಗಳಲ್ಲಿ ಮುಖ್ಯ ಕೋಚ್‌ ಆಗಿರುವವರ ಬಳಿ ಸಹಾಯಕ ಸದಸ್ಯರಾಗಿ ಮೂರು ವರ್ಷ ಅನುಭವ ಹೊಂದಿರಬೇಕು. ಬಿಸಿಸಿಐ ಮಟ್ಟದ 3 ಪ್ರಮಾಣಪತ್ರ ಅಥವಾ ಸಮಾನಾರ್ಹವಾದುದನ್ನು ಒಳಗೊಂಡಿರಬೇಕು. ಅಭ್ಯರ್ಥಿಗಳು ವಯಸ್ಸಿನಲ್ಲಿ 60 ವರ್ಷಕ್ಕಿಂತ ಕೆಳಗಿರಬೇಕು.

ಪುರುಷರ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್‌ನ ವೇತನದ ಬಗ್ಗೆ ವಿವರಿಸಿರುವ ಬಿಸಿಸಿಐ, ವೇತನವು ನೆಗೋಶಿಯಬಲ್(ಮಾತುಕತೆ ಮೂಲಕ ಹೆಚ್ಚು ಕಡಿಮೆ ಮಾಡಿಕೊಳ್ಳುವುದು) ಹಾಗೂ ಅನುಭವಕ್ಕೆ ಅನುಗುಣವಾಗಿ ನೀಡಲಾಗುತ್ತದೆ” ಎಂದು ತಿಳಿಸಲಾಗಿದೆ.

ಈಗ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರಿಗೆ ವಾರ್ಷಿಕವಾಗಿ 12 ಕೋಟಿ ರೂ. ವೇತನ ನೀಡಲಾಗುತ್ತಿದೆ. ಹಿಂದೆ ರವಿ ಶಾಸ್ತ್ರಿ ಅವರಿಗೆ 9 ರಿಂದ 10 ಕೋಟಿ ವೇತನ ನೀಡಲಾಗುತ್ತಿತ್ತು. ನೂತನ ಕೋಚ್‌ಗೆ 12 ಕೋಟಿಗೂ ಹೆಚ್ಚು ವೇತನ ನೀಡುವ ಸಾಧ್ಯತೆಯಿದೆ ಎನ್ನುತ್ತಿವೆ ಮೂಲಗಳು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವ್ಯಕ್ತಿಗತ ಚಿನ್ನದ ಕೊರತೆ; ಒಲಿಂಪಿಕ್ಸ್‌ಗೆ ಎಚ್ಚರಿಕೆಯ ಗಂಟೆ

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...