ವಿಜಯಪುರ | ಮಹಿಳಾ ವಿವಿಯಲ್ಲಿ ಯುವ ಮಂಥನ ಕಾರ್ಯಕ್ರಮ

Date:

Advertisements

ವಿಕಸಿತ ಭಾರತ-2024 ಸಂಕಲ್ಪದ ಅಡಿಯಲ್ಲಿ ಯುವ ಮಂಥನ ಕಾರ್ಯಕ್ರಮದ ಮಾದರಿ ವಿಶ್ವಸಂಸ್ಥೆ ಆಣುಕು ಸಂಸತ್ತು ಅಧಿವೇಶನವನ್ನು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಯುಜಿಸಿ ಮತ್ತು ಎನ್‌ಎಸ್‌ಎಸ್‌ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಜಾಗತಿಕ ವಿಷಯವಾದ ಪರಿಸರ ಜೀವನ ಶೈಲಿ ಕುರಿತು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ವಿವಿಧ ಕ್ಷೇತ್ರಗಳಲ್ಲಿ ಆಗುವ ದುಷ್ಪರಿಣಾಮಗಳ ಕುರಿತು ಅಣಕು ಸಂಸತ್ತು ಅಧಿವೇಶನದಲ್ಲಿ ಚರ್ಚಿಸಲಾಯಿತು.

ವಿಶ್ವ ಸಂಸ್ಥೆಯ ಅಣುಕು ಸಂಸತ್ತು ಅಧಿವೇಶನದಲ್ಲಿ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದರು.

Advertisements

ಭಾರತದ ಪ್ರಧಾನಿಯಾಗಿ ಕೀರ್ತಿ ನಾಟಕರ, ಜಪಾನ ಪ್ರಧಾನಿಯಾಗಿ ಅಶ್ವಿನಿ ಆಕಲ್‌ವಾಡಿ, ಬಾಂಗ್ಲಾದೇಶದ ಪ್ರಧಾನಿಯಾಗಿ ರಾಧಿಕಾ ಕಾಂಜ್ಞೆ, ಪ್ರಾನ್ಸ್‌ ನ ರಾಷ್ಟ್ರಪತಿಯಾಗಿ ಸವಿತ ತೆಗ್ಗಿ, ಇಂಗ್ಲೆಂಡ್ ಪ್ರಧಾನಿಯಾಗಿ ಮಲ್ಲಮ್ಮ ಕುಂಬಾರ, ಇಟಲಿಯ ಪ್ರಧಾನಿಯಾಗಿ ಮುಕ್ತುಬಾಯಿ ಟಾಕೆ, ಕೆನಡಾದ ಪ್ರತಿನಿಧಿಯಾಗಿ ಪವಿತ್ರಾ ಒಡಯರ, ಇರಾಕ್‌ ರಾಷ್ಟ್ರಪತಿಯಾಗಿ ಪರ್ವಿನ್ ಅವರು ಆಯಾ ದೇಶದ ಜಾಗತಿಕತಾಪಮಾನ ಹಾಗೂ ಪರಿಸರ ಸಮಸ್ಯೆಗಳ ಕುರಿತು ಮತ್ತು ರಾಷ್ಟ್ರದ ಅಸ್ಮಿತೆಗೆ ಧಕ್ಕೆತರುವ ಕಾರಣಗಳು ಮತ್ತು ಅವುಗಳ ಪರಿಹಾರೋಪಾಯಗಳ ಕುರಿತು ಚರ್ಚಿಸಿದರು.

ಸಂಸತ್ತಿನಲ್ಲಿ  ವಿವಿಧ ಪಕ್ಷಗಳ ಪ್ರತಿನಿಧಿಗಳಾಗಿ ನೇಹಾ ನಾಗಠಾಣ, ಶಾಹಿರಾ ಬೇಗಂ, ಗಾಯತ್ರಿ (ಬಿಜೆಪಿ), ಸುನಂದಾ (ಕಾಂಗ್ರೆಸ್), ಮಯೂರಿ (ಶಿವಸೇನೆ), ಶಾಂತಮ್ಮ (ಟಿಎಂಸಿ ), ಬಸಮ್ಮ (ಎಸ್‌ಪಿ), ಲಕ್ಷ್ಮೀ (ಎಎಪಿ) ವಿದ್ಯಾರ್ಥಿನಿಯರು ಚರ್ಚೆಯಲ್ಲಿ ಪಾಲ್ಗೊಂಡರು.

ವಿಶ್ವಸಂಸ್ಥೆ ಸಂಸತ್ ಅಧಿವೇಶನ ಅಧ್ಯಕ್ಷರಾಗಿ ವಿದ್ಯಾರ್ಥಿನಿ ವಿದ್ಯಾರಾಣಿಯಾದವ ಅವರು ಕಾರ್ಯನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಯಾರಿಸಿರುವ ವ್ಯಂಗ್ಯ ಚಿತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.

ಯುವ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಈ ವಿದ್ಯಾರ್ಥಿನಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಥಮ ಸ್ಥಾನ ಶಿಕ್ಷಣ ವಿಭಾಗದ ವಿದ್ಯಾರ್ಥಿನಿ ಪರವಿನ್ (ಇರಾಕ್), ದ್ವಿತೀಯ ಸ್ಥಾನ ಇಂಗ್ಲೀಷ್ ವಿಭಾಗದ ವಿದ್ಯಾರ್ಥಿನಿ ಕೀರ್ತಿ ನಾಟೇಕರ (ಭಾರತ), ತೃತಿಯ ಸ್ಥಾನ ಶಿಕ್ಷಣ ವಿಭಾಗದ ವಿದ್ಯಾರ್ಥಿನಿ ಮುಕ್ತುಬಾಯಿ ಟಾಕೆ (ಇಟಲಿ).

ಕಾರ್ಯಕ್ರಮದಲ್ಲಿ ಪ್ರೊ. ಶಾಂತಾದೇವಿ, ಪ್ರೊ. ವಿಷ್ಣು ಶಿಂದೆ, ಪ್ರೊ.ನಾಮದೇವ ಗೌಡ, ಡಾ. ತಹಾಮಿನಾ ನಿಗಾರ ಸುಲ್ತಾನ, ಡಾ. ಪ್ರಜಪತಿ, ಡಾ.ಕಲಾವತಿ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

Download Eedina App Android / iOS

X