ವಿಜಯಪುರ | ಸಂವಿಧಾನ ಬದಲಾವಣೆಯ ಚರ್ಚೆ ವಿಷಾದನೀಯ: ಚಿಂತಕ ಡಾ. ಎಚ್ ಟಿ ಪೋತೆ

Date:


ʼಅನೇಕ ಅಲಿಖಿತ ಸಂವಿಧಾನಗಳಿಗೆ ನೆಗಡಿ, ಕೆಮ್ಮು ಬಂದಿಲ್ಲ. ಆದರೆ ನಮ್ಮ ಪ್ರಭುತ್ವದಲ್ಲಿರುವ ಕೆಲವರಿಗೆ ನೆಗಡಿ, ಕೆಮ್ಮು ಆಗಿ ನಮ್ಮ ಭವ್ಯ ಸಂವಿಧಾನದ ಬದಲಾವಣೆಯ ಮಾತುಗಳನ್ನಾಡುತ್ತಿದ್ದಾರೆʼ ಎಂದು ವಿಜಯಪುರದಲ್ಲಿ ಚಿಂತಕ ಡಾ. ಎಚ್ ಟಿ ಪೋತೆ ವಿಷಾದಿಸಿದರು.

- Advertisement -

ನಗರದ ಕೆಂದಗಲ್ಲು ಹನುಮಂತರಾಯ ರಂಗಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಮತ್ತು ಜಿಲ್ಲೆಯ ವಿವಿಧ ಪ್ರಗತಿಪರ ಸಂಘಗಳ ಸಹಯೋಗದಲ್ಲಿ ಅಂಬೇಡ್ಕರ್ ಹಬ್ಬದ ಮೂರನೇ ದಿನದ ಅಂಗವಾಗಿ ನಡೆದ ʼನಾವು – ನಮ್ಮ ಸಂವಿಧಾನʼ ಎಂಬ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ದಿಕ್ಸೂಚಿ ಭಾಷಣ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ಸಮಾನತೆ, ಜಾತ್ಯತೀತ ತತ್ವಗಳಿಂದ ಶ್ರೇಷ್ಠವೆನಿಸಿರುವ ಭಾರತ ಸಂವಿಧಾನವನ್ನು ಕಂಡರೆ ಪ್ರಭುತ್ವದ ಪಾಲಕರಿಗೆ ನೆಗಡಿ, ಕೆಮ್ಮು ಬರುತ್ತಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತೆ ದೇಶದಲ್ಲಿ ವಿಭಿನ್ನ ಸ್ವರೂಪದ ಸಮಸ್ಯೆಗಳಿಗೆ ಸಂವಿಧಾನದ ಬದಲಾವಣೆಯಂತಹ ಮಾತುಗಳನ್ನಾಡುವುದು ಬುದ್ದಿಗೇಡಿನ ವಿಷಯ” ಎಂದು ಟೀಕಿಸಿದರು.

“ಸಂವಿಧಾನ ಕೇವಲ ಗ್ರಂಥವಲ್ಲ. ಪ್ರಜೆಯ ಆತ್ಮ ಮತ್ತು ದೇಹಕ್ಕೆ ರಕ್ತ, ಗಾಳಿಯಂತೆ. ಹೀಗಾಗಿ ಪ್ರತಿಯೊಬ್ಬ ಪ್ರಜೆಯ ಬಳಿಯೂ ಸಂವಿಧಾನದ ಪ್ರತಿ ಇರಬೇಕು. ಪ್ರತಿಯೊಬ್ಬ ಪ್ರಜೆ ಸಂವಿಧಾನ ರಕ್ಷಣೆ ಮಾಡುವ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಸಲಹೆ ನೀಡಿದರು.

ಇದನ್ನೂ ಓದಿ> ದಲಿತ ಚಳವಳಿಯ ಹಿರಿಯ ಮುಖಂಡ ಕೋಲಾರದ ಸಿ.ಎಂ.ಮುನಿಯಪ್ಪ ರಿಗೆ ಅಂಬೇಡ್ಕರ್‌ ಪ್ರಶಸ್ತಿ ಗೌರವ

ಬಾಬಾಸಾಹೇಬ್ ಅಂಬೇಡ್ಕರ್ ರವರು ನೀರಿಗಾಗಿ ನಡೆಸಿದ ಮಹಾಡ್‌ನ ಚೌಡರ್ ಕೆರೆಯ ಹೋರಾಟವನ್ನು ಸ್ಮರಿಸುತ್ತ, “ಕೆರೆಯ ನೀರಿನಲ್ಲಿ ಹಂದಿ, ನಾಯಿಗಳಾದರೂ ಇಳಿಯಬಹುದಿತ್ತು. ಆದರೆ ಹಿಂದೂ ಧರ್ಮದ ಎಲ್ಲರಂತೆಯೇ ಮೂಗು, ಕಣ್ಣು, ಬಾಯಿ‌ ಹೊಂದಿದ ದಲಿತ ಮನುಷ್ಯರಿಗೆ ಆ ನೀರನ್ನು ಮುಟ್ಟುವ ಹಕ್ಕು ಕೂಡ ಇರಲಿಲ್ಲ ಎಂಬುದು ಅಮಾನವೀಯತೆ ಅಲ್ಲದೆ ಮತ್ತಿನ್ನೇನು? ಇಂದು ಹಿಂದೂ ಮತ್ತು ಮುಸ್ಲಿಮರ ನಡುವೆ ಜಗಳ ಹಚ್ಚುವ ಷಡ್ಯಂತ್ರದಲ್ಲಿ ಕೆಲವರು ನಿರತರಾಗಿದ್ದಾರೆ. ಇದು ಖಂಡನೀಯ. ಬಾಬಾಸಾಹೇಬರು ಚೌಡರ್ ಕೆರೆ ಸತ್ಯಾಗ್ರಹ ಮಾಡುವಾಗ ಹೋರಾಟಕ್ಕೆ ಯಾರೂ ಕೂಡ ಸ್ಥಳ ನೀಡಲಿಲ್ಲ. ಆ ಸಂದರ್ಭದಲ್ಲಿ ಮುಸ್ಲಿಂ ಬಂಧುಗಳು ಬಾಬಾಸಾಹೇಬರಿಗೆ ಜಾಗ ನೀಡಿ ಸಹೋದರತ್ವ ಸಂದೇಶ ನೀಡಿದ್ದರು” ಎಂದು ಸ್ಮರಿಸಿದರು.

“ಇಂದಿನ ವಿದ್ಯಾರ್ಥಿ ಯುವಜನರು ವಿಲಾಸಿ ಬದುಕಿನಲ್ಲಿ ಮುಳುಗಿ ಹೋಗಿದ್ದಾರೆ. ಡಾ.ಅಂಬೇಡ್ಕರ್ ಅವರು ಎದುರಿಸಿದ ಕಷ್ಟಗಳ ಪರಿವೇ ಅವರಿಗಿಲ್ಲ. ಹೀಗಾಗಿ ಡಾ.ಅಂಬೇಡ್ಕರ್ ಅವರಲ್ಲಿನ ತುಡಿತ, ಸೂಕ್ಷ್ಮ ಆಲೋಚನಾ ಲಹರಿ ಇಂದಿನ ವಿದ್ಯಾರ್ಥಿಗಳಲ್ಲಿ ಕಾಣಸಿಗದು. ಹಿಂದೆಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಊಟವೇ ಗತಿಯಾಗಿತ್ತು. ಆದರೆ ಇಂದು ಸೌಲಭ್ಯಗಳ ಲಭ್ಯತೆಯಿಂದಾಗಿ ಒಂದರ್ಥದಲ್ಲಿ ವಿದ್ಯಾರ್ಥಿಗಳಿಗೆ ಕಷ್ಟದ ಅರಿವಿಲ್ಲ. ಈ ಕಾರಣದಿಂದಲೇ ಅಂಬೇಡ್ಕರ್ ಇಂದಿನ ಯುವಜನರನ್ನು ತಲುಪುತ್ತಿಲ್ಲವೆಂದು ನೋವಿನಿಂದ‌ ಹೇಳುವೆ,‌ ಹೊಸ ತಲೆಮಾರಿಗೆ ಅವರನ್ನು ಪರಿಚಯಿಸುವುದೇ ಒಂದು ಸವಾಲು” ಎಂದು ವಿಷಾದಿಸಿದರು.

“ಅನೇಕ ದೇಶಗಳ ಸಂವಿಧಾನ ರಚಿಸಿದ ಐರೋಪ್ಯ ದೇಶದ ಪ್ರಖಂಡ ಪಾಂಡಿತ್ಯದ ʼಐವರ್ ಜೆನ್ನಿಂಗ್ʼ ಅವರನ್ನು ಸಂವಿಧಾನ ಬರೆದುಕೊಡಿ ಎಂದು ಭಾರತದ ದಿಗ್ಗಜ ನಾಯಕರು ಭೇಟಿ ಮಾಡಿದ್ದರು. ಆಗ ಅವರು ʼಭಾರತ ಬಹುಸಂಸ್ಕೃತಿಯ ದೇಶ. ಹೀಗಾಗಿ ನನಗೆ ಬರೆಯಲು ಸಾಧ್ಯವಿಲ್ಲ, ನಿಮ್ಮ ಸಂವಿಧಾನ ಬರೆಯಲು ಡಾ.ಅಂಬೇಡ್ಕರ್ ಅವರೇ ಸೂಕ್ತʼ ಎಂದಿದ್ದರು. ನೋಡಿ, ನಮ್ಮವರಿಗೆ ಹೊರಗಿನವರಿಂದ ಅಂಬೇಡ್ಕರ್ ಅವರ ವಿದ್ವತ್ತಿನ ಪರಿಚಯ ಆಗಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಅಹಿಂದ ಮುಖಂಡ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ “ನಾವು ಇನ್ನೂ ಸಂವಿಧಾನವನ್ನೇ ತಿಳಿದುಕೊಂಡಿಲ್ಲ. ಯುವಜನರು ಬಿಡಿ ಹಿರಿಯರೇ ನಮ್ಮ ಸಂವಿಧಾನ ಬಗ್ಗೆ ತಿಳಿದುಕೊಂಡಿಲ್ಲ. ಸಂಘ ಪರಿವಾರದ ಕೆಲವರು ಡಾ.ಅಂಬೇಡ್ಕರ್ ಅವರು ಮುಸ್ಲಿಂ ವಿರೋಧಿ ಎಂದು ಸುಳ್ಳು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಯಲಿಗೆಳೆಯುವ ಕೆಲಸ ಮಾಡಬೇಕು” ಎಂದರು.

ಡಾ.ಭುವನೇಶ್ವರಿ ಕಾಂಬಳೆ ಮಾತನಾಡಿ, “ಸಂವಿಧಾನ ನಮಗೆ ಘನತೆಯಿಂದ ಬದುಕುವ ಹಕ್ಕು ನೀಡಿದೆ. ಇದರ ರಕ್ಷಣೆಗೆ ನಾವು ಸದಾ ಸಿದ್ಧರಿರಬೇಕು. ದಲಿತ ವಿದ್ಯಾರ್ಥಿ ಪರಿಷತ್ ಆರಂಭಿಸಿರುವ ʼಅಂಬೇಡ್ಕರ್ ಹಬ್ಬʼ ಇವತ್ತು ನಾಡಿನ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ. ನಾವು ಕೂಡ ನಮ್ಮ ʼಒಡಲ ಧ್ವನಿʼ ಮಹಿಳಾ ಒಕ್ಕೂಟದಿಂದ ಈ ಬಾರಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ʼಅಂಬೇಡ್ಕರ್ ಹಬ್ಬʼ ಹೆಸರಿನಲ್ಲಿ ಆಚರಣೆ ಮಾಡುತ್ತೇವೆ” ಎಂದರು.

ಸಮಾಜ ಸೇವಕಿ ದೀಪಾ ಕಟ್ಟಿಮನಿ ಮಾತಾನಾಡಿ, “ಮಹಿಳೆಯರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಾಕಷ್ಟು ಹಕ್ಕುಗಳನ್ನು ನೀಡಿದ್ದರ ಫಲವಾಗಿ ಇವತ್ತು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ. ಮಹಿಳೆಯರಿಗೆ ಹಕ್ಕನ್ನು ನೀಡುವ ಹಿಂದೂ ಕೋಡ್ ಬಿಲ್ ಜಾರಿ ಮಾಡಿಸಲು ಬಾಬಾಸಾಹೇಬ್ ಅಂಬೇಡ್ಕರ್ ಅಂದು ರಾಜೀನಾಮೆ ನೀಡಬೇಕಾಯಿತು. ಅವರ ಈ ಹೋರಾಟದ ಫಲವಾಗಿ ಇಂದು ನಾವಿಲ್ಲಿ ಕುಳಿತ್ತಿದ್ದೇವೆ” ಎಂದರು.

ಇದನ್ನೂ ಓದಿದ್ದೀರಾ? ಅಂಬೇಡ್ಕರ್‌ ಅವರ ‘ಸ್ಟೇಟ್ಸ್‌ ಅಂಡ್‌ ಮೈನಾರಿಟೀಸ್‌’ ಕೃತಿ ಹೇಳುವುದೇನು?

ಸಂದರ್ಭದಲ್ಲಿ ಕ್ರೈಸ್ತ ಧರ್ಮಗುರು ಫಾ. ಜಾನ್ ಥೋಮಸ್ ಸಾನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಪೊನ್ನಪ್ಪ ಕಡೇಮನಿ, ಕೃಷಿ ವಿವಿ ಮಾಜಿ ವ್ಯವಸ್ಥಾಪನಾ ಮಂಡಳಿ ಸದಸ್ಯ ಸುರೇಶ ಘೊಣಸಗಿ, ಅಬ್ದುಲ್ ರಜಾಕ್ ಹೊರ್ತಿ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ್ ಪೂಜಾರಿ, ಮುಖಂಡರಾದ ಸಂಜು ಕಂಬಾಗಿ, ಬಾಲಾಜಿ ಕಾಂಬಳೆ, ಮೋಹನ ಕಟ್ಟಿಮನಿ, ಮಹಾದೇವ ಚಲವಾದಿ ಇದ್ದರು‌.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...