ತಮಿಳುನಾಡು ಚುನಾವಣೆ | ಮಹಿಳೆಯರ ಓಲೈಕೆ ರಾಜಕಾರಣ ಭವಿಷ್ಯ ನಿರ್ಧರಿಸುತ್ತಾ?   

Date:

234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಏಪ್ರಿಲ್‌ 23ರಂದು ಚುನಾವಣೆ ನಡೆಯಲಿದೆ. ಆಡಳಿತಾರೂಢ ಡಿಎಂಕೆ ಮತ್ತೆ ಅಧಿಕಾರವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಎಐಎಡಿಎಂಕೆ –ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೇರುವುದಕ್ಕೆ ಹರಸಾಹಸ ಪಡುತ್ತಿದೆ. ಈ ನಡುವೆ ನಟ, ರಾಜಕಾರಣಿ ವಿಜಯ್‌ ನೇತೃತ್ವದ ಟಿವಿಕೆ ಕೆಲವು ಕ್ಷೇತ್ರಗಳಲ್ಲಿ ಡಿಎಂಕೆ, ಎಐಎಡಿಎಂಕೆಯ ಮತಗಳನ್ನು ವಿಭಜಿಸಬಹುದು ಎಂದು ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ.

2026ರ ತಮಿಳುನಾಡು ವಿಧಾನಸಭಾ ಚುನಾವಣೆ ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ರಾಜ್ಯದ ಸಾಂಪ್ರದಾಯಿಕ ದ್ವಿಪಕ್ಷೀಯ ರಾಜಕಾರಣಕ್ಕೆ (DMK vs AIADMK) ಹೊಸ ಆಯಾಮ ಸೇರ್ಪಡೆಯಾಗಿರುವುದೇ ಇದಕ್ಕೆ ಮೂಲಕ ಕಾರಣ.

ದಶಕಗಳಿಂದ ತಮಿಳುನಾಡು ರಾಜಕೀಯ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆಯೇ ಆಗುತ್ತಿತ್ತು. ಆದರೆ, ಈ ವಿಧಾನಸಭಾ ಚುನಾವಣೆಯಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.

- Advertisement -

DMK (ದ್ರಾವಿಡ ಮುನ್ನೇತ್ರ ಕಳಗಂ) ಮುಖ್ಯಸ್ಥ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ‘ದ್ರಾವಿಡ ಮಾದರಿ’ಯ ಆಡಳಿತ ಮತ್ತು ಮಹಿಳಾ ಕೇಂದ್ರಿತ ಯೋಜನೆಗಳನ್ನು ಮುಂದಿಟ್ಟುಕೊಂಡು ಅಖಾಡಕ್ಕಿಳಿದಿದೆ. AIADMK (ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪ್ರಬಲ ವಿರೋಧಪಕ್ಷವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. TVK (ತಮಿಳಗ ವೆಟ್ರಿ ಕಳಗಂ) ಪಕ್ಷ ಈ ಚುನಾವಣೆಯ ಅತಿದೊಡ್ಡ ‘ಎಕ್ಸ್-ಫ್ಯಾಕ್ಟರ್’. ಯುವ ಮತದಾರರು ಮತ್ತು ಡಿಎಂಕೆ-ಎಐಎಡಿಎಂಕೆ ಎರಡರಿಂದಲೂ ಬೇಸತ್ತಿರುವ ಮತದಾರರನ್ನು ವಿಜಯ್ ಸೆಳೆಯುತ್ತಿರುವುದು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

ಮಹಿಳಾ ಮತದಾರರ ಓಲೈಕೆ ಮತ್ತು ಉಚಿತ ಯೋಜನೆಗಳು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಡಿಎಂಕೆ, ಎಐಎಡಿಎಂಕೆ, ಟಿವಿಕೆ ಪಕ್ಷಗಳು ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ತಂತ್ರ, ಕುತಂತ್ರ ಎಲ್ಲವನ್ನೂ ಯಶಸ್ವಿಯಾಗಿ ಮಾಡಿವೆ/ಮಾಡುತ್ತಿವೆ. ಆಡಳಿತಾರೂಢ ಡಿಎಂಕೆ ಪಕ್ಷ ‘ಇಲ್ಲತ್ತರಸಿ’ ಯೋಜನೆಯಡಿ ಗೃಹಿಣಿಯರಿಗೆ ಗೃಹೋಪಯೋಗಿ ವಸ್ತುಗಳ ಕೂಪನ್ ನೀಡುವ ಭರವಸೆ ನೀಡಿದೆ. ಎಐಎಡಿಎಂಕೆ ‘ಕುಲ ವಿಳಕ್ಕು’ ಎಂಬ ಹೆಸರಿನಲ್ಲಿ ಮಹಿಳೆಯರಿಗೆ ಆರ್ಥಿಕ ನೆರವಿನ ಭರವಸೆ ನೀಡಿದೆ. ಟಿವಿಕೆ ಪಕ್ಷ ಹೆಣ್ಣು ಮಕ್ಕಳಿಗೆ ಚಿನ್ನದ ಉಂಗುರ ನೀಡುವ ‘ತಾಯಿ ಮಾಮನ್ ಸೀರ್’ ಎಂಬ ಭಾವನಾತ್ಮಕ ಯೋಜನೆಯನ್ನು ಘೋಷಣೆ ಮಾಡಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮಾಸಿಕ 2,000 ರೂ.ಆರ್ಥಿಕ ನೆರವು ನೀಡುವ ಭರವಸೆ ಕೊಟ್ಟಿದೆ. ಮಹಿಳಾ ಮತದಾರರನ್ನು ಸೆಳೆಯುವುದಕ್ಕೆ ಈ ಪ್ರಮುಖ ಪಕ್ಷಗಳು ಈ ರೀತಿಯ ಭರವಸೆಗಳನ್ನು ನೀಡಿದ್ದು, ತಮಿಳುನಾಡಿನ ಮಹಿಳಾ ಮತದಾರರು ಯಾವ ಘೋಷಣೆಯನ್ನು ಒಪ್ಪಿ ಮತ ಚಲಾಯಿಸುತ್ತಾರೆ ಎನ್ನುವುದೇ ಸದ್ಯದ ಕುತೂಹಲವಾಗಿದೆ. ಆದರೇ, ಇದೊಂದೇ ತಮಿಳುನಾಡಿನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಈ ನಡುವೆ. ಡಿಎಂಕೆ ಸರ್ಕಾರಕ್ಕೆ ಐದು ವರ್ಷಗಳ ಆಡಳಿತಾವಧಿಯ ನಂತರ ಸಣ್ಣ ಮಟ್ಟದ ಆಡಳಿತ ವಿರೋಧಿ ಅಲೆಯ ಸಲಾವಿನೊಂದಿಗೆ ಚುನಾವಣೆಯನ್ನು ಎದುರಿಸಬೇಕಿದೆ. ಇನ್ನು, ವಿಜಯ್ ಅವರ ಪಕ್ಷ ಕೇವಲ ʼಸ್ಟಾರ್ ಪವರ್ʼ ಮೇಲೆ ನಿಂತಿದೆಯೇ ಅಥವಾ ಅವರ ಸಂಘಟನಾ ಶಕ್ತಿ ಮತಗಳಾಗಿ ಬದಲಾಗುತ್ತದೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ತಮಿಳುನಾಡಿನಲ್ಲಿ ನೆಲೆ ವಿಸ್ತರಿಸಿಕೊಳ್ಳಲು ಬಿಜೆಪಿ ನಡೆಸುತ್ತಿರುವ ನಿರಂತರ ಪ್ರಯತ್ನಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಎನ್ನುವುದು ಕುತೂಹಲಕಾರಿ.

ಹಾಗಾಗಿ 2026ರ ತಮಿಳುನಾಡು ವಿಧಾನಸಭಾ ಚುನಾವಣೆ ಕೇವಲ ಎರಡು ದ್ರಾವಿಡ ಪಕ್ಷಗಳ ನಡುವಿನ ಹೋರಾಟವಲ್ಲ. ಈ ಚುನಾವಣೆಯಲ್ಲಿ ಸಿನೆಮಾ ಗ್ಲಾಮರ್, ಹಿಂದುತ್ವದ ರಾಜಕಾರಣ ಮತ್ತು ಸಾಂಪ್ರದಾಯಿಕ ದ್ರಾವಿಡ ಸಿದ್ಧಾಂತಗಳ ನಡುವಿನ ಪೈಪೋಟಿಯಾಗಲಿದೆ. ವಿಜಯ್ ಅವರ ಟಿವಿಕೆ ಪಕ್ಷ ಚುನಾವಣೆಯಲ್ಲಿ ಮತಗಳನ್ನು ವಿಭಜಿಸಿದರೆ ಅದು ಅಂತಿಮವಾಗಿ ಯಾರಿಗೆ ಲಾಭವಾಗಲಿದೆ ಎನ್ನುವುದರ ಮೇಲೆ ತಮಿಳುನಾಡಿನ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.


ಈ ನಡುವೆ ಆಡಳಿತಾರೂಢ ಡಿಎಂಕೆ ಪಕ್ಷ ಚುನಾವಣಾ ಪೂರ್ವ ಆಂತರಿಕ ಸಮೀಕ್ಷೆ ನಡೆಸಿದ್ದು, ಈಗ ಆ ವರದಿ ಹೊರ ಬಂದಿದೆ. ಇತ್ತೀಚೆಗೆ ಸಿಎಂ ಎಂ.ಕೆ ಸ್ಟ್ಯಾಲಿನ್‌ ಸಂದರ್ಶನವೊಂದರಲ್ಲಿ ಡಿಎಂಕೆ ನೇತೃತ್ವದ ಒಕ್ಕೂಟ 200 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ನಡೆಸಿದ ಆಂತರಿಕ ಸಮೀಕ್ಷೆ ಹೇಳುವುದೇನು?

ರಾಜ್ಯದ ಮುಖ್ಯಮಂತ್ರಿಯಾಗಿ ಯಾರನ್ನು ನೋಡಲು ಬಯಸುತ್ತೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದವದವರು ನಮ್ಮ ಮೊದಲ ಆಯ್ಕೆ ಹಾಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಎಂದು ಹೇಳಿದ್ದಾರೆ. ಎರಡನೇ ಆಯ್ಕೆ ಎಡಪ್ಪಾಡಿ ಪಳನಿಸ್ವಾಮಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಡಿಎಂಕೆ ಪಕ್ಷದ ಪ್ರಾಯೋಜಿತ ಸಮೀಕ್ಷೆ ಎಂದು ಭಾವಿಸಿದರೂ, ಯಾವುದೇ ಪಕ್ಷ ನಡೆಸುವ ಸಮೀಕ್ಷೆಯ ವರದಿಯನ್ನು ತೀರಾ ತಮ್ಮ ಪಕ್ಷದ ಪರವಾಗಿ ವೈಭವೀಕರಿಸಿಕೊಳ್ಳುವುದಿಲ್ಲ ಎನ್ನುವುದು ಕೂಡ ಇಲ್ಲಿ ಮುಖ್ಯ.

ಎಂಕೆ ಸ್ಟಾಲಿನ್ – ಶೇ. 44
ಎಡಪ್ಪಾಡಿ ಪಳನಿಸ್ವಾಮಿ – ಶೇ. 28
ವಿಜಯ್ – ಶೇ. 24
ಸೀಮನ್ – ಶೇ. 3
ಇತರರು – ಶೇ. 1

1 66

ಡಿಎಂಕೆ ಸರ್ಕಾರದ ಆಡಳಿತ ತೃಪ್ತಿ ತಂದಿದೆಯೇ?
ಅತ್ಯುತ್ತಮ – ಶೇ. 30
ಉತ್ತಮ – ಶೇ. 20
ಸಾಧಾರಣ – ಶೇ. 25
ಕಳಪೆ – ಶೇ. 15
ತೀರಾ ಕಳಪೆ – ಶೇ. 10

2 51

ಯಾವ ಮೈತ್ರಿಕೂಟಕ್ಕೆ ಎಷ್ಟು ಸ್ಥಾನ ?

234 ವಿಧಾನಸಭಾ ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ 118 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಡಿಎಂಕೆ ಮೈತ್ರಿಕೂಟ ನಿರಾಯಾಸವಾಗಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎನ್ನುವುದನ್ನು ಈ ಸಮೀಕ್ಷೆಯ ವರದಿ ಹೇಳುತ್ತದೆ. ಡಿಎಂಕೆ ಮೈತ್ರಿಕೂಟ 159 – 165 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದರೆ, NDA ಮೈತ್ರಿಕೂಟ 64 – 70 ಕ್ಷೇತ್ರಗಳನ್ನು, ಟಿವಿಕೆ 04 – 06 ಕ್ಷೇತ್ರಗಳನ್ನು ಎನ್‌ಟಿಕೆ ಶೂನ್ಯ ಸಂಪಾದಿಸಲಿದೆ ಎಂದು ಹೇಳಿದೆ.

3 40

ಒಟ್ಟಿನಲ್ಲಿ, ಅಂತಿಮ ಹಂತದಲ್ಲಿ ಇದು ಅಡಿಮೇಲಾಗಲೂಬಹುದು ಅಥವಾ ಈ ಅಂದಾಜನ್ನು ಮೀರಿ ಫಲಿತಾಂಶ ಹೊರಬಹುದು. ಕೊನೆಯ ಹಂತದದಲ್ಲಿ ಪಕ್ಷಗಳು ನಡೆಸುವ ರಾಜಕೀಯ ಕಾರ್ಯತಂತ್ರಗಳು ಮತದಾನದ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 12 ಜಿಲ್ಲೆಗಳಲ್ಲಿ ಅಕ್ಟೋಬರ್ 22ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಎದುರಾಗಿದ್ದರೂ, ಹಿಂಗಾರು ಮಳೆಯ ಅಬ್ಬರ...

ಯಾದಗಿರಿ ಜಿಲ್ಲೆಯಲ್ಲಿ 8 ಅನಧಿಕೃತ ಕ್ಲಿನಿಕ್‌ಗಳು ಬಂದ್, ಪ್ರಕರಣ ದಾಖಲು

ವೈದ್ಯಕೀಯ ಪದವಿ ಪಡೆಯದೆ ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ)...

ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ: ಸಾಕ್ಷ್ಯ ಸಂಗ್ರಹಕ್ಕೆ ಸುಪ್ರೀಂ ಕೋರ್ಟ್ ಸಮಿತಿಯಿಂದ ವಿಶೇಷ ಪೋರ್ಟಲ್

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆ ವೇಳೆ ಪೆಲೆಟ್...