2024ರ ಲೋಕಸಭಾ ಚುನಾವಣೆಯ ಅಂಚೆ ಮತಎಣಿಕೆ ಆರಂಭವಾಗಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಮತ ಎಣಿಕೆ ಆರಂಭವಾಗಿದೆ. ಆದರೆ, ವಿಚಿತ್ರ ಸಂಗತಿ ಎಂದರೆ, ವಿಜಯಪುರದಲ್ಲಿ ಅಧಿಕಾರಿಯೊಬ್ಬರು ಸ್ಟ್ರಾಂಗ್ ರೂಮ್ ಬೀಗದ ಕೀ ಮನೆಯಲ್ಲಿಯೇ ಬಿಟ್ಟು ಸ್ಟಾಂಗ್ ರೂಮ್‌ಗೆ ಬಂದ ಘಟನೆ ನಡೆದಿದೆ.
ಹೌದು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಶರೀಫ್ ಅವರು ಸ್ಟ್ರಾಂಗ್ ರೂಮ್ ಬೀಗದ ಕೈ ಮನೆಯಲ್ಲಿಯೇ ಬಿಟ್ಟು ಬಂದಿದ್ದಾರೆ. ಸ್ಟ್ರಾಂಗ್ ರೂಮ್ ತೆರಯಲು ಬಂದಾಗ ಕೀ ಮನೆಯಲ್ಲಿ ಬಿಟ್ಟು ಬಂದಿರುವುದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಜೆಪಿ ಭದ್ರಕೋಟೆಗಳನ್ನು ಬೇಧಿಸುವುದೇ ಕಾಂಗ್ರೆಸ್
ತಕ್ಷಣವೇ ಮನೆಗೆ ತೆರಳಿದ ಅಧಿಕಾರಿ ಕೀ ತಂದು ಬಳಿಕ ಸ್ಟ್ರಾಂಗ್ ರೂಮ್ ಓಪನ್ ಮಾಡಿದ್ದಾರೆ. ಅಧಿಕಾರಿಯ ಮರೆವಿನಿಂದ ಸ್ಟ್ರಾಂಗ್ ರೂಮ್ ತೆರೆಯುವುದು ಸ್ವಲ್ಪ ತಡವಾಯಿತು.