ವಿಜಯಪುರ | ನಿಲ್ಲದ ಬಸ್‌ಗಳು; ರಸ್ತೆಯಲ್ಲೇ ಧರಣಿ ಕುಳಿತು ಪ್ರತಿಭಟಿಸಿದ ವಿದ್ಯಾರ್ಥಿಗಳು

Date:

Advertisements

ಸಕಾಲಕ್ಕೆ ಶಾಲೆಗೆ ತೆರಳಲು ಆಗಮಿಸುವ ಬಸ್‌ಗಳು ನಿಲುಗಡೆ ಕೊಡುತ್ತಿಲ್ಲ ಎಂದು ಆರೋಪಿಸಿ ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ವೀರೇಶ ನಗರದಲ್ಲಿ ವಿದ್ಯಾರ್ಥಿಗಳು ವಾಹನಗಳನ್ನು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.

ಗಡಿಭಾಗದ ನಾಲತವಾಡ ಪಟ್ಟಣಕ್ಕೆ ನಿತ್ಯ ಆರೇಶಂಕರ, ನಾಗಬೇನಾಳ, ಸಿದ್ದಾಪೂರ ಡ್ಯಾಮ್, ವೀರೇಶ್ ನಗರ ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುತ್ತಾರೆ. ಶಾಲೆಯ ಸಮಯಕ್ಕೆ ತಲುಪುವುದು ಕಷ್ಟವಾಗಿದೆ ಎಂದ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಲಿಂಗಸುಗೂರು ಸೇರಿದಂತೆ ಇತರೆ ಘಟಕಗಳ ಬಸ್‌ಗಳೇ ನಮಗೆ ಆಸರೆಯಾಗಿವೆ. ಆದರೆ ಸ್ವಘಟಕ ಮುದ್ದೇಬಿಹಾಳ ಮೂಲಕ ಬಸ್‌ಗಳ ಸೌಕರ್ಯ ಕಲ್ಪಿಸುತ್ತಿಲ್ಲ. ಬರೀ ಪ್ರತಿಭಟನೆ ಮಾಡುವುದೇ ಆಗಿದೆ. ಗಡಿರಾಜ್ಯದ ಸಂಪರ್ಕ ಹೊಂದಿದ ನಮ್ಮ ಗ್ರಾಮಕ್ಕೆ ಬಸ್‌ಗಳು ಓಡುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

Advertisements

ಬಸ್ 2 1

“ಹಿಂದಿನಿಂದಲೂ ಸಾರಿಗೆ ಬಸ್‌ಗಳ ಸಮಸ್ಯೆ ತಪ್ಪಿಲ್ಲ. ಇತ್ತೀಚೆಗೆ ಜಾರಿಯಾದ ಶಕ್ತಿ ಯೋಜನೆಯಿಂದ ಬಸ್‌ಗಳು ಪ್ರಯಾಣಕರಿಂದ ತುಂಬಿಕೊಂಡೇ ಬರುತ್ತಿವೆ. ಹೀಗಾಗಿ ಚಾಲಕರು ಬಸ್‌ಗಳನ್ನು ನಿಲ್ಲಿಸದೇ ವೇಗವಾಗಿ ತೆರಳುತ್ತಾರೆ. ನಮ್ಮ ಗತಿ ಏನು? ನಾವು ಶಾಲೆಗೆ ತೆರಳಬೇಡವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

ಪ್ರೌಢಶಾಲೆ ನಿರ್ಮಾಣಕ್ಕೆ ಆಗ್ರಹ

ನಾಲತವಾಡ ಪಟ್ಟಣದ ಪ್ರೌಢಶಾಲೆ ಹಾಗೂ ಕಾಲೇಜಿಗೆ ನಿತ್ಯ ಹೋಗುವ ತಾಪತ್ರೆಯ ತಪ್ಪಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಸ್ಥಳಕ್ಕೆ ಹೋಗಿ ಕಲಿಯಬೇಕಿದೆ. ವೀರೇಶ ನಗರದಲ್ಲಿ ಶೀಘ್ರವೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭಿಸಿ, ನಿತ್ಯ ಬಸ್‌ಗೆ ಕಾಯುವ ಸಂಕಷ್ಟ ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಧರಣಿಯ ವೇಳೆ ಶಿವಾನಂದ ಗೌಂಡಿ, ಸಂಗಯ್ಯ ಡಂಬಳ, ಸಂಗಪ್ಪ ಉಂಡಿ, ಬಸವರಾಜ ಕೋಟೆಗುಡ್ಡ, ಚನ್ನಪ್ಪ ಗುರಿಕಾರ. ಚೆನ್ನಪ್ಪ ಕೋಳೂರ, ಭೀಮಣ್ಣ ಗುರಿಕಾರ, ಬಸಪ್ಪ ಹಾವಲ್ದಾರ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X