ದಾವಣಗೆರೆ | ಜ್ವರದಿಂದ ವಿದ್ಯಾರ್ಥಿನಿ ಸಾವು: ಡೆಂಘೀ ಶಂಕೆ; ಆರೋಗ್ಯಾಧಿಕಾರಿಗಳ ವಿರುದ್ಧ ಜನರ ಆಕ್ರೋಶ

Date:

ರಾಜ್ಯಾದ್ಯಂತ  ಡೆಂಘೀ ಜ್ವರ ಸಂಕ್ರಾಮಿಕವಾಗಿ ಹರಡುತ್ತಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಈ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಂಡು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಪದೇ ಪದೇ ಮರುಕಳಿಸುತ್ತಿರುವ ಡೆಂಘೀ ಪ್ರಕರಣಗಳು ಮತ್ತು ಶಂಕಿತ ಡೆಂಘೀ ಜ್ವರದ ಸಾವಿನ ಪ್ರಕರಣಗಳು ಜಿಲ್ಲಾ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತು ನಿರ್ಲಕ್ಷ ವಹಿಸುತ್ತಿದೆಯೇ ಎನ್ನುವ ಅನುಮಾನವನ್ನು ಮೂಡಿಸುತ್ತಿದೆ.

- Advertisement -

ಕಳೆದ ತಿಂಗಳು ಹೊನ್ನಾಳಿಯ ಓರ್ವ ಮತ್ತು ದಾವಣಗೆರೆಯ ಓರ್ವ ಯುವಕ ಸೇರಿದಂತೆ ಡೆಂಘೀನಿಂದ ಮೃತಪಟ್ಟ ಪ್ರಕರಣಗಳು ವರದಿಯಾಗಿದ್ದವು. ಇದರ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿತ್ತು. ಆದರೀಗ ಜಗಳೂರಿನಲ್ಲಿ ಶಂಕಿತ ಡೆಂಘೀ ಜ್ವರದಿಂದ ಓರ್ವ ಯುವತಿ ಸಾವನ್ನಪ್ಪಿರುವುದು ಆರೋಗ್ಯ ಇಲಾಖೆಯ ಕ್ರಮವನ್ನು ಪ್ರಶ್ನಿಸುವಂತೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಗಳೂರಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಶಿಥಿಲ ಕಟ್ಟಡವನ್ನು ಪರಿಶೀಲಿಸಿ ಶೀಘ್ರ ನೂತನ ಕಟ್ಟಡವನ್ನು ಒದಗಿಸುವುದಾಗಿ ಭರವಸೆ ನೀಡಿ, ಡೆಂಘೀ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ತಾಲೂಕು ಆರೋಗ್ಯ ಇಲಾಖೆ, ವೈದ್ಯಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದರು.

ಡೆಂಘೀ ಪ್ರಕರಣಗಳ ಬಗ್ಗೆ ಮುಂಜಾಗ್ರತೆ ವಹಿಸಲು ಶಾಸಕ.ಬಿ.ದೇವೇಂದ್ರಪ್ಪ ಅವರು ಪ್ರತ್ಯೇಕ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರೂ ಸಹ, ತಾಲೂಕು ಆರೋಗ್ಯಾಧಿಕಾರಿ ಮಾತ್ರ ಪಟ್ಟಣದಲ್ಲಿನ ಜ್ವರದ ಪ್ರಕರಣಗಳ ಬಗ್ಗೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಮತ್ತೊಮ್ಮೆ ಡೆಂಘೀನಿಂದ ಜಗಳೂರು ನಗರದ ಭುವನೇಶ್ವರಿ ವೃತ್ತದ ಬಳಿಯಿರುವ ನಾಗರಾಜ್ ಎಂಬುವವರ ಪುತ್ರಿ ಕಾಲೇಜು ವಿದ್ಯಾರ್ಥಿನಿ ರೇಖಾ (19) ಮೃತಪಟ್ಟಿರುವುದು ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದೆ.

ಈ ಬಗ್ಗೆ ಡೆಂಘೀ ತಡೆಗಟ್ಟಲು ಸೂಕ್ತ ಕ್ರಮ ವಹಿಸದ ತಾಲೂಕು ಆರೋಗ್ಯ ಇಲಾಖೆಯ ಬಗ್ಗೆ ಕಿಡಿಕಾರುತ್ತಿರುವ ಸಾರ್ವಜನಿಕರು, ಪೋಷಕರು ಮತ್ತು ನಗರದ ಜನತೆ ಸೂಕ್ತ ಕ್ರಮ ಕೈಗೊಂಡಿದ್ದರೆ, ಈ ಸಾವನ್ನು ತಪ್ಪಿಸಬಹುದು ಮತ್ತು ಡೆಂಘೀ ಭೀತಿ ಪ್ರಕರಣಗಳು ವರದಿಯಾಗದಂತೆ ತಡೆಯಬಹುದಿತ್ತು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಆರೋಗ್ಯ ಇಲಾಖೆಯ ನಿರ್ದೇಶನದಂತೆ ಮನೆ ಮನೆಗೆ ತೆರಳಿ ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆಮನೆಗೆ ತೆರಳಿ ಸಮೀಕ್ಷೆ, ಲಾರ್ವಾ ಸರ್ವೆ, ಮಾಹಿತಿ ಪಡೆದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ನೆರೆಹೊರೆಯ ಕುಟುಂಬದವರು ಹಾಗೂ ಸಾರ್ವಜನಿಕರು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವಾರದಿಂದ ಜ್ವರದಿಂದ ಬಳಲುತ್ತಿದ್ದ ರೇಖಾ ವಿವಾಹ ಕಾರ್ಯಕ್ರಮಕ್ಕೆ ಬಳ್ಳಾರಿಗೆ ತೆರಳಿದಾಗ ಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಆರೋಗ್ಯ ಇಲಾಖೆ ಮಾಡಿದ ನಿರ್ಲಕ್ಷ್ಯದ ತಪ್ಪಿಗೆ ಕಾಲೇಜು ವಿದ್ಯಾರ್ಥಿನಿ ಯುವತಿ ಡೆಂಘೀ ಶಂಕಿತ ಮಹಾಮಾರಿಗೆ ಬಲಿಯಾಗಿರುವುದು ನಿಜಕ್ಕೂ ಪಟ್ಟಣದಲ್ಲಿ ಆತಂಕ ಹೆಚ್ಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ರಾಜ್ಯದ ಅಭಿವೃದ್ಧಿಗೆ ತುಳುನಾಡಿನ ಕೊಡುಗೆ ಮಹತ್ವದ್ದು : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಜನರನ್ನು ತಲುಪಲು ಆಯಾ ಪ್ರದೇಶದ ಭಾಷೆಯನ್ನು ಕಲಿಯುವುದು ಅತ್ಯಂತ ಅಗತ್ಯ. ತುಳು...

ಉಡುಪಿ | ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ಕೋರ್ಟ್ ಅನುಮತಿ

ಕಳೆದ ರಾತ್ರಿ ಮಲ್ಪೆಯ ನೆರ್ಗಿಯಲ್ಲಿ ನಿಧನರಾದ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ...

ಬಾಗೇಪಲ್ಲಿ | ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡದಿದ್ದರೆ ನ.16ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಹೋರಾಟ

ಅಕ್ಷರ ದಾಸೋಹ ಕಾರ್ಯಕರ್ತೆಯರ ಬದುಕಿಗೆ ಮಾರಕವಾಗಿರುವ ಕ್ಲಸ್ಟರ್ ಕಿಚನ್ ಯೋಜನೆಯನ್ನು ರಾಜ್ಯ...