ಕಾಡಂಚಿನ ಗ್ರಾಮಗಳಲ್ಲಿ ಬೆಳೆನಾಶ ಮಾಡಿ ರೈತರ ನಿದ್ರೆಗೆಡಿಸಿದ್ದ ಪುಂಡಾನೆಯನ್ನು ಬಂಡೀಪುರ ಅರಣ್ಯ ಇಲಾಖೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಲೊಕ್ಕೆರೆ ಅರಣ್ಯ ಪ್ರದೇಶದಲ್ಲಿ ಪುಂಡಾನೆಯನ್ನು ಜಯಪ್ರಕಾಶ್, ಪಾರ್ಥಸಾರಥಿ, ಗಜೇಂದ್ರ, ಹರ್ಷ ಎಂಬ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ. ಕುಂದಕೆರೆ ಅರಣ್ಯ ವಲಯದ ಕೃಷಿ ಜಮೀನುಗಳಲ್ಲಿ ನಿತ್ಯವೂ ಈ ಪುಂಡಾನೆ ಬೆಳೆ ನಾಶ ಮಾಡುತ್ತಿತ್ತು.
ರೋಸಿಹೋದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಬಂಡೀಪುರ ಸಿಬ್ಬಂದಿ ನಾಲ್ಕು ದಿನಗಳಿಂದ ಆನೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದರು. ಕಾಡಾನೆ ಇರುವಿಕೆಯನ್ನು ಡ್ರೋಣ್ ಕ್ಯಾಮೆರಾ ಬಳಸಿ ಪತ್ತೆಮಾಡಲಾಗಿತ್ತು.
ಸೆರೆ ಸಿಕ್ಕ ಅಂದಾಜು 35 ವರ್ಷ ವಯಸ್ಸಿನ ಕಟ್ಟುಮಸ್ತಾದ ಒಂಟಿ ಸಲಗವನ್ನು ರಾಮಪುರ ಅರಣ್ಯ ಶಿಬಿರಕ್ಕೆ ರವಾನೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ʼಬಿಪರ್‌ಜಾಯ್ʼ ಚಂಡಮಾರುತ ಆರಂಭ; ರಾಜ್ಯದಲ್ಲಿ ಮುಂಗಾರು ವಿಳಂಬ