ಚಾಮರಾಜನಗರ | ಕಾಡಂಚಿನ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

Date:

ಕಾಡಂಚಿನ ಗ್ರಾಮಗಳಲ್ಲಿ ಬೆಳೆನಾಶ ಮಾಡಿ ರೈತರ ನಿದ್ರೆಗೆಡಿಸಿದ್ದ ಪುಂಡಾನೆಯನ್ನು ಬಂಡೀಪುರ ಅರಣ್ಯ ಇಲಾಖೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ‌ ಲೊಕ್ಕೆರೆ ಅರಣ್ಯ ಪ್ರದೇಶದಲ್ಲಿ ಪುಂಡಾನೆಯನ್ನು ಜಯಪ್ರಕಾಶ್, ಪಾರ್ಥಸಾರಥಿ, ಗಜೇಂದ್ರ, ಹರ್ಷ ಎಂಬ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ. ಕುಂದಕೆರೆ ಅರಣ್ಯ ವಲಯದ ಕೃಷಿ ಜಮೀನುಗಳಲ್ಲಿ ನಿತ್ಯವೂ ಈ ಪುಂಡಾನೆ ಬೆಳೆ ನಾಶ ಮಾಡುತ್ತಿತ್ತು.

ರೋಸಿಹೋದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಬಂಡೀಪುರ‌ ಸಿಬ್ಬಂದಿ ನಾಲ್ಕು ದಿನಗಳಿಂದ ಆನೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದರು. ಕಾಡಾನೆ ಇರುವಿಕೆಯನ್ನು ಡ್ರೋಣ್‌ ಕ್ಯಾಮೆರಾ ಬಳಸಿ ಪತ್ತೆಮಾಡಲಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೆರೆ ಸಿಕ್ಕ ಅಂದಾಜು 35 ವರ್ಷ ವಯಸ್ಸಿನ ಕಟ್ಟುಮಸ್ತಾದ ಒಂಟಿ ಸಲಗವನ್ನು ರಾಮಪುರ ಅರಣ್ಯ ಶಿಬಿರಕ್ಕೆ ರವಾನೆ ಮಾಡಲಾಯಿತು.

ಈ ಸುದ್ದಿ ಓದಿದ್ದೀರಾ? ʼಬಿಪರ್‌ಜಾಯ್ʼ ಚಂಡಮಾರುತ ಆರಂಭ; ರಾಜ್ಯದಲ್ಲಿ ಮುಂಗಾರು ವಿಳಂಬ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ಜೂನ್ 4ರಂದು ಬೆಂಗಳೂರು ಪೊಲೀಸ್...

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ...

ಬೆಂಗಳೂರು | ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್‌ ಕೆಜಿಗೆ ₹220

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಜನರು...

ಬೇಸಿಗೆ ವಿಶೇಷ | ಬೆಂಗಳೂರು-ಕಲಬುರಗಿ ಎಕ್ಸ್ ಪ್ರೆಸ್ ರೈಲು ರದ್ದು

ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ...