ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶವ್ಯಾಪಿ ಕರೆಯಾದ ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ಹೋರಾಟದ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಯಾದಗಿರಿಯಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಯಾದಗಿರಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಹಯೋಗದೊಂದಿಗೆ ಕಂಪನಿಗಳ ಭೂತ ದಹನ ಕಾರ್ಯಕ್ರಮವನ್ನು ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಹಮ್ಮಿಕೊಳ್ಳಲಾಯಿತು.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಜಾರಿಗೊಳಿಸಲು, ರೈತ ವಿರೋಧಿ ವಿದ್ಯುತ್ ಖಾಸಗೀಕರಣಗೊಳಿಸುವ ವಿದ್ಯುತ್ ಮಸೂದೆ ಕಾಯ್ದೆ ಹಿಂಪಡೆಯಲು, ಕಾರ್ಮಿಕ ವಿರೋಧಿ- ಕಾರ್ಪೋರೇಟ್‌ಪರ ಕಾರ್ಮಿಕ ಸಂಹಿತೆ ಹಿಂಪಡೆಲು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಲು, ಗುತ್ತಿಗೆ-ಹೊರಗುತ್ತಿಗೆ ಹಾಗು ಸ್ಕಿಮ್ ಕಾರ್ಯಕರ್ತೆಯರನ್ನು ಖಾಯಂಗೊಳಿಸಲು ಮತ್ತು ಬೆಲೆ ಏರಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ರಾಮಲಿಂಗಪ್ಪ ಬಿ.ಎನ್, ಚನ್ನಾಪ್ಪ ಆನೆಗುಂದಿ, ಶರಣಗೌಡ ಗೂಗಲ್, ಶರಣು ಮಂದ್ರವಾಡ, ದವಲಸಾಬ್ ನದಾಫ್, ಡಿ. ಉಮಾದೇವಿ, ಜೈಲಾಲ್ ತೋಟದಮನಿ ಇನ್ನಿತರರು ಉಪಸ್ಥಿತರಿದ್ದರು.
