ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯ ಲೋಪ ಆರೋಪದಡಿ ಕಂದಾಯ ಇಲಾಖೆ ಎಂಟು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಸಭೆಗೆ ಗೈರು ಹಾಜರಿ, ಕೆಲಸದಲ್ಲಿ ಪ್ರಗತಿ ಸಾಧಿಸದೇ ಇರುವುದು ಸೇರಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಎಂಟು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಆದೇಶ ಹೊರಡಿಸಿದ್ದಾರೆ.
ನಾಲ್ವರು ಮಂದಿ ಗ್ರಾಮ ಆಡಳಿತಾಧಿಕಾರಿಗಳಾದ ಶ್ರೀಮಂತ, ಬಸವರಾಜ್, ಇಮ್ಯಾನುವೆಲ್, ಸಿದ್ದಲಿಂಗಪ್ಪ ಮತ್ತು ಕಂದಾಯ ನಿರೀಕ್ಷರಾದ ಗಿರೀಶ್ ರಾಯಕೋಟಿ, ಬಸವರಾಜ್ ಬಿದಾರಾರ ಹಾಗೂ ಯಾದಗಿರಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ಡಿಎ ಸೂಗುರೇಶ್, ಎಫ್ಡಿಎ ಮಹೇಶ್ ಅಮಾನತುಗೊಂಡಿದ್ದಾರೆ.